logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

backstage
ಕ್ರಿಯಾವಿಶೇಷಣ
  • (ರಂಗಮಂದಿರ ಮೊದಲಾದವುಗಳ) ನೇಪಥ್ಯದಲ್ಲಿ; ತೆರೆಯ ಹಿಂದೆ; ತೆರೆಮರೆಯಲ್ಲಿ; ರಂಗದ ಹಿಂದೆ.
  • (ರೂಪಕವಾಗಿ) ಮರೆಯಲ್ಲಿ; ತೆರೆಮರೆಯಲ್ಲಿ; ಗುಟ್ಟಿನಲ್ಲಿ; ಗುಪ್ತರೀತಿಯಲ್ಲಿ; ರಹಸ್ಯವಾಗಿ.

  • backstay
    ನಾಮವಾಚಕ
  • (ನೌಕಾಯಾನ) (ಸಾಮಾನ್ಯವಾಗಿ ಬಹುವಚನದಲ್ಲಿ) ಕೂವೆ ಹಗ್ಗ.
  • (ಮುದ್ರಣ, ಚಪ್ಪಲಿ ಹೊಲಿಯುವುದು ಮೊದಲಾದವುಗಳಲ್ಲಿ ನಾನಾ ರೀತಿಯ) ಹಿನ್ನಾಸರೆ; ಹಿಂಭಾಗದ – ಆಧಾರ, ಆಸರೆ.

  • backstitch
    ನಾಮವಾಚಕ
  • (ಹೊಲಿಗೆ ಯಂತ್ರದ ಹೊಲಿಗೆಯನ್ನು ಹೋಲುವ, ಕೈಯಿಂದ ಹೊಲಿದ) ಒತ್ತು, ಇಚ್ಚಡಿ – ಹೊಲಿಗೆ.
  • ಒತ್ತು ಹೊಲಿಗೆ ಹಾಕುವುದು.

  • backstitch
    ಅಕರ್ಮಕ ಕ್ರಿಯಾಪದ
    ( ಸಕರ್ಮಕ ಕ್ರಿಯಾಪದ ಸಹ) ಒತ್ತು ಹೊಲಿಗೆ ಹಾಕು; ಒತ್ತು ಹೊಲಿಗೆಗಳಿಂದ (ಯಾವುದನ್ನೇ) ಹೊಲಿ.

    backstroke
    ನಾಮವಾಚಕ
  • (ಆಟದಲ್ಲಿ) ಹಿಂಗೈ ಏಟು; ಹಿಂಗೈನಿಂದ ಹೊಡೆದ ಏಟು.
  • ಮಾರೇಟು; ಪ್ರತಿಹೊಡೆತ.
  • (ಅಂಗಾತ ಈಜುವಾಗ ಮಾಡುವ) ಹಿಂಗೈಬೀಸು.

  • backtalk
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = backchat.

    backtrack
    ಅಕರ್ಮಕ ಕ್ರಿಯಾಪದ
    = back-pedal(2).

    backveld
    ನಾಮವಾಚಕ
    (ದಕ್ಷಿಣ ಆಫ್ರಿಕದಲ್ಲಿ) = back country.

    backward
    ಗುಣವಾಚಕ
  • ಹಿಮ್ಮೊಗ(ನಾದ); ಮುಖ ತಿರುಗಿದ; ವಿಮುಖ; ಹಿಂದಕ್ಕೆ ಯಾ ಮೊದಲ ಸ್ಥಾನಕ್ಕೆ ಹೊರಟ: backward movement ಹಿಮ್ಮೊಗ ಚಲನೆ.
  • ಹಿಂದಿರುಗಿದ; ವಾಪಸ್ಸು: backward journey ವಾಪಸ್ಸು ಪ್ರಯಾಣ.
  • (ವ್ಯಕ್ತಿ ಮೊದಲಾದವರ ವಿಷಯದಲ್ಲಿ) ಹಿಂತೆಗೆಯುವ; ನಾಚಿಕೆಯ; ಸಂಕೋಚಶೀಲ; ಸಂಕೋಚ – ಸ್ವಭಾವದ, ಪ್ರವೃತ್ತಿಯ.
  • (ವ್ಯಕ್ತಿ ಮೊದಲಾದವರ ವಿಷಯದಲ್ಲಿ) ಹಿಂದಾಗುವ; ಮಂದಗತಿಯ; ಮುಂದುವರಿಯಲು – ಹಿಂತೆಗೆಯುವ, ಇಷ್ಟವಿಲ್ಲದ; ಜಡ.
  • ಹಿಂದುಳಿದ; ಹಿಂದೆ ಬಿದ್ದ.

  • backward
    ಕ್ರಿಯಾವಿಶೇಷಣ
    = backwards.


    logo