logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

idolatrously
ಕ್ರಿಯಾವಿಶೇಷಣ
  • ಮೂರ್ತಿಪೂಜೆಯಂತೆ; ಮೂರ್ತಿಪೂಜೆಯ ರೀತಿಯಲ್ಲಿ; ವಿಗ್ರಹಾರಾಧನೆಯ ವಿಧಾನದಲ್ಲಿ.
  • ಮಿಥ್ಯಾ ದೇವತೆಗಳನ್ನು ಆರಾಧಿಸುವಂತೆ.
  • ಆರಾಧಕನಂತೆ; ಅತ್ಯಭಿಮಾನಿಯಂತೆ; ಮಹಾಭಕ್ತನಂತೆ.

  • idolatry
    ನಾಮವಾಚಕ
  • ಮೂರ್ತಿಪೂಜೆ; ವಿಗ್ರಹಾರಾಧನೆ.
  • (ವ್ಯಕ್ತಿಯಲ್ಲಿ, ವಸ್ತುವಿನಲ್ಲಿ) ಗೌರವಾತಿರೇಕ; ಅತಿಭಕ್ತಿ; ಮಿತಿಈರಿದ ಅಭಿಮಾನ, ಪೂಜ್ಯಭಾವ: honour one on this side of idolatry (ದೇವರ ಮಟ್ಟಕ್ಕೇರಿಸುವುದೊಂದು ಬಿಟ್ಟು) (ವ್ಯಕ್ತಿಯನ್ನು) ಅತಿಯಾಗಿ ಗೌರವಿಸು.

  • idolise
    ಕ್ರಿಯಾಪದ
    = idolize.

    idolization
    ನಾಮವಾಚಕ
    (ಯಾರನ್ನೇ, ಯಾವುದನ್ನೇ) ದೇವರಂತೆ ಭಾವಿಸುವುದು; ಅತಿಯಾಗಿ – ಗೌರವಿಸುವುದು, ಪೂಜಿಸುವುದು; ಮಿತಿಈರಿ ಪ್ರೀತಿಸುವುದು: an idolization of childhood ಶಿಶುತ್ವವನ್ನು ದೇವರೆಂದು ಪೂಜಿಸುವುದು.

    idolize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ವ್ಯಕ್ತಿಯನ್ನು ವಸ್ತುವನ್ನು) ದೈವತ್ವಕ್ಕೇರಿಸು; ದೇವತೆಯನ್ನಾಗಿ ಭಾವಿಸು.
  • ಅತಿಯಾಗಿ – ಗೌರವಿಸು, ಪೂಜಿಸು; ಮಿತಿಈರಿ ಪ್ರೀತಿಸು: idolizing military or sports heroes ಸೇನಾ ಯಾ ಕ್ರೀಡಾವೀರರನ್ನು ದೈವತ್ವಕ್ಕೇರಿಸುವುದು, ಮಿತಿಈರಿ ಗೌರವಿಸುವುದು.

  • idolum
    ನಾಮವಾಚಕ
  • ಮನೋಬಿಂಬ; ಮನಶ್ಚಿತ್ರ; ವಾಸ್ತವವಲ್ಲದ ಮನಃಕಲ್ಪನೆ.
  • (ತರ್ಕಶಾಸ್ತ್ರ) ಮಿಥ್ಯಾಕಲ್ಪನೆ; ತರ್ಕದೋಷ; ಹೇತ್ವಾಭಾಸ: idola made by education, tradition, etc. ಶಿಕ್ಷಣ, ಸಂಪ್ರದಾಯ, ಮೊದಲಾದವು ಸೃಷ್ಟಿಸಿದ ಮಿಥ್ಯಾಕಲ್ಪನೆಗಳು.

  • idyl
    ನಾಮವಾಚಕ
    = idyll.

    idyll
    ನಾಮವಾಚಕ
  • ಹಳ್ಳಿಕವಿತೆ; ಗ್ರಾಈಣ ಕವನ; ಗ್ರಾಈಣ ವರ್ಣನ ಕಾವ್ಯ; ಮುಖ್ಯವಾಗಿ ಹಳ್ಳಿಯ ಜೀವನದ ಯಾವುದಾದರೂ ರಮ್ಯ ದೃಶ್ಯವನ್ನು ಯಾ ಘಟನೆಯನ್ನು ವರ್ಣಿಸುವ ಯಾ ನಿರೂಪಿಸುವ ಸಣ್ಣ ಗದ್ಯಭಾಗ ಯಾ ಪದ್ಯ.
  • ಗ್ರಾಈಣ ವರ್ಣನೆಗೆ ತಕ್ಕ ಪ್ರಸಂಗ, ಸಾಮಾನ್ಯವಾಗಿ ಪ್ರಣಯಕಥೆ.
  • (ದೀರ್ಘ) ಕಥನಕಾವ್ಯ.

  • idyllic
    ಗುಣವಾಚಕ
  • ಗ್ರಾಮೀಣ ಕವನಕ್ಕೆ ತಕ್ಕ ವಸ್ತುವುಳ್ಳ.
  • ಗ್ರಾಮೀಣ-ಕವನದ, ಕವನಕ್ಕೆ ಸಂಬಂಧಪಟ್ಟ ಯಾ ಕವನದ ಲಕ್ಷಣವುಳ್ಳ.
  • ಸಹಜ ಸುಂದರ; ಸಹಜವಾಗಿ, ಸರಳವಾಗಿ, ಮೋಹಕವಾಗಿ – ಇರುವ: idyllic memories of his boyhood ಅವನ ಬಾಲ್ಯದ ಸಹಜ ಸುಂದರ ಸ್ಮರಣೆಗಳು.

  • idyllically
    ಕ್ರಿಯಾವಿಶೇಷಣ
  • ಗ್ರಾಮೀಣ ಕವನದ ರೀತಿಯಲ್ಲಿ.
  • ಸಹಜ ಸರಳ ಸೊಬಗಿನಿಂದ.


  • logo