logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

echt
ಗುಣವಾಚಕ
  • ಸಪ್ರಮಾಣವಾದ; ಯಥಾರ್ಥವಾದ; ಪ್ರಾಮಾಣಿಕ.
  • ನಿಜವಾದ; ಸಾಚಾ.
  • ಮಾದರಿಯಾದ; ಸಾಮಾನ್ಯಲಕ್ಷಣದ.

  • eclair
    ನಾಮವಾಚಕ
    ಕೆನೆ ಮಿಠಾಯಿ; ಕಡ್ಡಿಮಿಠಾಯಿ; ಕ್ರೀಮ್‍ ಮತ್ತು ಸಕ್ಕರೆಪಾಕದಲ್ಲಿ ಮಾಡಿದ. ಮುಖ್ಯವಾಗಿ ಚಾಕಲೇಟನ್ನು ಸವರಿದ, ಸಣ್ಣ ಬೆರಳಿನಾಕಾರದ ಮಿಠಾಯಿ.

    eclaircissement
    ನಾಮವಾಚಕ
    (ಪ್ರಾಚೀನ ಪ್ರಯೋಗ) ಸ್ಟಷ್ಟೀಕರಣ; ಸಂಶಯ ನಿವಾರಣೆ; ಸಂದೇಹ ಪರಿಹಾರ; (ನಡತೆ ಮೊದಲಾದವುಗಳ ವಿಷಯದಲ್ಲಿ) ಸ್ಪಷ್ಟಪಡಿಸುವುದು; ಸಂಶಯ ಬಗೆಹರಿಸುವುದು.

    eclampsia
    ನಾಮವಾಚಕ
    (ರೋಗಶಾಸ್ತ್ರ) ಪ್ರಸವಾಪಸ್ಮಾರ; ಬಸಿರುನಂಜು; ರಕ್ತಕ್ಕೆ ನಂಜು ಸೇರುವುದರಿಂದ ಗರ್ಭಿಣಿಯರಿಗೆ (ಸಾಮಾನ್ಯವಾಗಿ ಹೆರಿಗೆ ಸಮಯದಲ್ಲಿ) ಬರುವ ಸೆಳವು ಮತ್ತು ಪ್ರಜ್ಞಾಹೀನತೆ.

    eclamptic
    ಗುಣವಾಚಕ
    (ರೋಗಶಾಸ್ತ್ರ) ಪ್ರಸವಾಪಸ್ಮಾರದ; ಪ್ರಸವಾಪಸ್ಮಾರ ಬಡಿದಿರುವ ಯಾ ಅದಕ್ಕೆ ಸಂಬಂಧಿಸಿದ.

    eclat
    ನಾಮವಾಚಕ ಪದಗುಚ್ಛ
    with great eclat
  • ಸ್ಪಷ್ಟಯಶಸ್ಸು; ಕಣ್ಣು ಕುಕ್ಕುವಂಥ ಸಫಲತೆ; ಜಯೋತ್ಕರ್ಷ.
  • ಲೋಕ ಪ್ರಶಂಸೆ.
  • ವೈಭವ; ಭರ್ಜರಿ ಪ್ರದರ್ಶನ.
  • ಮಾಜಿಕ ಗೌರವ; ಪ್ರಖ್ಯಾತಿ; ಘನತೆ; ಕೀರ್ತಿ; ಪ್ರತಿಷ್ಠೆ.

  • eclectic
    ಗುಣವಾಚಕ
  • (ತತ್ತ್ವಶಾಸ್ತ್ರ) ಸಾರಸಂಗ್ರಹಿಯಾದ; ಪ್ರತಿಯೊಂದು ಪಂಥದಿಂದಲೂ ತನಗೆ ಸರಿದೋರಿದ ತತ್ತ್ವಗಳನ್ನು ಆರಿಸಿಕೊಳ್ಳುವ.
  • (ವ್ಯಕ್ತಿ, ಸಿದ್ಧಾಂತದ ವಿಷಯದಲ್ಲಿ) ಸಾರಸಂಗ್ರಹಿಯಾದ; ವಿವಿಧ ಮೂಲಗಳಿಂದ ಸರಾಗವಾಗಿ ತೆಗೆದುಕೊಳ್ಳುವ.
  • (ಅಭಿಪ್ರಾಯ, ಅಭಿರುಚಿ, ಮೊದಲಾದವುಗಳಲ್ಲಿ) ವಿಶಾಲದೃಷ್ಟಿಯ; ವಿಶಾಲದಯದ; ಸಂಕುಚಿತ ಮನೋಭಾವವಿಲ್ಲದ; ಅಸಂಕುಚಿತಷ್ಟಿಯ; ವಿಶಾಲಮನೋಭಾವದ.

  • eclectic
    ನಾಮವಾಚಕ
  • (ತತ್ತ್ವಶಾಸ್ತ್ರ) ಸಾರಸಂಗ್ರಹಿ; (ಪ್ರತಿಯೊಂದು) ಪಂಥದಿಂದಲೂ ತನಗೆ ಸರಿದೋರಿದ ತತ್ತ್ವಗಳನ್ನು ಆರಿಸಿಕೊಳ್ಳುವವನು.
  • ಸಾರಸಂಗ್ರಹಿ; ವಿವಿಧ ಆಕರಗಳಿಂದ ಸರಾಗವಾಗಿ ತೆಗೆದುಕೊಳ್ಳುವ ಯಾ ಆಯ್ದುಕೊಳ್ಳುವ ವ್ಯಕ್ತಿ ಯಾ ಸಿದ್ಧಾಂತ.
  • ವಿಶಾಲಷ್ಟಿಯವನು; ವಿಶಾಲಮನೋಭಾವದವನು; ಅಭಿಪ್ರಾಯ, ಅಭಿರುಚಿ, ಮೊದಲಾದವುಗಳಲ್ಲಿ ಸಂಕೋಚಷ್ಟಿ ಇಲ್ಲದವನು.

  • eclecticalism
    ನಾಮವಾಚಕ
    ಸಾರಸಂಗ್ರಹತೆ; ಸಾರಸಂಗ್ರಹ — ಪದ್ಧತಿ, ಮನೋಭಾವ ಯಾ ವ್ಯವಹಾರ.

    eclectically
    ಕ್ರಿಯಾವಿಶೇಷಣ
  • ಸಾರಸಂಗ್ರಹಿಯಂತೆ.
  • ವಿಶಾಲದಯದಿಂದ.


  • logo