logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

backyard
ನಾಮವಾಚಕ ನುಡಿಗಟ್ಟು
one’s own backyard ಒಬ್ಬನ – ಬಳಿಯಲ್ಲೇ, ಹತ್ತಿರದಲ್ಲೇ.
  • (ಮನೆಯ) ಹಿತ್ತಿಲು; ಹಿಂದಿನ ಅಂಗಳ.
  • (ರೂಪಕವಾಗಿ) ಹಿತ್ತಿಲು; ಮನುಷ್ಯನಿಗೋ, ಪ್ರಾಣಿಗೋ – ಇಷ್ಟವಾದ, ಸುಲಭವಾದ, ಹತ್ತಿರವಾದ ಜಾಗ.

  • bacon
    ನಾಮವಾಚಕ ನುಡಿಗಟ್ಟು
    ಹಂದಿಯ (ಬೆನ್ನಿನ ಮತ್ತು ಪಕ್ಕೆಯ) ಉಪ್ಪೂರಿಸಿ ಒಣಗಿಸಿದ ಬಾಡು, ಮಾಂಸ ಯಾ ಅದರ ತುಂಡು; ಹಂದಿ ಮಾಂಸ.
  • bring home the bacon
    1. (ಅಶಿಷ್ಟ) ಸಂಸಾರಕ್ಕೆ ತಂದುಹಾಕು; ಕುಟುಂಬಕ್ಕಾಗಿ ಸಂಪಾದಿಸು.
    2. (ಆಡುಮಾತು) (ಯಾವುದೇ ಉದ್ಯಮದಲ್ಲಿ) ಸಫಲನಾಗು; ಜಯಶಾಲಿಯಾಗು; ಯಶಸ್ವಿಯಾಗು.
  • save one’s bacon ಸಾವಿನಿಂದ ಯಾ ಅಪಾಯದಿಂದ ಪಾರಾಗು.

  • Baconian
    ಗುಣವಾಚಕ
  • ಇಂಗ್ಲಂಡಿನ 16ನೇ ಶತಮಾನದ ತತ್ತ್ವಜ್ಞ ಹ್ರಾನ್ಸಿಸ್‍ ಬೇಕನ್‍ನ ಯಾ ಆತನ ಸಿದ್ಧಾಂತದ.
  • (ವಿಜ್ಞಾನದಲ್ಲಿ, ಹ್ರಾನ್ಸಿಸ್‍ ಬೇಕನ್‍ನ) ಪ್ರಾಯೋಗಿಕ ವಿಧಾನದ ಯಾ ಅನುಗಮನ ಮಾರ್ಗದ.

  • Baconian
    ನಾಮವಾಚಕ
  • ಬೇಕನ್‍ನ ಅನುಯಾಯಿ.
  • ಷೇಕ್ಸ್‍ಪಿಯರನ ಹೆಸರಿನಲ್ಲಿರುವ ನಾಟಕಗಳನ್ನು ಬರೆದಾತ ಬೇಕನ್‍ ಎಂಬ ಅಭಿಪ್ರಾಯದವನು.

  • bacony
    ಗುಣವಾಚಕ
  • ಹಂದಿಬಾಡಿನಂಥ.
  • ಕೊಬ್ಬು ತುಂಬಿದ.

  • bacteria
    ನಾಮವಾಚಕ
    bacterium ಪದದ ಬಹುವಚನ.

    bacterial
    ಗುಣವಾಚಕ
    ಬ್ಯಾಕ್ಟೀರಿಯದ; ಬ್ಯಾಕ್ಟೀರಿಯಗಳಿಂದಾದ; ಬ್ಯಾಕ್ಟೀರಿಯಗಳಿಗೆ ಸಂಬಂಧಿಸಿದ ಯಾ ಅವುಗಳನ್ನು ಒಳಗೊಂಡಿರುವ.

    bacterian
    ಗುಣವಾಚಕ
    = bacterial.

    bacteric
    ಗುಣವಾಚಕ
    = bacterial.

    bactericidal
    ಗುಣವಾಚಕ
    ಬ್ಯಾಕ್ಟೀರಿಯ ಮಾರಕದ ಯಾ ಅದಕ್ಕೆ ಸಂಬಂಧಿಸಿದ; ಬ್ಯಾಕ್ಟೀರಿಯಗಳನ್ನು ನಾಶಮಾಡುವ.


    logo