ದಾನಮ್ಮ; ದಾನಬ್ಬೆ; ಹಿತಚಿಂತಕಿ; ಹಳ್ಳಿ ಮೊದಲಾದವುಗಳಲ್ಲಿನ, ಪರೋಪಕಾರಿಯಾದ ಯಾ ಇತರರ ಹಿತಚಿಂತನೆಯಲ್ಲಿ ತೊಡಗಿದ ಹೆಂಗಸು.
Lady chapel
ನಾಮವಾಚಕ
ಮೇರಿಕನ್ಯೆ ಮಂದಿರ; ದೊಡ್ಡ ಚರ್ಚಿನೊಳಗೆ ಮೇರಿ ಕನ್ಯೆಗೆಂದು ಅರ್ಪಿತವಾದ ಭಾಗ ಯಾ ಧ್ಯಾನಮಂದಿರ.
Lady Day
ನಾಮವಾಚಕ
(ಮಾರ್ಚಿ 25ರಂದು ಬರುವ) ಮೇರಿಕನ್ಯೆ ದಿನಾಚರಣೆ; ಇಂಗ್ಲೆಂಡ್ ಮೊದಲಾದ ಕಡೆಗಳಲ್ಲಿ ಗೇಣಿ ಮೊದಲಾದವು ಪ್ರಾರಂಭವಾಗುವ ಯಾ ಕೊನೆಯಾಗುವ, ತ್ರೆಮಾಸಿಕ ಗೇಣಿ ಕಂತು ಮೊದಲಾದವನ್ನು ಕಟ್ಟಬೇಕಾದ ದಿನ.
Lady Mayoress
ನಾಮವಾಚಕ
ಲಾರ್ಡ್ ಮೇಯರನ ಹೆಂಡತಿ.
Lady Muck
ನಾಮವಾಚಕ
(ಅಶಿಷ್ಟ, ಹೀನಾರ್ಥಕ ಪ್ರಯೋಗ) ಆಡಂಬರದ ಹೆಂಗಸು.
Lady Superior
ನಾಮವಾಚಕ
‘ಕಾನ್ವೆಂಟ್’ ಯಾ ಸಂನ್ಯಾಸಿನಿ ಮಠದ ಮುಖ್ಯಸ್ಥೆ.
lady's companion
ನಾಮವಾಚಕ
ಹತ್ತಿ, ದಾರ, ಬಟ್ಟೆ, ಮೊದಲಾದವುಗಳ ಸುರುಳಿ.
lady's cushion
ನಾಮವಾಚಕ
ಲೇಡೀಸ್ ಕುಷನ್; ಪಾಚಿಯಂತೆ ಕಾಣುವ ಸ್ಯಾಕ್ಸಿಹ್ರಾಗ ಕುಲದ ಸಸ್ಯ.