logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obsession
ನಾಮವಾಚಕ
  • ಗರ; ಗೀಳು; ಗ್ರಸ್ತತೆ; ಮನಸ್ಸನ್ನೆಲ್ಲ ಆವರಿಸಿ ಕಾಡುವುದು ಯಾ ಪೀಡಿಸುವುದು.
  • ಗೀಳು:
    1. ಒಬ್ಬ ವ್ಯಕ್ತಿಯ ಮನಸ್ಸನ್ನು ಆವರಿಸಿರುವ ಭಾವನೆ ಯಾ ಯೋಚನೆ.
    2. ಅಂಥ ಭಾವನೆಗಳಿರುವ ಸ್ಥಿತಿ.

  • obsessional
    ಗುಣವಾಚಕ
    ಗೀಳಿನ; ಗರದ; ಗೀಳಿಗೆ ಸಂಬಂಧಿಸಿದ ಯಾ ಗೀಳಿನಿಂದಾದ ಯಾ ಗೀಳಿನ ರೂಪದ.

    obsessionally
    ಕ್ರಿಯಾವಿಶೇಷಣ
    ಗೀಳು ಹಿಡಿದಂತೆ; ಗರ ಹಿಡಿದ ರೀತಿಯಲ್ಲಿ.

    obsessive
    ಗುಣವಾಚಕ
  • ಗೀಳಿನ ಯಾ ಅದಕ್ಕೆ ಸಂಬಂಧಿಸಿದ.
  • ಗೀಳಿನಂಥ.
  • ಒತ್ತಾಯದ; ಬಲಾತ್ಕಾರದ.

  • obsessively
    ಕ್ರಿಯಾವಿಶೇಷಣ
    ಗೀಳು ಹಿಡಿದಂತೆ; ಒತ್ತಾಯಿಸುವಂತೆ; ಬಲಾತ್ಕರಿಸುವಂತೆ.

    obsessiveness
    ನಾಮವಾಚಕ
    ಗೀಳು; ಗೀಳಿನ ಗುಣ ಯಾ ಗೀಳು ಹಿಡಿದ ಲಕ್ಷಣ.

    obsidian
    ನಾಮವಾಚಕ
    ಅಬ್ಸಿಡಿಯನ್‍; ಕಾರ್ಗಲ್ಲು; ಬೆಣಚು ಕಲ್ಲಿನ ಬಳಗದ, ಜ್ವಾಲಾ ಮುಖಿಯಿಂದ ಉತ್ಪತ್ತಿಯಾದ, ಗಾಜಿನಂಥ, ಸಾಮಾನ್ಯವಾಗಿ ಕಪ್ಪು ಬಣ್ಣದ ಖನಿಜ.

    obsolescence
    ನಾಮವಾಚಕ
  • ಬಳಕೆ ತಪ್ಪುತ್ತಿರುವಿಕೆ; ರೂಢಿ ಗತಿಸುತ್ತಿರುವಿಕೆ; ಲುಪ್ತವಾಗುತ್ತಿರುವಿಕೆ; ಪ್ರಯೋಗ ಅಳಿಯಉತ್ತಿರುವಿಕೆ; ಹಿಂದೆ ಬಿದ್ದು ಹೋಗುತ್ತಿರುವಿಕೆ.
  • (ಜೀವವಿಜ್ಞಾನ) (ಅಂಗಗಳ ವಿಷಯದಲ್ಲಿ) ಅಳಿವು; ಕ್ಷಯ; ಹಿಂದೆ ಚೆನ್ನಾಗಿ ಬೆಳೆದಿದ್ದು ಈಗ ಕ್ರಮೇಣ ಕಣ್ಮರೆಯಾಗುತ್ತಿರುವುದು.

  • obsolescent
    ಗುಣವಾಚಕ
  • ಗತಿಸುತ್ತಿರುವ; ಲುಪ್ತವಾಗುತ್ತಿರುವ; ಬಳಕೆ ತಪ್ಪುತ್ತಿರುವ; ಪ್ರಯೋಗ ಅಳಿಯುತ್ತಿರುವ; ಹಿಂದೆ ಬಿದ್ದು ಹೋಗುತ್ತಿರುವ.
  • (ಜೀವವಿಜ್ಞಾನ) (ಅಂಗಗಳ ವಿಷಯದಲ್ಲಿ) ಹಿಂದೊಮ್ಮೆ ಚೆನ್ನಾಗಿ ಬೆಳೆದಿದ್ದು ಈಗ ಕ್ರಮೇಣ ಕಣ್ಮರೆಯಾಗುತ್ತಿರುವ, ಅಳಿದು ಹೋಗುತ್ತಿರುವ; ಲುಪ್ತಪ್ರಾಯ; ಅಳಿಯುತ್ತಿರುವ; ಕಾಣದಾಗುತ್ತಿರುವ; ಕ್ಷಯಿಸುತ್ತಿರುವ.

  • obsolete
    ಗುಣವಾಚಕ
  • ಗತ; ತ್ಯಕ್ತ; ಬಳಕೆಯಲ್ಲಿಲ್ಲದ; ಪ್ರಯೋಗವಳಿದ; ರೂಢಿ ತಪ್ಪಿದ; ತ್ಯಜಿಸಿಬಿಟ್ಟಿರುವ; ಹಳತಾಗಿ ಹೋದ.
  • (ಭಾಷಾಪ್ರಯೋಗದ ವಿಷಯದಲ್ಲಿ) ಲುಪ್ತ; ಗತ.
  • (ಜೀವವಿಜ್ಞಾನ) ಅವಿಕಸಿತ; ಅಪೂರ್ಣ ವಿಕಾಸದ; ಅಪೂರ್ಣವಸ್ಥೆಯ; ಹಿಂದೆ ಇದ್ದುದಕ್ಕಿಂತ ಯಾ ವಿಕಸನದ ಅದೇ ಹಂತದ ಅದರ ಇತರ ಜ್ಞಾತಿ–ಜೀವಿಗಳಲ್ಲಿರುವುದಕ್ಕಿಂತ ಕಡಮೆ ವಿಕಾಸ ಯಾ ಬೆಳವಣಿಗೆ ಪಡೆದಿರುವ.


  • logo