(ಪ್ರಾಣಿವಿಜ್ಞಾನ) ಇಕಿಡ್ನ; ಬಿಲಗಳಲ್ಲಿ ವಾಸಿಸುವ, ತತ್ತಿ ಇಡುವ, ಇರುವೆ ತಿನ್ನುವ, ಮುಳ್ಳುಹಂದಿಯಂತಹ, ಹಲ್ಲುಗಳಿಲ್ಲದ, ಆಸ್ಟ್ರೇಲಿಯದ ಒಂದು ಸಸ್ತನಿ.
echinite
ನಾಮವಾಚಕ
ಎಕಿನೈಟ್; ಒಂದು ಬಗೆಯ ಸಮುದ್ರಪೋರದ ಪಳೆಯುಳಿಕೆ.
echinoderm
ನಾಮವಾಚಕ
(ಪ್ರಾಣಿವಿಜ್ಞಾನ) ಕಂಟಕಚರ್ಮಿ; ಮುಳ್ಳಂಗಿ; ನಕ್ಷತ್ರ — ಮೀನು, ಸಮುದ್ರಪೋರಗಳನ್ನು ಒಳಗೊಂಡ, ಮುಳ್ಳುಮುಳ್ಳಾದ ಚರ್ಮವಿರುವ ಎಕಿನಡರ್ಮಟ ವಿಭಾಗದ ಯಾವುದೇ ಸಮುದ್ರಜೀವಿ.
echinodermata
ನಾಮವಾಚಕ
(ಪ್ರಾಣಿವಿಜ್ಞಾನ) ಏಕಿನೊಡರ್ಮಟ; ಕಂಟಕಚರ್ಮಿಗಳು; ನಕ್ಷತ್ರ ಮೀನು; ಸಮುದ್ರಪೋರ, ಮೊದಲಾದ ಮುಳ್ಳುದೇಹದ ಸಮುದ್ರಜೀವಿಗಳನ್ನೊಳಗೊಂಡ ಒಂದು ಪ್ರಾಣಿ ರಾಜ್ಯ ವಿಭಾಗ.
echinoid
ನಾಮವಾಚಕ
= sea urchin.
echinology
ನಾಮವಾಚಕ
ಎಕಿನಾಲಜಿ; ಕಂಟಕಚರ್ಮಿ ವಿಜ್ಞಾನ; ಕಂಟಕಚರ್ಮಿಗಳನ್ನು ಕುರಿತ ಪ್ರಾಣಿವಿಜ್ಞಾನ ವಿಭಾಗ.
echinus
ನಾಮವಾಚಕ
(ಪ್ರಾಣಿವಿಜ್ಞಾನ) ಎಕೈನಸ್; ವಿವಿಧ ಬಗೆಯ ಸಮುದ್ರಪೋರಗಳನ್ನೊಳಗೊಂಡ ಒಂದು ಪ್ರಾಣಿಕುಲ.
ಈ ಕುಲದ ಒಂದು ಸಮುದ್ರಪೋರ.
ಕಂಬದ ಬೋದಿಗೆಯ ಕೆಳಗಿನ ಅಲಂಕಾರದ ಕೆತ್ತನೆ ಯಾ ರಚನೆ.
echo
ನಾಮವಾಚಕ
ನುಡಿಗಟ್ಟು
(cheer person etc.) to the echo (ವ್ಯಕ್ತಿ ಮೊದಲಾದವರಿಗೆ) ಗಟ್ಟಿಯಾಗಿ, ಜೋರಾಗಿ, ಮೊಳಗುವಂತೆ, ಮಾರ್ದನಿಸುವಂತೆ, ಪ್ರತಿಧ್ವನಿಸುವಂತೆ (ಜಯಕಾರಮಾಡು).
ಮರುಧ್ವನಿ; ಪ್ರತಿಧ್ವನಿ; ಅನುರಣನ; ಮಾರ್ದನಿ; ಮಾರುಲಿ; ಹೊಳಲು; ಎದುರುಲಿ; ಧ್ವನಿ ತರಂಗಗಳು ಪ್ರತಿಫಲಿಸಿ ಧ್ವನಿಯ ಪುನರಾವರ್ತನೆಯಾಗುವುದು.
(Echo) (ಗ್ರೀಕ್ ಪುರಾಣ) ಪ್ರತಿಧ್ವನಿ ದೇವತೆ.
(ಪ್ರಸಿದ್ಧ ಕವಿ, ಭಾವ, ಭಾವನೆ, ಶೈಲಿ, ಮೊದಲಾದವುಗಳ) ಗಾಢ ಅನುಕರಣ; ಹತ್ತಿರದ ಹೋಲಿಕೆ; ಸಮೀಪಸಾಮ್ಯ: containing strong echoes from Milton ಮಿಲ್ಟನ್ನನ ಕಾವ್ಯದ ಅನುಕರಣವಿರುವ, ಹತ್ತಿರದ ಹೋಲಿಕೆ ಇರುವ.