logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

idyllist
ನಾಮವಾಚಕ
ಗ್ರಾಮೀಣ ವರ್ಣನ ಕವಿ; ಮುಖ್ಯವಾಗಿ ಹಳ್ಳಿ ಜೀವನದ ರಮ್ಯ ದೃಶ್ಯವನ್ನು ಯಾ ಘಟನೆಯನ್ನು ವರ್ಣಿಸುವ ಕವಿ.

idyllize
ಸಕರ್ಮಕ ಕ್ರಿಯಾಪದ
  • ಗ್ರಾಮೀಣ ಕವನದ ಶೈಲಿಯಲ್ಲಿ-ಚಿತ್ರಿಸು, ವರ್ಣಿಸು, ನಿರೂಪಿಸು.
  • ಸಹಜ ಸರಳ ಸೊಬಗಿನಿಂದ ರಮ್ಯವಾಗಿಸು.

  • IEE
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) Institution of Electrical Engineers.

    if
    ಸಂಯೋಜಕಾವ್ಯಯ ಪದಗುಚ್ಛ
  • -ರೆ; -ಇದ್ದರೆ; -ಇದ್ದಲ್ಲಿ; -ಆದಲ್ಲಿ; -ಪಕ್ಷಕ್ಕೆ; -ಪಕ್ಷದಲ್ಲಿ: if you are tired ನೀನು ಬಳಲಿದ್ದರೆ. if you (hereafter) see him, give him the message ಅವನು ನಿನಗೆ (ಮುಂದೆ) ಸಿಕ್ಕರೆ ಈ ಸುದ್ದಿ ಕೊಡು.
  • (ಅಸಂಭವವಾದ ಸಂದರ್ಭವನ್ನು ಸೂಚಿಸುವಲ್ಲಿ ಯಾವುದೇ ಧಾತುವಿನ ಭೂತರೂಪದೊಡನೆ) – ಒಂದು ವೇಳೆ ಆದರೆ, ಇದ್ದರೆ, ನಡೆದರೆ: if I were you ನಾನೇ ನೀನಾಗಿದ್ದಿದ್ದರೆ; ನಿನ್ನ ಸ್ಥಾನದಲ್ಲಿ ಯಾ ಸ್ಥಿತಿಯಲ್ಲಿ ನಾನು ಇದ್ದಿದ್ದರೆ. if he came tomorrow ನಾಳೆ ಅವನು ಒಂದು ವೇಳೆ ಬಂದರೆ.
  • ಯಾವಾಗ; ಎಂದಾದರೂ; ಯಾವಾಗಲಾದರೂ: if I feel any doubt ಯಾವಾಗಲಾದರೂ ನನಗೆ ಸಂಶಯ ಬಂದರೆ.
  • -ಯೋ; -ಯೇ; -ವುದೇ; ಸಾಧ್ಯವೇ: see if you can turn the handle ಹಿಡಿಯನ್ನು ತಿರುಗಿಸಲು ನಿನಗೆ ಆಗುತ್ತದೆಯೇ ನೋಡು.
    1. if ಪದವನ್ನು ಬಿಟ್ಟುಬಿಟ್ಟಾಗ ಕ್ರಿಯಾಪದವು ಕರ್ತೃ ಪದಕ್ಕೆ ಮೊದಲೇ ಬರುತ್ತದೆ, ಉದಾಹರಣೆಗೆ: were in your place (= if I were in your place). would, could, should, might, had he (= if he would, could, should, might, had).
    2. (ಕಾವ್ಯಪ್ರಯೋಗ) loved I not honour more = if I loved not honour more.
  • (ಬಯಕೆ, ಆಶ್ಚರ್ಯ, ಮೊದಲಾದವುಗಳ ಉದ್ಗಾರಗಳಲ್ಲಿ ವಾಕ್ಯದ ಅನುಗತ ಭಾಗವಿಲ್ಲದೆ): if I only knew! ನನಗೆ ತಿಳಿದಿದ್ದರೆ (ಎಷ್ಟು ಚೆನ್ನಾಗಿತ್ತು)! if I haven’t lost my watch! ನನ್ನ ಗಡಿಯಾರವನ್ನು ನಾನು ಕಳೆದುಕೊಳ್ಳದಿದ್ದರೆ! (ಕಳೆದುಕೊಂಡೆನಲ್ಲಾ ಎಂಬ ಆಶ್ಚರ್ಯದ ಯಾ ಬೇಸರದ ಧ್ವನಿ).
  • (ವಿನಯದಿಂದ ಬೇಡುವಾಗ) if you wouldn’t mind opening the door? ನೀನು ಏನೂ ತಿಳಿದುಕೊಳ್ಳದಿದ್ದರೆ ದಯಮಾಡಿ ಬಾಗಿಲು ತೆಗೆಯುವೆಯಾ?
  • ಆದರೂ; ಹಾಗಿದ್ದರೂ; ಆದಾಗ್ಯೂ: a useful if cumbersome device ತೊಡಕಿನದಾದರೂ ಉಪಯುಕ್ತ ಸಲಕರಣೆ.

  • if
    ನಾಮವಾಚಕ
    -ರೆ; ಸಂದರ್ಭ; ಎಣಿಕೆ; ಊಹೆ; ಆದರೆ: if ifs and ans were pots and pans ಆದರೆ ಗೀದರೆಗಳೆಲ್ಲ ಕುಡಿಕೆ ಕಾವಲಿಗಳಾಗಿದ್ದಿದ್ದರೆ; ಎಣಿಕೆ ಬಯಕೆಗಳೇನೇ ಚವರಿಗೆ ತಳಿಗೆಗಳಾಗಿದ್ದಿದ್ದರೆ. too many ifs about it ಅದರಲ್ಲಿ ತುಂಬ ಆದರೆ ಗೀದರೆಗಳಿವೆ.

    IF
    ಸಂಕ್ಷಿಪ್ತ
    intermediate frequency.

    IFC
    ಸಂಕ್ಷಿಪ್ತ
    International Finance Corporation.

    iffish
    ಗುಣವಾಚಕ
    ಸಂದಿಗ್ಧ; ಅನಿಶ್ಚಿತ; ಖಚಿತವಲ್ಲದ.

    iffy
    ಗುಣವಾಚಕ
    = iffish.

    Igbo
    ನಾಮವಾಚಕ
    Ibo ಪದದ ರೂಪಾಂತರ.


    logo