logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cage
ನಾಮವಾಚಕ
  • (ಮುಖ್ಯವಾಗಿ ಹಕ್ಕಿಗಳು, ಪ್ರಾಣಿಗಳು ಯಾ ಯುದ್ಧದ ಸೆರೆಯಾಳುಗಳನ್ನು ಇಡಲು, ತಂತಿ ಯಾ ಕಂಬಗಳಿಂದ ಮಾಡಿದ, ಒಂದು ಕಡೆ ಇಡುವ ಯಾ ಒಯ್ಯಲು ಬರುವ) ಪಂಜರ; ಬೋನು; ಗೂಡು.
  • (ರೂಪಕವಾಗಿ ಸಹ) ಸೆರೆ; ಸೆರೆಮನೆ; ತುರಂಗ; ಕಾರಾಗೃಹ; ಜೈಲು.
  • (ಗಣಿಗಾರಿಕೆ) ಸಾಗು-ತೊಟ್ಟಿಲು, ಪಂಜರ, ಪೆಟ್ಟಿಗೆ; ಜನ, ಸಾಮಾನು ಮೊದಲಾದವನ್ನು ಮೇಲಕ್ಕೆತ್ತಲು ಯಾ ಕೆಳಕ್ಕೆ ಇಳಿಸಲು ಬಳಸುವ, ಗೂಡಿನ ಚೌಕಟ್ಟು ಯಾ ಪಂಜರದಂಥ ಪೆಟ್ಟಿಗೆ.
  • (ಲಿಹ್ಟ್‍ನಲ್ಲಿ ಪ್ರಯಾಣಿಕರು ಮೊದಲಾದವರಿಗಾಗಿ ಇರುವ) ಅಂಕಣ ಯಾ ಭಾಗ.
  • (ಅನೇಕ ಬಗೆಯ) ತೆರೆದ-ಪಂಜರಗಳು, ಚೌಕಟ್ಟುಗಳು, ಗೂಡುಗಳು.

  • cage
    ಸಕರ್ಮಕ ಕ್ರಿಯಾಪದ
  • ಪಂಜರದಲ್ಲಿಡು; ಬೋನಿನಲ್ಲಿರಿಸು; ಬೋನಿಗೆ ಹಾಕು.
  • ಸೆರೆಯಲ್ಲಿಡು; ಬಂಧನದಲ್ಲಿಡು.

  • cage-bird
    ನಾಮವಾಚಕ
    ಪಂಜರಪಕ್ಷಿ; ಗೂಡಿನ ಹಕ್ಕಿ; ಸಾಮಾನ್ಯವಾಗಿ ಪಂಜರದಲ್ಲಿಟ್ಟು ಸಾಕುವ ಹಕ್ಕಿ.

    cagey
    ಗುಣವಾಚಕ
    ( ತರರೂಪ cagier, ತಮರೂಪ cagiest). (ಆಡುಮಾತು)
  • ಚಾಣಾಕ್ಷ; ಚುರುಕುಬುದ್ಧಿಯ; ಬದ್ಧಿವಂತಿಕೆಯ; ಸೂಕ್ಷ್ಮಮತಿಯ.
  • ಎಚ್ಚರಿಕೆಯ; ಹುಷಾರಿನ; ಜಾಗರೂಕ: a cagey reply ಜಾಗರೂಕ ಉತ್ತರ.
  • ಮೌನ ಪ್ರವೃತ್ತಿಯ; ಮಾತನಾಡದ; ಬಾಯಿಬಿಡದ.
  • ಗುಟ್ಟುಮಾಡುವ; ಮುಚ್ಚುಮರೆಯ; ಗೋಪ್ಯಸ್ವಭಾವದ; ರಹಸ್ಯಸ್ವಭಾವದ.

  • cageyness
    ನಾಮವಾಚಕ
    =caginess.

    cagily
    ಕ್ರಿಯಾವಿಶೇಷಣ
  • ಚಾಣಾಕ್ಷತನದಿಂದ; ಬುದ್ಧಿವಂತಿಕೆಯಿಂದ.
  • ಎಚ್ಚರಿಕೆಯಿಂದ; ಎಚ್ಚರದಿಂದ; ಹುಷಾರಿನಿಂದ; ಜಾಗರೂಕನಾಗಿ.
  • ಬಾಯಿಬಿಡದೆ; ಮನಸ್ಸಿನಲ್ಲಿರುವುದನ್ನು ತಿಳಿಸದೆ.
  • ರಹಸ್ಯವಾಗಿ; ಗುಟ್ಟಾಗಿ.

  • caginess
    ನಾಮವಾಚಕ
  • ಚಾಣಾಕ್ಷತನ.
  • ಎಚ್ಚರಿಕೆ; ಹುಷಾರು; ಜಾಗರೂಕತೆ.
  • ಮನಸ್ಸಿನಲ್ಲಿರುವುದನ್ನು ತಿಳಿಸದಿರುವಿಕೆ.
  • ರಹಸ್ಯತನ; ಗುಟ್ಟುಮಾಡುವಿಕೆ.

  • cagoule
    ನಾಮವಾಚಕ
    (ಪರ್ವತಾರೋಹಣ ಮೊದಲಾದವುಗಳಲ್ಲಿ ಧರಿಸುವ) ಗಾಳಿ ಹೊಗದ, ತಲೆಗವುಸುಳ್ಳ, ತೆಳು ಉಡುಪು.

    cagy
    ಗುಣವಾಚಕ
    =cagey.

    cahoot
    ನಾಮವಾಚಕ ನುಡಿಗಟ್ಟು
  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) (ಸಾಮಾನ್ಯವಾಗಿ ಬಹುವಚನದಲ್ಲಿ) (ವ್ಯಾಪಾರಸಂಸ್ಥೆ) ಪಾಲುಗಾರಿಕೆ.
  • ತಂತ್ರ; ಹೂಟ; ಒಳಸಂಚು; ಪಿತೂರಿ.


  • logo