(ರೂಪಕವಾಗಿ) ಅತ್ಯಾಕರ್ಷಕ; ಬಲವಾಗಿ ಮನಸೆಳೆಯುವ; ಮೋಹಕವಾದ: a magnetic personality ಮೋಹಕ ವ್ಯಕ್ತಿತ್ವ.
magnetic compass
ನಾಮವಾಚಕ
$^1$compass ಪದಗುಚ್ಛ \((2)\) ನೋಡಿ.
magnetic disk
ನಾಮವಾಚಕ
(ಕಂಪ್ಯೂಟರ್) ಕಾಂತೀಯ ಬಿಲ್ಲೆ; ಹಲವಾರು ವರ್ತುಲವಾದ ತಟ್ಟೆಗಳಿದ್ದು ಪ್ರತಿಯೊಂದರಲ್ಲೂ ಎರಡೂ ಕಡೆ ಕಾಂತೀಯ ವಸ್ತುವನ್ನು ಲೇಪಿಸಿರುವ, ದತ್ತಾಂಶಗಳನ್ನು ಸಂಗ್ರಹಿಸಲು ಬಳಸುವ ಬಿಲ್ಲೆ, ಸಾಧನ.
magnetic equator
ನಾಮವಾಚಕ
ಕಾಂತೀಯ ವಿಷುವದ್ರೇಖೆ; ಭೌಗೋಳಿಕ ವಿಷುವದ್ರೇಖೆಯ ಬಳಿಯೇ ಇರುವ, ಕಾಂತಸೂಚಿಯ ನಮನ ಸೊನ್ನೆ ಇರುವ, ಕಾಲ್ಪನಿಕ ರೇಖೆ.
magnetic field
ನಾಮವಾಚಕ
ಕಾಂತಕ್ಷೇತ್ರ; ಕಾಂತಗಳ ಸುತ್ತ ಯಾ ಕಾಂತೀಯ ಪದಾರ್ಥಗಳ ಸುತ್ತ ಯಾ ವಿದ್ಯುತ್ಪ್ರವಾಹವನ್ನು ಭರಿಸುತ್ತಿರುವ ವಾಹಕಗಳ ಸುತ್ತ ಕಂಡುಬರುವ ಶಕ್ತಿಯ ಯಾ ಬಲದ ಪ್ರದೇಶ.
magnetic inclination
ನಾಮವಾಚಕ
ಕಾಂತೀಯ ನಮನ; ಕಾಂತೀಯ ನತಿ; ಭೂಮಿಯ ಮೇಲಿನ ಯಾವುದೇ ಸ್ಥಳದಲ್ಲಿ ಭೂಕಾಂತ ಕ್ಷೇತ್ರಕ್ಕೂ ಕ್ಷಿತಿಜೀಯ ರೇಖೆಗೂ ನಡುವಣ ಕೋನ.
magnetic mine
ನಾಮವಾಚಕ
ಕಾಂತೀಯ ಸಿಡಿಗುಂಡು; ಸಮುದ್ರ ತಳದಲ್ಲಿರಿಸುವ, ಹಡಗಿನ ಒಡಲಿನಂಥ ಕಾಂತೀಕೃತ ಕಾಯದಿಂದ ಆಕರ್ಷಿತಗೊಂಡು ಸಿಡಿಯುವ ಸುರಂಗಮದ್ದು.
magnetic moment
ನಾಮವಾಚಕ
ಕಾಂತೀಯ ಮಹತ್ವ; (ಅಯಸ್ಕಾಂತಕ್ಕೆ ಸಂಬಂಧಿಸಿದಂತೆ) ಎರಡು ಧ್ರುವಗಳ ನಡುವಣ ದೂರ ಹಾಗೂ ಧ್ರುವದ ಪ್ರಾಬಲ್ಯ ಇವುಗಳ ಗುಣಲಬ್ದ.
magnetic needle
ನಾಮವಾಚಕ
ಕಾಂತಸೂಜಿ; ದಿಕ್ಸೂಚಿಯಲ್ಲಿ ಮತ್ತು ಕೆಲವು ಬಗೆಯ ವಿದ್ಯುತ್ ಮತ್ತು ಕಾಂತೀಯ ಉಪಕರಣಗಳಲ್ಲಿ ಉಪಯೋಗಿಸುವ, ಕಾಂತೀಕರಿಸಿರುವ ಸೂಜಿಯಂಥ ಉಕ್ಕಿನ ತುಂಡು.
magnetic north
ನಾಮವಾಚಕ
ಕಾಂತೀಯ ಉತ್ತರ; ಯಾವುದೇ ಸ್ಥಳದಲ್ಲಿ ಅಯಸ್ಕಾಂತವು ಸೂಚಿಸುವ (ನಿಜವಾದ ಭೌಗೋಳಿಕ ಉತ್ತರವಾಗಬೇಕಗಿಲ್ಲದ) ಉತ್ತರ ದಿಕ್ಕು.