logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abominably
ಕ್ರಿಯಾವಿಶೇಷಣ
ಜುಗುಪ್ಸೆ ಹುಟ್ಟಿಸುವಂತೆ; ಅಸಹ್ಯಕರವಾಗಿ.

abominate
ಸಕರ್ಮಕ ಕ್ರಿಯಾಪದ
  • ಅಸಹ್ಯ ಪಡು; ಬಹುವಾಗಿ ಹೇಸು.
  • (ಅತಿಶಯೋಕ್ತಿ) ಇಷ್ಟಪಡದಿರು; ದ್ವೇಷಿಸು.

  • abomination
    ನಾಮವಾಚಕ
  • ಜುಗುಪ್ಸೆ; ಹೇವರಿಕೆ; ಅಸಹ್ಯತೆ.
  • ಅಸಹ್ಯ; ಅಸಹ್ಯಕರ ಯಾ ಹೇಸಿಗೆಯ–ಪದ್ಧತಿ, ನಡತೆ, ಕೆಲಸ, ವ್ಯಕ್ತಿ, ವಸ್ತು, ಮೊದಲಾದವು.

  • aboral
    ಗುಣವಾಚಕ
    (ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ) ಅಪಮುಖ; ಬಾಯಿಗೆ ವಿಮುಖವಾಗಿಯೋ ದೂರವಾಗಿಯೋ ಇರುವ.

    aboriginal
    ಗುಣವಾಚಕ
  • (ಜನಾಂಗಗಳ ಮತ್ತು ನಿಸರ್ಗದ ವಸ್ತುಗಳ ವಿಷಯದಲ್ಲಿ) ಸ್ಥಳೀಕ; ಇತಿಹಾಸದ ಮೊದಲಲ್ಲಿ ಯಾ ಹೊರ ನೆಲಸಿಗರು ಅಲ್ಲಿಗೆ ಬರುವುದಕ್ಕೂ ಮುಂಚೆ ಇದ್ದ, ವಾಸಿಸುತ್ತಿದ್ದ.
  • Aboriginalc ಆಸ್ಟ್ರೇಲಿಯದ ಮೂಲನಿವಾಸಿಯ.

  • aboriginal
    ನಾಮವಾಚಕ
    (ಸಾಮಾನ್ಯವಾಗಿ Aboriginal)(ಮುಖ್ಯವಾಗಿ ಆಸ್ಟ್ರೇಲಿಯದ) ಮೂಲನಿವಾಸಿ; ಆದಿವಾಸಿ; ಸ್ಥಳೀಕ; ಆದಿಯಿಂದಲೂ ವಾಸವಾಗಿರುವ ಬುಡಕಟ್ಟಿನವನು.

    aboriginality
    ನಾಮವಾಚಕ
    ಮೂಲ ನಿವಾಸಿತ್ವ; ಆದಿವಾಸಿತ್ವ; ಸ್ಥಳೀಕತೆ.

    aboriginally
    ಕ್ರಿಯಾವಿಶೇಷಣ
    ಮುಮ್ಮೊದಲಿನಿಂದ; ಆದಿಕಾಲದಿಂದ; ಪ್ರಾರಂಭಕಾಲದಿಂದ; ಪ್ರಪ್ರಾಚೀನ ಕಾಲದಿಂದ.

    aborigine
    ನಾಮವಾಚಕ
    (ಸಾಮಾನ್ಯವಾಗಿ ಬಹುವಚನದಲ್ಲಿ ಉಚ್ಚಾರಣೆ ಆಬರಿಜಿನಿ()ಸ್‍)
  • = 2aboriginal.
  • ಸ್ಥಳೀಯ ಸಸ್ಯಗಳು ಯಾ ಪ್ರಾಣಿಗಳು; ಒಂದು ಸ್ಥಳದಲ್ಲಿ ಯಾ ದೇಶದಲ್ಲಿ ಮೊದಲಿನಿಂದಲೂ ಇದ್ದ ಯಾ ಇರುವ ಸಸ್ಯಗಳು ಯಾ ಪ್ರಾಣಿಗಳು.

  • aborning
    ಕ್ರಿಯಾವಿಶೇಷಣ
    (ಅಮೆರಿಕನ್‍ ಪ್ರಯೋಗ) ಹುಟ್ಟುತ್ತಾ; ಉತ್ಪತ್ತಿಯಾಗುತ್ತಾ.


    logo