logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

insecticide
ನಾಮವಾಚಕ
  • (ಮುಖ್ಯವಾಗಿ ಕೀಟಗಳನ್ನು ಕೊಲ್ಲುವುದಕ್ಕಾಗಿ ತಯಾರಿಸಿದ) ಕೀಟನಾಶಕ; ಕ್ರಿಮಿನಾಶಕ; ಕ್ರಿಮಿನಾಶಿ ವಸ್ತು.
  • ಕೀಟನಾಶನ; ಕೀಟಗಳನ್ನು ಕೊಲ್ಲುವುದು.

  • insectivore
    ನಾಮವಾಚಕ
    ಹುಳುದಿನಿ; ಕೀಟಾಹಾರಿ; ಕೀಟದಿನಿ; ಕೀಟಭಕ್ಷಕ (ಪ್ರಾಣಿ ಯಾ ಸಸ್ಯ); ಕೀಟಾದ.

    insectivorous
    ಗುಣವಾಚಕ
    ಕೀಟಭಕ್ಷಕ; ಕೀಟಾಹಾರಿ; ಕೀಟಗಳನ್ನು ಆಹಾರವಾಗುಳ್ಳ.

    insectology
    ನಾಮವಾಚಕ
    ಕೀಟಶಾಸ್ತ್ರ; ಕೀಟವಿಜ್ಞಾನ; ಮುಖ್ಯವಾಗಿ ಕೀಟಗಳಿಗೂ ಮನುಷ್ಯನಿಗೂ ಇರುವ ಆರ್ಥಿಕ ಸಂಬಂಧವನ್ನು ಕುರಿತ ಶಾಸ್ತ್ರ.

    insecure
    ಗುಣವಾಚಕ
  • ಅರಕ್ಷಿತ; ಅಭದ್ರ; ಸುರಕ್ಷಿತವಾಗಿರದ; ಭದ್ರತೆಯಿಲ್ಲದ; ರಕ್ಷಣೆಯಿಲ್ಲದ; ನಿರಪಾಯವಾಗಿರದ: property was very insecure during the riots ದೊಂಬಿಗಳ ಕಾಲದಲ್ಲಿ ಆಸ್ತಿಪಾಸ್ತಿಗೆ ಸ್ವಲ್ಪವೂ ರಕ್ಷಣೆಯಿರಲಿಲ್ಲ.
  • ಅದೃಢ; ಅಸ್ಥಿರ; ದೃಢವಾಗಿರದ; ನಂಬಲಾಗದ; ನೆಚ್ಚಲಾಗದ: insecure hold on ನೆಚ್ಚಲಾಗದ ಹಿಡಿತ.
  • (ಮಂಜುಗಡ್ಡೆ, ನೆಲ, ಮೊದಲಾದವುಗಳ ವಿಷಯದಲ್ಲಿ) ಕುಸಿಯಬಹುದಾದ; ಗಟ್ಟಿಯಾಗಿರದ; ದೃಢವಾಗಿರದ; ಅಸ್ಥಿರ: insecure foundations ಅಸ್ಥಿರ ತಳಪಾಯ.
  • (ವ್ಯಕ್ತಿ ಯಾ ಮನಃಸ್ಥಿತಿಯ ವಿಷಯದಲ್ಲಿ) ಅನಿಶ್ಚಿತ; ಅಸ್ಥಿರ; ನೆಚ್ಚಿಕೆಯಿಲ್ಲದ; ಭರವಸೆಯಿಲ್ಲದ; ಆತ್ಮವಿಶ್ವಾಸವಿಲ್ಲದ; ಭಯ, ಶಂಕೆ, ಮೊದಲಾದವುಗಳಿಗೆ ಒಳಗಾದ: an insecure person ಆತ್ಮವಿಶ್ವಾಸವಿಲ್ಲದ ವ್ಯಕ್ತಿ; ಭಯಗ್ರಸ್ತ ಯಾ ಸಂದೇಹಗ್ರಸ್ತ ವ್ಯಕ್ತಿ.

  • insecurely
    ಕ್ರಿಯಾವಿಶೇಷಣ
  • ಭದ್ರತೆಯಿಲ್ಲದೆ; ಅರಕ್ಷಿತವಾಗಿ; ಸುರಕ್ಷಣೆಯಿಲ್ಲದೆ.
  • ಅದೃಢವಾಗಿ; ದೃಢವಾಗಿರದಂತೆ; ನೆಚ್ಚಲಾಗದಂತೆ.
  • ಗಟ್ಟಿಯಾಗಿಲ್ಲದೆ; ಕುಸಿಯಬಹುದಾದಂತೆ; ಕುಸಿದುಹೋಗಬಹುದಾದ ರೀತಿಯಲ್ಲಿ.
  • (ವ್ಯಕ್ತಿ ಯಾ ಮನಸ್ಸಿನ ವಿಷಯದಲ್ಲಿ) ಅಸ್ಥಿರವಾಗಿ; ಆತ್ಮವಿಶ್ವಾಸವಿಲ್ಲದೆ; ಭಯಗ್ರಸ್ತವಾಗಿ; ಭಯ, ಶಂಕೆ, ಮೊದಲಾದವಕ್ಕೆ ಒಳಗಾದಂತೆ.

  • insecurity
    ನಾಮವಾಚಕ
  • ಅಭದ್ರತೆ; ಅರಕ್ಷತೆ; ರಕ್ಷಣೆ, ಭದ್ರತೆ ಇಲ್ಲದಿರುವ ಸ್ಥಿತಿ.
  • ನೆಚ್ಚಿಕೆಯಿಲ್ಲದಿರುವಿಕೆ; ಭರವಸೆಯಿಲ್ಲದಿರುವಿಕೆ.
  • ಅಸ್ಥಿರತೆ; ಅದೃಢತೆ; ಕುಸಿದುಹೋಗಬಹುದಾದ ಸ್ಥಿತಿ.
  • (ವ್ಯಕ್ತಿ ಯಾ ಮನಸ್ಸಿನ ವಿಷಯದಲ್ಲಿ) ಅಸ್ಥಿರತೆ; ಭಯ, ಶಂಕೆ, ಮೊದಲಾದವಕ್ಕೆ ಒಳಗಾಗಿರುವಿಕೆ.

  • inseminate
    ಸಕರ್ಮಕ ಕ್ರಿಯಾಪದ
  • (ಬೀಜ ಮೊದಲಾದವನ್ನು) ಬಿತ್ತು; ಹಾಕು; ನೆಡು; ಬೀಜಾವಾಪ ಮಾಡು (ರೂಪಕವಾಗಿ ಸಹ): inseminate the minds of the young with practical ideals ಕಿರಿಯರ ಮನಸ್ಸುಗಳಲ್ಲಿ ಕಾರ್ಯಸಾಧ್ಯ ಆದರ್ಶಗಳನ್ನು ಬಿತ್ತು.
  • (ಸಹಜ ಯಾ ಕೃತಕ ವಿಧಾನದಿಂದ) ವೀರ್ಯವಿಡು; ಬಸಿರು ಮಾಡು; ಗರ್ಭಾಧಾನ ಮಾಡು; ವೀರ್ಯವನ್ನು ಒಳಹೊಗಿಸು.

  • insemination
    ನಾಮವಾಚಕ
    (ಮುಖ್ಯವಾಗಿ ಪ್ರಾಣಿಗಳ ಕೃತಕ) ವೀರ್ಯಾಧಾನ; ಗರ್ಭಾಧಾನ.

    insensate
    ಗುಣವಾಚಕ
  • ಸಂವೇದನ ರಹಿತ; ಭಾವನಾಶೂನ್ಯ; ಸಂವೇದನಶಕ್ತಿಯಿಲ್ಲದ; ಅರಿವುತಟ್ಟದ: insensate to beauty ಸೌಂದರ್ಯ ಭಾವನೆ ತಟ್ಟದ.
  • ಬುದ್ಧಿಯಿಲ್ಲದ; ಅರ್ಥವಿಲ್ಲದ; ಮೂರ್ಖತನದ; ಅವಿವೇಕದ: insensate cruelty ಅರ್ಥವಿಲ್ಲದ ಕ್ರೌರ್ಯ.
  • ಹುಚ್ಚು; ಹುಚ್ಚಿನ: insensate rage ಹುಚ್ಚುಕೋಪ.
  • ಅಚೇತನ; ಜಡ; ಇಂದ್ರಿಯ ಸಂವೇದನೆಯಿಲ್ಲದ: insensate rocks ಜಡ ಬಂಡೆಗಳು.


  • logo