(ರೋಗಶಾಸ್ತ್ರ) ಕೇಸನ್ ರೋಗ; ಒತ್ತುಗಾಳಿರೋಗ; ಗಾಳಿಯೊತ್ತಡದ ರೋಗ; ನೀರಿನ ತಳದಲ್ಲಿ ಭಾರಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ನಂತರ ಮೇಲೆ ಬಂದಾಗ ಗಾಳಿಯ ಒತ್ತಡ ಸರಕ್ಕನೆ ಕಡಿಮೆಯಾಗುವುದರಿಂದ ಉಂಟಾಗುವ ಕಾಯಿಲೆ.
caitiff
ನಾಮವಾಚಕ
(ಪ್ರಾಚೀನ ಪ್ರಯೋಗ, ಕಾವ್ಯಪ್ರಯೋಗ)
ನೀಚ; ಅಧಮ; ಅಯೋಗ್ಯ; ತುಚ್ಛ; ಕ್ಷುದ್ರ(ವ್ಯಕ್ತಿ)
ಹೇಡಿ.
caitiff
ಗುಣವಾಚಕ
(ವ್ಯಕ್ತಿಯ ವಿಷಯದಲ್ಲಿ) ನೀಚ; ಅಧಮ; ಕ್ಷುದ್ರ.
ಹೇಡಿಯಾದ.
cajole
ಸಕರ್ಮಕ ಕ್ರಿಯಾಪದ
(ಹೊಗಳಿಕೆ, ಮುಖಸ್ತುತಿ, ಮೋಸ ಮೊದಲಾದವುಗಳಿಂದ, ಯಾವುದನ್ನೇ ಮಾಡಲು ಯಾ ಮಾಡದಿರಲು) ಪುಸಲಾಯಿಸು; ಮನವೊಪ್ಪಿಸು; ಮನವೊಲಿಸು; ಒಡಂಬಡಿಸು; ಒಲಿಸು; ಒಪ್ಪಿಸು.
(ವ್ಯಕ್ತಿಯಿಂದ ಯಾವುದನ್ನೇ) ಪುಸಲಾಯಿಸಿ ಯಾ ಒಲಿಸಿ-ಹೊರಗೆಳೆ, ಹೊರಡಿಸು.