(ಅಮೆರಿಕನ್ ಪ್ರಯೋಗ) ಹುಟ್ಟುತ್ತಿರುವ; ಉತ್ಪತ್ತಿಯಾಗುತ್ತಿರುವ.
ಅಕರ್ಮಕ ಕ್ರಿಯಾಪದ
ಸಕರ್ಮಕ ಕ್ರಿಯಾಪದ
ಮೈಯಿಳಿ; ಗರ್ಭಪಾತವಾಗು; ಗರ್ಭಸ್ರಾವವಾಗು: she aborted ಅವಳಿಗೆ ಮೈಯಿಳಿಯಿತು.
(ಜೀವವಿಜ್ಞಾನ) ಗೊಡ್ಡಾಗು; ಬರಡಾಗು.
(ಜೀವವಿಜ್ಞಾನ) (ಸಸ್ಯಗಳು, ಪ್ರಾಣಿಗಳು, ಅವುಗಳ ಅಂಗಗಳು, ಜಾತಿಗಳ ವಿಷಯದಲ್ಲಿ) ಮುರುಟಿಕೊ; ಕುರುಟುಬೀಳು; ಚಿರುಟಿಹೋಗು; ಸ್ವಭಾವಿಕ ಬೆಳವಣಿಗೆ–ಕುಂಠಿತವಾಗು, ತಡೆ ಹೊಂದು.
(ರೂಪಕವಾಗಿ) (ಯೋಜನೆ, ಹಂಚಿಕೆ, ಪ್ರಯತ್ನ, ಮೊದಲಾದವು) ಕೆಟ್ಟುಹೋಗು; ವ್ಯರ್ಥವಾಗು; ವಿಫಲವಾಗು; ಎಣಿಸಿದಂತೆ ನಡೆಯದೆ ಹೋಗು. (ವಿಮಾನ, ಕ್ಷಿಪಣಿ, ಮೊದಲಾದವುಗಳ ವಿಷಯದಲ್ಲಿ) ವಿಫಲಗೊಳ್ಳು; ಅಯಶಸ್ವಿಯಾಗು; ಉದ್ದಿಷ್ಟಯಾನವನ್ನು ಯಾ ಕಾರ್ಯವನ್ನು ಮಾಡದೆ ಹೋಗು.
(ವಿಮಾನಯಾನ, ಕ್ಷಿಪಣಿ ಉಡಾವಣೆ, ಮೊದಲಾದವುಗಳ) ವೈಫಲ್ಯ; ಕಾರ್ಯ ನಡೆಸದೆ ಯಾ ನಡೆಸುವುದರೊಳಗೆ ಅಯಶಸ್ವಿಯಾಗುವುದು.
(ಅಂಥ ಯಾನಗಳ) ರದ್ದತಿ; ಅಂತ್ಯಗೊಳಿಕೆ.
ಅಕಾಲಪ್ರಸೂತ; ಅಕಾಲಜನಿತ.
ಸಾಕಷ್ಟು ಬೆಳೆಯದ; ಪೀಚಾದ; ಬೆಳವಣಿಗೆ ಮಟ್ಟಾದ. (ಜೀವವಿಜ್ಞಾನ) ಪೂರ್ಣಗೊಳ್ಳದ; ಅಂಕುರಾವಸ್ಥೆಯ: thorns are aborted branches ಮುಳ್ಳುಗಳು ಪೂರ್ಣಗೊಳ್ಳದ ರೆಂಬೆಗಳು.
ಗರ್ಭಸ್ರಾವಕ; ಮೈಯಿಳಿಸುವ ಔಷಧ ಮೊದಲಾದವು.
(ಔಷಧಿ ಮೊದಲಾದವುಗಳ ವಿಷಯದಲ್ಲಿ) ಗರ್ಭಸ್ರಾವಕ; ಗರ್ಭಸ್ರಾವಗೊಳಿಸುವ.
(ಮುಖ್ಯವಾಗಿ ಉದ್ದೇಶಪೂರ್ವಕವಾಗಿ ಹಾಗೂ ಕಾನೂನುಬಾಹಿರವಾಗಿ ಮಾಡಿಸಿದ) ಮೈಯಿಳಿತ; ಗರ್ಭಪಾತ; ಅಕಾಲ ಜನನ.
(ವೈದ್ಯಶಾಸ್ತ್ರ) ಗರ್ಭಸ್ರಾವ; ಗರ್ಭಪಾತ; ಇಪ್ಪತ್ತೆಂಟು ವಾರಗಳ ಒಳಗಿರುವ ಪ್ರಾಯಶಃ ಬದುಕಲಾರದ ಪಿಂಡದ ಯಾ ಭ್ರೂಣದ ಹೆರಿಗೆ.
(ಜೀವವಿಜ್ಞಾನ) ಯಾವುದೇ ಅಂಗದ ಕುಂಠಿತ ಬೆಳವಣಿಗೆ.
ಕುಬ್ಜ, ಅಂಗಹೀನ, ವಿಕೃತ–ಪ್ರಾಣಿ ಯಾ ವ್ಯಕ್ತಿ.
(ಯೋಜನೆ, ಕಾರ್ಯ, ಉದ್ದೇಶ, ಮೊದಲಾದವುಗಳ) ವಿಫಲತೆ; ನಿಷ್ಫಲತೆ; ವ್ಯರ್ಥವಾಗುವಿಕೆ; ಅಯಶಸ್ವಿಯಾಗುವಿಕೆ.
ಗರ್ಭಸ್ರಾವಕ; ಗರ್ಭಸ್ರಾವಿಕೆ; ಕಾನೂನುಬಾಹಿರವಾಗಿ ಬಸಿರು ತೆಗೆಯುವ, ಗರ್ಭಪಾತ ಮಾಡಿಸುವ ವ್ಯಕ್ತಿ.
(ವೈದ್ಯಶಾಸ್ತ್ರ) ಮೈಯಿಳಿಸುವ; ಗರ್ಭಪಾತ ಮಾಡಿಸುವ.
ಅಕಾಲಿಕ; ಕಾಲಕ್ಕೆ ಮುಂಚೆ ಹುಟ್ಟುವ, ಸಂಭವಿಸುವ.
(ಜೀವವಿಜ್ಞಾನ) (ಅಂಗಾಂಗ ಮೊದಲಾದವುಗಳ ವಿಷಯದಲ್ಲಿ) ಅಪೂರ್ಣಾವಸ್ಥೆಯ; ಅಂಕುರಾವಸ್ಥೆಯ; ಕುಂಠಿತ ಬೆಳವಣಿಗೆಯ.
(ಕಾರ್ಯ, ಯೋಜನೆ, ಮೊದಲಾದವುಗಳ ವಿಷಯದಲ್ಲಿ) ಕೈಗೂಡದ; ವಿಫಲ; ವ್ಯರ್ಥ; ಅಯಶಸ್ವಿ.
ಮೈಯಿಳಿಸುವಂತೆ; ಗರ್ಭಪಾತವಾಗುವಂತೆ.
ಅಕಾಲಿಕವಾಗಿ.
ಬೆಳೆವಣಿಗೆ ಕುಂಠಿತವಾಗಿ.
(ಕಾರ್ಯ ಮೊದಲಾದವು) ಕೈಗೂಡದೆ; ವಿಫಲಗೊಂಡು.