logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

echo-sounder
ನಾಮವಾಚಕ
ಪ್ರತಿಧ್ವನಿ ನಾದಕ; ಮಾರ್ದನಿ ಆಳಮಾಪಕ; ಶಬ್ದ ಯಾ ಶಬ್ದಾತೀತ ಅಲೆಗಳನ್ನು ನೀರಿನ ತಳಕ್ಕೆ ಕಳುಹಿಸಿ ಅವುಗಳ ಪ್ರತಿಧ್ವನಿಯನ್ನು ಪಡೆಯುವ ವಿಧಾನದಿಂದ ಆಳವನ್ನು ನಿರ್ಣಯಿಸುವ ಉಪಕರಣ.

echo-virus
ನಾಮವಾಚಕ
ಕೆಲವು ವೇಳೆ ಸೌಮ್ಯರೂಪದ ಮೆನಿಂಜೈಟಿಸ್‍ ಬರಿಸುವ, ಸಾಮಾನ್ಯವಾಗಿ ಕರುಳಿನ ಮೇಲೆ ದಾಳಿಯಿಡುವ, ಒಂದು ಬಗೆಯ ವೈರಸ್‍.

echogram
ನಾಮವಾಚಕ
(ಶಬ್ದಶಾಸ್ತ್ರ) ಪ್ರತಿಧ್ವನಿಲೇಖ; ಮಾರ್ದನಿಲೇಖ; ಪ್ರತಿಧ್ವನಿಯ ಸಹಾಯದಿಂದ ಆಳ ಕಂಡುಹಿಡಿಯುವ ಸ್ವಯಂಚಾಲಿತ ಉಪಕರಣದಿಂದ ದೊರಕುವ ದಾಖಲೆ.

echograph
ನಾಮವಾಚಕ
ಪ್ರತಿಧ್ವನಿಲೇಖಿ; ಮಾರ್ದನಿಲೇಖಿ; ಪ್ರತಿಧ್ವನಿಯ ಸಹಾಯದಿಂದ ಆಳವನ್ನು ಕಂಡುಹಿಡಿದು ದಾಖಲಿಸುವ ಸ್ವಯಂಚಾಲಿತ ಉಪಕರಣ.

echoic
ಗುಣವಾಚಕ
  • ಅನುಕರಣವಾಚಿ(ಯಾದ).
  • ಪ್ರತಿಧ್ವನಿಯ; ಮಾರ್ದನಿಯನ್ನು ಹೋಲುವ.

  • echoism
    ನಾಮವಾಚಕ
  • ಅನುಕರಣವಾಚಕ; ಧ್ವನ್ಯನುಕರಣ (ಶಬ್ದ, ರಚನೆ); ಪದದ ನಾದದಿಂದ ಅರ್ಥ ಸೂಚಿಸುವಂತೆ ರಚಿಸಿದ ಪದ, ಉದಾಹರಣೆಗೆ cuckoo, sizzle.
  • ಹಾಗೆ ಅನುಕರಣ ಪದ ರಚಿಸುವುದು.

  • echolalia
    ನಾಮವಾಚಕ
  • (ರೋಗಶಾಸ್ತ್ರ) ಮಾರುಲಿಮಾತು; ಅರ್ಥಹೀನ ಪುನರುಚ್ಚಾರ; ಪ್ರತಿಧ್ವನಿಯಂತೆ ಇತರರ ಮಾತುಗಳನ್ನು ಅರ್ಥಹೀನವಾಗಿ ಪುನರುಚ್ಚರಿಸುವ ಜಾಡ್ಯ.
  • ಪುನರುಚ್ಚಾರ; ಮಾತು ಕಲಿಯುತ್ತಿರುವ ಮಗು ಬೇರೆಯವರ ಮಾತುಗಳನ್ನು ಪುನಃ ಹೇಳುವುದು, ಉಚ್ಚರಿಸುವುದು.

  • echoless
    ಗುಣವಾಚಕ
    ಮಾರ್ದನಿಗೊಡದ; ಮಾರುಲಿಯದ; ಪ್ರತಿಧ್ವನಿಯಿಲ್ಲದ.

    echolocation
    ನಾಮವಾಚಕ
    (ಎಲೆಕ್ಟ್ರಾನಿಕ್ಸ್‍) ಪ್ರತಿಧ್ವನಿ ಸ್ಥಾನ ನಿರ್ದೇಶನ; ಧ್ವನಿಯ ಅಲೆಗಳನ್ನು ಕಳುಹಿಸಿ ಅವುಗಳ ಪ್ರತಿಧ್ವನಿಯನ್ನು ಪಡೆಯುವ ವಿಧಾನದಿಂದ ವಸ್ತುಗಳನ್ನೂ ಅವುಗಳ ಸ್ಥಾನವನ್ನೂ ಗುರುತಿಸುವ ವ್ಯವಸ್ಥೆ.

    echosounding
    ನಾಮವಾಚಕ
    ಪ್ರತಿಧ್ವನಿ ನಾದನ; ಮಾರ್ದನಿಯಿಂದ ಆಳ ಕಂಡುಹಿಡಿಯುವುದು; ಶಬ್ದದ ಯಾ ಶಬ್ದಾತೀತ ಅಲೆಗಳನ್ನು ನೀರಿನ ತಳಕ್ಕೆ ಕಳುಹಿಸಿ ಪ್ರತಿಧ್ವನಿಯನ್ನು ಪಡೆದು ಆಳವನ್ನು ನಿರ್ಣಯಿಸುವುದು.


    logo