logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

backwardation
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) (ಸ್ಟಾಕು, ಪತ್ರವ್ಯಾಪಾರದಲ್ಲಿ) ತಡೆವಟ್ಟ; ಮಾರಿದವ ಕೊಂಡವನಿಗೆ ಪತ್ರ ಒಪ್ಪಿಸಲು ಕಾಲಾವಕಾಶಕ್ಕಾಗಿ ಕೊಡುವ ಪರಿಹಾರ ದ್ರವ್ಯ.

backwardness
ನಾಮವಾಚಕ
  • ಹಿಂದಾಗಿರುವಿಕೆ; ಮುಂದುವರಿಯಲು ಹಿಂತೆಗೆಯುವಿಕೆ; ಹಿಂದೆ ಬೀಳುವಿಕೆ.
  • (ಬುದ್ಧಿ ಯಾ ಕ್ರಿಯೆಯಲ್ಲಿ) ಜಡತ್ವ; ಮಂದಗತಿ.
  • (ಋತು, ಗಿಡಗಳ ವಿಷಯದಲ್ಲಿ) ತಡವಾಗಿರುವಿಕೆ; ನಿಧಾನವಾಗಿರುವಿಕೆ.
  • ಹಿಂಜರಿತ; ಸಂಕೋಚ; ಇಷ್ಟವಿಲ್ಲದಿರುವಿಕೆ.

  • backwards
    ಕ್ರಿಯಾವಿಶೇಷಣ ಪದಗುಚ್ಛ ನುಡಿಗಟ್ಟು
    backwards and forwards ಹಿಂದಕ್ಕೂ ಮುಂದಕ್ಕೂ.
  • (ನೋಡುವುದು, ಒರಗುವುದು, ಮೊದಲಾದವುಗಳಲ್ಲಿ) ಹಿಂದುಗಡೆ(ಗೆ); ಹಿಮ್ಮೊಗವಾಗಿ; ಹಿಂದಕ್ಕೆ; ವಿಮುಖವಾಗಿ: look backwards ಹಿಂದುಗಡೆ ನೋಡು.
  • (ನಡೆಯುವುದು ಮೊದಲಾದವುಗಳಲ್ಲಿ) ಬೆನ್ನುಮುಂದಾಗಿ; ಹಿಂದುಮುಂದಾಗಿ.
  • (ವಸ್ತುವಿನ ಚಲನೆಯ ವಿಷಯದಲ್ಲಿ) ಹಿಂದಕ್ಕೆ; ಮೊದಲ, ಪೂರ್ವ, ಮೂಲ – ಸ್ಥಾನಕ್ಕೆ; ಹೊರಟಲ್ಲಿಗೆ: backwards to the starting point ಹೊರಟಲ್ಲಿಗೇ. flow backwards ಹಿಂದಕ್ಕೆ, ಮೊದಲ ಸ್ಥಾನಕ್ಕೆ ಹರಿ.
  • (ಸ್ಥಿತಿಯ ವಿಷಯದಲ್ಲಿ) ಇಳಿಮುಖವಾಗಿ; ಕೆಡುತ್ತ; ಹೀನವಾಗಿ; ಕೆಟ್ಟುಹೋಗಿ.
  • (ನೆನಸಿಕೊಳ್ಳುವುದು, ಎಣಿಕೆ, ಮೊದಲಾದವುಗಳಲ್ಲಿ) ಹಿಂದೆ; ಹಿಂದಕ್ಕೆ; ಗತಕಾಲದ ಕಡೆಗೆ ಯಾ ಗತಕಾಲದಲ್ಲಿ.
  • (ಉಚ್ಚಾರಣೆ, ಬರಹ, ಮೊದಲಾದವುಗಳಲ್ಲಿ) ಹಿಂದುಮುಂದಾಗಿ; ವಿಲೋಮವಾಗಿ.

  • backwash
    ನಾಮವಾಚಕ
    (ನೌಕಾಯಾನ)
  • (ಹುಟ್ಟು ಮೊದಲಾದವುಗಳಿಂದ ಹಿಂದಕ್ಕೆ ಎಸೆಯಲ್ಪಟ್ಟ) ಮಗುಚು – ತೆರೆ, ನೀರು; ಹಿನ್ನೀರು.
  • (ರೂಪಕವಾಗಿ) (ಘಟನೆಯೊಂದರ) ಪರಿಣಾಮ; ಪ್ರತಿಕ್ರಿಯೆ.

  • backwater
    ನಾಮವಾಚಕ
  • (ಹೊಳೆಯ ಪಕ್ಕದಲ್ಲಿ ಅಣೆಕಟ್ಟು, ಪ್ರವಾಹ, ಅಲೆಗಳು, ಹಡಗಿನ ಹುಟ್ಟುಗಾಲಿ, ಮೊದಲಾದವುಗಳಿಂದ) ನಿಂತ ನೀರು; ಮಗುಚು ನೀರು; ಹಿನ್ನೀರು; ಒದಗು ನೀರು; ಒದ್ದನೀರು; ಒದಗು.
  • (ವಸ್ತುಗಳ, ವಿಷಯಗಳ, ಬುದ್ಧಿಶಕ್ತಿಯ) ಜಡತೆ; ತಟಸ್ಥತೆ; ಸ್ಥಗಿತಸ್ಥಿತಿ; ನಿಂತಲ್ಲೇ ನಿಂತ ಸ್ಥಿತಿ.
  • ಕಟ್ಟೆಹಾಕಿ ತಡೆಗಟ್ಟಿದ ಖಾರಿ ಯಾ ಕಡಲ ಚಾಚು.

  • backwater
    ಅಕರ್ಮಕ ಕ್ರಿಯಾಪದ
  • ಹಿಂಹುಟ್ಟು ಹಾಕು; ದೋಣಿಯನ್ನು ಹಿಮ್ಮೊಗವಾಗಿ ಯಾ ಹಿಂದಕ್ಕೆ ನಡಸು.
  • (ಒಂದು ನಿಲುವಿನಿಂದ) ಹಿಮ್ಮೆಟ್ಟು; ಹಿಂತೆಗೆ.

  • backwood
    ಗುಣವಾಚಕ
    ಕಗ್ಗಾಡಿನ; ಗೊಂಡಾರಣ್ಯದ.

    backwoods
    ನಾಮವಾಚಕ
  • (ಭಾಗಶಃ ಯಾ ಪೂರ್ತಿ) ಕಗ್ಗಾಡು; ಒಳಜಂಗಲು; ಗೊಂಡಾರಣ್ಯ.
  • ದೂರದ ಯಾ ವಿರಳವಾದ ಜನ ವಸತಿಯಿರುವ – ನಾಡು, ಪ್ರದೇಶ.

  • backwoods
    ಗುಣವಾಚಕ
  • = backwood.
  • ಜಂಗಲಿ; ಒರಟೊರಟಾದ.

  • backwoodsman
    ನಾಮವಾಚಕ
  • ಕಾಡ; ಕಗ್ಗಾಡು ನಿವಾಸಿ.
  • (ಬ್ರಿಟಿಷ್‍ ಪ್ರಯೋಗ) (ರೂಪಕವಾಗಿ ಸಹ) ನಾಮ್‍ಕಾವಾಸ್ತೆ ಸದಸ್ಯ; ಲಾರ್ಡ್ಸ್‍ ಸಭೆಗೆ ಬಹುತೇಕವಾಗಿ ಗೈರುಹಾಜರಾಗುವ ಸದಸ್ಯ.
  • (ವ್ಯಕ್ತಿಯ ವಿಷಯದಲ್ಲಿ) ಜಂಗಲಿ; ಒರಟ; ಕಾಡು ಮನುಷ್ಯ.


  • logo