logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Dantean
ಗುಣವಾಚಕ
  • ಡಾಂಟೆಯ.
  • ಡಾಂಟೆ ಶೈಲಿಯ; ಆತನ ವರ್ಣನಾ ವಿಧಾನವನ್ನು ಹೋಲುವ ಯಾ ಅದಕ್ಕೆ ಸಂಬಂಧಿಸಿದ.

  • Dantesque
    ಗುಣವಾಚಕ
    ಡಾಂಟೆಯ; ಡಾಂಟೆಯಂಥ; ಡ್ಯಾಂಟೆ ರೀತಿಯ; ಡಾಂಟೆಯನ್ನು ಹೋಲುವ.

    danthonia
    ನಾಮವಾಚಕ
    (ಸಸ್ಯವಿಜ್ಞಾನ) (ಆಸ್ಟ್ರೇಲಿಯ ಮತ್ತು ನ್ಯೂಸೀಲಂಡ್‍) ಡ್ಯಾಂತೋನಿಯ; ಕುಚ್ಚಿನ ಮೇವು ಹುಲ್ಲು; ದನಗಳು ಮೇಯುವ, ಕುಚ್ಚು ಕುಚ್ಚಾಗಿರುವ ಹುಲ್ಲಿನ ಒಂದು ಕುಲ ಯಾ ಈ ಕುಲದ ಹುಲ್ಲು.

    Dantist
    ನಾಮವಾಚಕ
    = 1Dantean.

    dap
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಮೀನನ್ನು) ಎರೆ ತೇಲಿಸಿ ಹಿಡಿ.
  • (ಚೆಂಡನ್ನು ನೆಲದ ಮೇಲೆ) ಪುಟಿಸು; ಪುಟ ಹಾರಿಸು.
  • (ಕಲ್ಲನ್ನು ನೀರಿನ ಮೇಲೆ) ಚಿಮ್ಮಿಸು; ಪುಟಿಸು; ಪುಟಿಯುವಂತೆ ಮಾಡು.
  • (ಅಮೆರಿಕನ್‍ ಪ್ರಯೋಗ) (ಮರಗೆಲಸ) (ಮತ್ತೊಂದು ಭಾಗವನ್ನು ಜೋಡಿಸಲು ಮರವನ್ನು) ಕಚ್ಚುಮಾಡು; ಎರೆ ತೇಲಿಸು.

  • dap
    ನಾಮವಾಚಕ
  • (ಮುಖ್ಯವಾಗಿ ಚೆಂಡಿನ) ಪುಟಿತ; ಪುಟ ನೆಗೆತ.
  • (ಮೀನು ಹಿಡಿಯಲು ಬಳಸುವ) ತೇಲೆರೆ.
  • (ಇನ್ನೊಂದು ಭಾಗ ಜೋಡಿಸಲು ಮಾಡಿದ) ಮರದ ಕಚ್ಚು.

  • daphne
    ನಾಮವಾಚಕ
    ಡ್ಯಾಹ್ನಿ:
  • ಸುವಾಸನೆಯ ಹೂವು ಬಿಡುವ ಪೊದೆಗಿಡಗಳ ಒಂದು ಕುಲ.
  • ಲಾರೆಲ್‍ ಗಿಡ; ಡ್ಯಾಹ್ನಿ ಕುಲದ ಗಿಡ.

  • dapper
    ಗುಣವಾಚಕ
  • (ವ್ಯಕ್ತಿಯ ವಿಷಯದಲ್ಲಿ) (ಚಲನವಲನದಲ್ಲಿ ಯಾ ನೋಟಕ್ಕೆ) ನೀಟಾದ; ಠೀಕಾದ.
  • ಚುರುಕಾದ; ಚೂಟಿಯಾದ; ಚಟುವಟಿಕೆಯುಳ್ಳ; ಲವಲವಿಕೆಯ; ಗೆಲುವಿನಿಂದ ಕೂಡಿದ; ಉಲ್ಲಾಸದ.

  • dapple
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಶಬಲೀಕರಿಸು; ಬಣ್ಣ ಬಣ್ಣದ ಚುಕ್ಕೆಗಳನ್ನಿಡು; ಬೇರೆಬೇರೆ ಬಣ್ಣಗಳ ಬೊಟ್ಟು, ಚುಕ್ಕೆ, ಮಚ್ಚೆ, ಪಟ್ಟೆಗಳನ್ನು ಹಾಕಿ ವೈವಿಧ್ಯ ಕಲ್ಪಿಸು. ಶಬಲೀಕೃತವಾಗು; ಬಣ್ಣಬಣ್ಣದ ಚುಕ್ಕೆ, ಮಚ್ಚೆ, ಪಟ್ಟೆಗಳನ್ನು ಹೊಂದಿ ವರ್ಣಮಯವಾಗಿರು.

    dapple
    ನಾಮವಾಚಕ
  • ಶಬಲತೆ; ವರ್ಣವೈವಿಧ್ಯ; ಬಣ್ಣಬಣ್ಣದ ಚುಕ್ಕೆ, ಪಟ್ಟೆ, ಮಚ್ಚೆಗಳಿಂದ ಕೂಡಿರುವುದು.
  • ಚುಕ್ಕೆಚುಕ್ಕೆ ಮೈಯುಳ್ಳ ಕುದುರೆ ಮೊದಲಾದ ಪ್ರಾಣಿ.


  • logo