logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

insensately
ಕ್ರಿಯಾವಿಶೇಷಣ
  • ಸಂವೇದನರಹಿತವಾಗಿ; ಅರಿವಿಲ್ಲದೆ; ಭಾವನಾಶೂನ್ಯವಾಗಿ.
  • ಮೂರ್ಖತನದಿಂದ; ಅವಿವೇಕವಾಗಿ; ಬುದ್ಧಿಯಿಲ್ಲದೆ.

  • insensibility
    ನಾಮವಾಚಕ
  • ಸಂವೇದನ ಶೂನ್ಯತೆ; ಅಸಂವೇದನೆ; ಭಾವಹೀನತೆ; ಸಂವೇದನೆಯ ಶಕ್ತಿಯಿಲ್ಲದಿರುವುದು; ಗ್ರಹಣಶಕ್ತಿಯಿಲ್ಲದಿರುವುದು: insensibility to beauty ಸೌಂದರ್ಯಕ್ಕೆ ಅಸಂವೇದನೆ.
  • ಉದಾಸೀನತೆ; ಔದಾಸೀನ್ಯ; ಅಸಡ್ಡೆ; ಅಲಕ್ಷ್ಯ; ಉಪೇಕ್ಷೆ: insensibility to the honour done to him ಅವನಿಗೆ ಸಲ್ಲಿಸಿದ ಗೌರವಕ್ಕೆ ತೋರಿದ ಉದಾಸೀನಭಾವ.
  • ಮೂರ್ಛೆ; ಮೈಮರವು; ಪ್ರಜ್ಞೆಯಿಲ್ಲದಿರುವಿಕೆ: in a state of insensibility ಪ್ರಜ್ಞಾರಹಿತ ಸ್ಥಿತಿ.

  • insensible
    ಗುಣವಾಚಕ
  • ಗೋಚರವಾಗದಷ್ಟು ಸೂಕ್ಷ್ಮವಾದ, ಕ್ರಮಕ್ರಮವಾದ; ದುರ್ಗ್ರಾಹ್ಯ; ಅತಿಸೂಕ್ಷ್ಮ: insensible motion ಗೋಚರವಾಗದಷ್ಟು ಸೂಕ್ಷ್ಮವಾದ ಚಲನೆ.
  • ಅಲಕ್ಷಿತ; ಅಗ್ರಾಹ್ಯ; ಗಮನಕ್ಕೆ ಬರದ; ಗ್ರಾಹ್ಯವಲ್ಲದ; ಗಮನೀಯವಲ್ಲದ.
  • ಪ್ರಜ್ಞೆಯಿಲ್ಲದ; ಎಚ್ಚರವಿಲ್ಲದ; ಮೂರ್ಛಿತ: he fell down and was long insensible ಅವನು ಕೆಳಕ್ಕೆ ಬಿದ್ದು ಬಹುಕಾಲ ಮೂರ್ಛಿತನಾಗಿದ್ದ.
  • ಅರಿಯದ; ಅಜ್ಞ; ತಿಳಿದಿಲ್ಲದ; ಅನಭಿಜ್ಞ: insensible of their danger ತಮ್ಮ ಅಪಾಯದ ಬಗ್ಗೆ ಅರಿವಿಲ್ಲದೆ.
  • ಭಾವಶೂನ್ಯ; ಕಲ್ಲೆದೆಯ; ನಿರ್ದಯ; ಕಠೋರ: he filled the most insensible with terror ಅವನು ಅತ್ಯಂತ ಕಲ್ಲೆದೆಯವರನ್ನೂ ತಲ್ಲಣಗೊಳಿಸಿದನು.

  • insensibly
    ಕ್ರಿಯಾವಿಶೇಷಣ
    ಅತಿಸೂಕ್ಷ್ಮವಾಗಿ; ಗಮನಕ್ಕೆ ಬರದಂತೆ; ದುರ್ಗ್ರಾಹ್ಯವಾಗಿ; ಗೋಚರವಾಗದಷ್ಟು ಸೂಕ್ಷ್ಮವಾದ, ಕ್ರಮಕ್ರಮವಾದ – ರೀತಿಯಲ್ಲಿ.

    insensitive
    ಗುಣವಾಚಕ
    (ಸ್ಪರ್ಶ, ದೃಷ್ಟಿ, ಬೆಳಕು, ಮಾನಸಿಕ ಯಾ ನೈತಿಕ ಪರಿಣಾಮಗಳ ವಿಷಯದಲ್ಲಿ) ಅಸಂವೇದಿಯಾದ; ಸೂಕ್ಷ್ಮಗ್ರಾಹಿಯಲ್ಲದ; ಗ್ರಹಿಸದ; ಸಂವೇದಿಯಲ್ಲದ; ಪ್ರತಿಕ್ರಿಯೆ ತೋರದ.

    insensitively
    ಕ್ರಿಯಾವಿಶೇಷಣ
    ಅಸಂವೇದಿಯಾಗಿ; ಸೂಕ್ಷ್ಮಗ್ರಾಹಿಯಾಗಿರದೆ; ಪ್ರತಿಕ್ರಿಯೆ ತೋರದಂತೆ.

    insensitiveness
    ನಾಮವಾಚಕ
    ಅಸಂವೇದನೆ; ಅಗ್ರಹಣಶೀಲತೆ; ಸೂಕ್ಷ್ಮಗ್ರಾಹಿಯಲ್ಲದ – ಗುಣ, ಲಕ್ಷಣ; ಗ್ರಹಿಸದಿರುವಿಕೆ; ಪ್ರತಿಕ್ರಿಯೆ ತೋರದಿರುವಿಕೆ.

    insensitivity
    ನಾಮವಾಚಕ
    = insensitiveness.

    insentient
    ಗುಣವಾಚಕ
    ಅಚೇತನ; ಜಡ.

    inseparability
    ನಾಮವಾಚಕ
    ಬೇರ್ಪಡಿಸಲಾಗದಿರುವಿಕೆ; ಬೇರೆ ಮಾಡಲಾಗದಿರುವಿಕೆ; ಪ್ರತ್ಯೇಕಿಸಲಾಗದಿರುವಿಕೆ; ಅಗಲಿಸಲಾಗದಿಕೆ; ಅಪೃಥಕ್ಕರಣೀಯತೆ; ಅವಿಯೋಜ್ಯತೆ.


    logo