ಕೇನ್; ಆಡಮ್ ಮತ್ತು ಈವ್‍ರ, ತನ್ನ ಸೋದರನನ್ನೇ ಕೊಲೆ ಮಾಡಿದ, ಮೊದಲನೆಯ ಮಗ.
ಕೊಲೆಪಾತಕ; ಕೊಲೆಗಾರ.
Cainozoic
ಗುಣವಾಚಕ
(ಭೂವಿಜ್ಞಾನ) ನವಜೀವಕಲ್ಪದ; ಕೈನಸೋಯಿಕ್; ಭೂಇತಿಹಾಸದಲ್ಲಿ ಜೀವ್ಯವಶೇಷಗಳು ಕಂಡುಬರುವ ಮೂರು ಪ್ರಮುಖ ಕಲ್ಪಗಳಲ್ಲಿ ಸುಮಾರು 70 ಮಿಲಿಯ ವರ್ಷಗಳಿಂದೀಚಿನ ಯುಗದ ಯಾ ಅದಕ್ಕೆ ಸಂಬಂಧಿಸಿದ: Cainozoic era ನವಜೀವಕಲ್ಪ.
Cainozoic
ನಾಮವಾಚಕ
(ಭೂವಿಜ್ಞಾನ) ನವಜೀವಕಲ್ಪ; ಕೈನಸೋಯಿಕ್ ಯುಗ ಯಾ ಆ ಕಾಲದ ಶಿಲಾವಿಧಗಳು.
caique
ನಾಮವಾಚಕ
(ಬಾಸ್ಪರಸ್ ಜಲಸಂಧಿಯಲ್ಲಿ ಬಳಸುವ, ಅಗಲ ಕಿರಿದಾಗಿ ಉದ್ದ ಹೆಚ್ಚಾಗಿ ಇರುವ) ಹಗುರ ಹುಟ್ಟುದೋಣಿ.
(ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಬಳಸುವ ಒಕ್ಕೂವೆಯ) ಹಾಯಿಹಡಗು.