logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

danger list
ನಾಮವಾಚಕ
ಅಪಾಯ ಪಟ್ಟಿ; ಆಸ್ಪತ್ರೆಯಲ್ಲಿ ಅಪಾಯಸ್ಥಿತಿಯಲ್ಲಿ ಯಾ ಅತಿರುಗ್ಣಾವಸ್ಥೆಯಲ್ಲಿ ಇರುವ ರೋಗಿಗಳ ಪಟ್ಟಿ.

danger money
ನಾಮವಾಚಕ
ಅಪಾಯ ನಿಧಿ; ಅಪಾಯಕಾರಿ ಕೆಲಸ ಮಾಡಿದಾಗ ಕೊಡುವ, ಮೂಲ ವೇತನಕ್ಕಿಂತ ಹೆಚ್ಚಿಗೆ ಪಾವತಿ ಮಾಡುವ ಹಣ.

dangerous
ಗುಣವಾಚಕ ಪದಗುಚ್ಛ
ಅಪಾಯಕರ; ಆಪತ್ತಿನ; ವಿಪತ್ತಿನ; ಅಪಾಯಕಾರಿ. dangerous drug ಅಪಾಯಕಾರಿ ಮಾದಕ (ವಸ್ತು); ಮುಖ್ಯವಾಗಿ ಚಟ ಯಾ ಗೀಳನ್ನುಂಟು ಮಾಡುವ ನಶೀಲಿ ಪದಾರ್ಥ.

dangerously
ಕ್ರಿಯಾವಿಶೇಷಣ
ಅಪಾಯಕರವಾಗಿ.

dangle
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ವಸ್ತುವನ್ನು) ತೂಗಾಡಿಸು; ನೇತಾಡುವಂತೆ ಹಿಡಿದುಕೊ; ಜೋಲಾಡಿಸುತ್ತಾ ಒಯ್ಯು.
  • (ವ್ಯಕ್ತಿಗೆ) ಆಸೆತೋರಿಸು; ಪ್ರಲೋಭನ ಬೀರು.

  • dangler
    ನಾಮವಾಚಕ
  • ನೇತಾಡುವಂಥದು; ತೂಗಾಡುವಂಥದು.
  • ಓಲಾಡಿ; ಹೆಣ್ಣಿನ ಹಿಂದೆ ಮುಂದೆ ಓಲಾಡುವವ.

  • Daniel
    ನಾಮವಾಚಕ
  • ಪ್ರಾಮಾಣಿಕ ನ್ಯಾಯಾಧೀಶ; ನೇರ ನಡತೆಯ ನ್ಯಾಯಾಧಿಪತಿ.
  • ಪ್ರಾಜ್ಞ; ವಿವೇಕಿ; ಖಚಿತವಾದ ಯುಕ್ತಾಯುಕ್ತ ಪರಿಜ್ಞಾನವುಳ್ಳವನು.

  • Danish
    ನಾಮವಾಚಕ
    ಡೇನರ ಭಾಷೆ; ಡೆನ್ಮಾರ್ಕ್‍ ದೇಶದ ಭಾಷೆ.

    Danish
    ಗುಣವಾಚಕ
    ಡೇನರ; ಡೆನ್ಮಾರ್ಕಿನ; ಡೇನರಿಗೆ ಯಾ ಡೆನ್ಮಾರ್ಕಿಗೆ ಸಂಬಂಧಿಸಿದ.

    Danish blue
    ನಾಮವಾಚಕ
    ಡೇನಿಷ್‍ ನೀಲಿ; ನೀಲಿ ಗೆರೆಗಳಿರುವ ಮೃದುವಾದ ಬಿಳಿ ಗಿಣ್ಣು.


    logo