logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

take-home pay
ನಾಮವಾಚಕ
ನಿವ್ವಳ–ವೇತನ, ಸಂಬಳ; ತೆರಿಗೆ ಮೊದಲಾದವುಗಳನ್ನು ಹಿಡಿದುಕೊಂಡ ಮೇಲೆ ಸಿಗುವ ವೇತನ, ಸಂಬಳ.

take-in
ನಾಮವಾಚಕ
ಮೋಸ; ವಂಚನೆ.

take-off
ನಾಮವಾಚಕ
  • ವಿಡಂಬನೆ ಯಾ ಅಣಕವಾಡು.
  • ನೆಗೆದಾಣ; ಮೇಲಕ್ಕೆ ಹಾರುವ ಸ್ಥಳ.
  • (ವಿಮಾನದ ವಿಷಯದಲ್ಲಿ) ಹಾರಿಕೆ; ಉಡ್ಡಯನ; ಮೇಲಕ್ಕೆ ಹಾರುವುದು; ಆಕಾಶದಲ್ಲಿ ಹಾರುತ್ತಿರುವ, ಚಲಿಸುತ್ತಿರುವ ಸ್ಥಿತಿ, ಕ್ರಿಯೆ.

  • take-over
    ನಾಮವಾಚಕ
    (ಮುಖ್ಯವಾಗಿ ವ್ಯಾಪಾರ ಸಂಸ್ಥೆ ಮೊದಲಾದವುಗಳ) ಒಡೆತನ ವಹಿಸಿಕೊಳ್ಳುವುದು; ಸ್ವಾಮ್ಯಸ್ವಾಧೀನ; ಮಾಲೀಕತ್ವ ಹಿಡಿಯುವುದು.

    takeable
    ಗುಣವಾಚಕ
    ಸ್ವೀಕಾರಾರ್ಹ; ತೆಗೆದುಕೊಳ್ಳಬಹುದಾದ.

    taker
    ನಾಮವಾಚಕ
  • ತೆಗೆದುಕೊಳ್ಳುವವನು; ಗ್ರಾಹಕ.
  • ಬಾಜಿದಾರ; ಬಾಜಿ ಕಟ್ಟುವವನು: there were no takers ಬಾಜಿ ಕಟ್ಟಲು ಯಾರೂ ಸಿದ್ಧರಿರಲಿಲ್ಲ.

  • takin
    ನಾಮವಾಚಕ
    ಟಾಕಿನ್‍; ಕೊಂಬಉಳ್ಳ, ಮೆಲುಕು ಹಾಕುವ, ಬಊಡಾರ್ಕಸ್‍ ಟ್ಯಾಕ್ಸಿಕಲರ್‍ ಕುಲದ, ಟಿಬೆಟ್ಟಿನ ದೊಡ್ಡ ಪ್ರಾಣಿ.

    taking
    ನಾಮವಾಚಕ
  • ಸ್ವೀಕಾರ; ಪರಿಗ್ರಹ; ತೆಗೆದುಕೊಳ್ಳುವುದು.
  • ತೆಗೆದುಕೊಂಡದ್ದು; ಸ್ವೀಕರಿಸಿದ ವಸ್ತು ಮೊದಲಾದವು.
  • ಕೈವಶಪಡಿಸಿಕೊಳ್ಳುವುದು; ಹಿಡಿಯುವುದು.
  • (ಪ್ರಾಚೀನ ಪ್ರಯೋಗ) ತಳಮಳ; ಚಿತ್ತಕ್ಷೋಭೆ: was in great taking ಭಾರಿ ತಳಮಳದಲ್ಲಿದ್ದ.
  • (ಬಹುವಚನದಲ್ಲಿ) ವ್ಯಾಪಾರದಲ್ಲಿ ಗಳಿಸಿದ–ಒಟ್ಟು ಹಣ, ಆದಾಯ, ಉತ್ಪತ್ತಿ, ಗಳಿಕೆ.

  • taking
    ಗುಣವಾಚಕ
  • ಆಕರ್ಷಕ; ಮನ ಸೆಳೆಯುವ; ಮೋಹಕ.
  • ಒಬ್ಬರಿಂದ ಒಬ್ಬರಿಗೆ ಅಂಟುವ, ಹರಡುವ; ಸೋಂಕಿನ; ಸಾಂಕ್ರಾಮಿಕ.

  • takingly
    ಕ್ರಿಯಾವಿಶೇಷಣ
    ಆಕರ್ಷಕವಾಗಿ; ಮನ ಸೆಳೆಯುವಂತೆ; ಮೋಹಕವಾಗಿ.


    logo