logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

magnetic pole
ನಾಮವಾಚಕ
ಕಾಂತ ಧ್ರುವ:
  • ಭೂಮಿ ಯಾ ಇತರ ಖಾಗೋಳಿಕ ಕಾಯವೊಂದರ ಭ್ರಮಣಾಕ್ಷದ ಒಂದೊಂದು ತುದಿಯ ಬಳಿಯೂ ಇರುವ, ಕಾಂತಸೂಜಿಯು ಬಾಗಿ ಮೇಲ್ಮುಖನಾಗಿ ನಿಲ್ಲುವಂಥ, ಎರಡು ಬಿಂದುಗಳಲ್ಲಿ ಒಂದು.
  • ನೈಸರ್ಗಿಕ ಯಾ ಕೃತಕ ಅಯಸ್ಕಾಂತವೊಂದರ ಒಂದೊಂದು ತುದಿಯಲ್ಲೂ ಕಾಣಬರುವ, ಕಾಂತಬಲರೇಖೆಗಳು ಉಗಮವಾಗುವಂತೆ ಕಾಣಿಸುವ ಎರಡು ಬಿಂದುಗಳಲ್ಲಿ ಒಂದು.

  • magnetic storm
    ನಾಮವಾಚಕ
    ಕಾಂತೀಯ ಮಾರುತ; ಕಾಂತೀಯ ಕ್ಷೋಭೆ; ಸೌರಕಲೆಗಳ ಪ್ರಭಾವವೆಂದು ನಂಬಲಾಗಿರುವ, ಸೂರ್ಯನಿಂದ ಬರುವ ವಿದ್ಯುದಾವಿಷ್ಟ ಕಣಗಳಿಂದುಂಟಾಗುವ, ಭೂಕಾಂತ ಕ್ಷೇತ್ರದ ಏರುಪೇರು, ವ್ಯತ್ಯಾಸ.

    magnetic tape
    ನಾಮವಾಚಕ
    ಕಾಂತೀಯ ಟೇಪು, ಪಟ್ಟಿ, ಪಟ್ಟೆ; ಧ್ವನಿ ಯಾ ಚಿತ್ರಗಳನ್ನು ಮುದ್ರಿಸಲು (ರೆಕಾರ್ಡ್‍ ಮಾಡಲು), ಯಾ ಮಾಹಿತಿಯನ್ನು ಸಂಗ್ರಹಿಸಿಡಲು ಬಳಸುವ, ಕಾಂತೀಯ ವಸ್ತುವನ್ನು ಲೇಪಿಸಿರುವ ಟೇಪು.

    magnetically
    ಕ್ರಿಯಾವಿಶೇಷಣ
    ಕಾಂತೀಯವಾಗಿ; ಕಾಂತೀಯ ರೀತಿಯಲ್ಲಿ

    magnetics
    ನಾಮವಾಚಕ
    (ಬಹುವಚನ) ಕಾಂತಶಾಸ್ತ್ರ; ಕಾಂತತ್ವಕ್ಕೆ ಸಂಬಂಧಿಸಿದ ಭೌತ ವಿಜ್ಞಾನ ವಿಭಾಗ.

    magnetise
    ಸಕರ್ಮಕ ಕ್ರಿಯಾಪದ
    = magnetize.

    magnetism
    ನಾಮವಾಚಕ ಪದಗುಚ್ಛ
  • ಕಾಂತೀಯ ವಿದ್ಯಮಾನಗಳು.
  • ಕಾಂತತ್ವ; ಕಾಂತೀಯತೆ.
  • (ರೂಪಕವಾಗಿ) ಆಕರ್ಷಣೆ; ಆಕರ್ಷಣ ಶಕ್ತಿ; (ಒಬ್ಬನಲ್ಲಿರುವ) ಮೋಹಕಶಕ್ತಿ; ಮೋಡಿ.

  • magnetist
    ನಾಮವಾಚಕ
    ಕಾಂತಶಾಸ್ತ್ರಜ್ಞ; ಕಾಂತತ್ವವನ್ನು ಅಧ್ಯಯನ ಮಾಡಿದವ.

    magnetite
    ನಾಮವಾಚಕ
    ಮ್ಯಾಗ್ನಿಟೈಟ್‍; ಹೆರೋಸೋ ಹೆರಿಕ್‍ ಆಕ್ಸೈಡ್‍ ಸಂಯೋಜನೆಯುಳ್ಳ, ಕಾಂತೀಯ ಗುಣಗಳಿರುವ, ಒಂದು ಕಬ್ಬಿಣದ ಅದುರು.

    magnetizable
    ಗುಣವಾಚಕ
    ಕಾಂತೀಕರಿಸಬಹುದಾದ; ಸಾಮಾನ್ಯವಾಗಿ ಕಬ್ಬಿಣದ ವಸ್ತುವನ್ನು ಸೂಜಿಗಲ್ಲಾಗಿಸಬಹುದಾದ.


    logo