(ಪ್ರಾಣಿವಿಜ್ಞಾನ) ಇನ್ಸೆಕ್ಟ ವರ್ಗಕ್ಕೆ ಸೇರಿದ ಒಂದು ಸಂಧಿಪದಿ.
(ರೂಪಕವಾಗಿ) ಕೀಟ; ಹುಲುಮನುಷ್ಯ; ನರಹುಳು; ತುಚ್ಛವ್ಯಕ್ತಿ; ಕ್ಷುದ್ರಪ್ರಾಣಿ; ಕ್ಷುಲ್ಲಕವ್ಯಕ್ತಿ: insects that skim in the world of fashion ಷೋಕಿಯ ಜಗತ್ತಿನಲ್ಲಿ ಚಿಮ್ಮಿ ಸರಿಯುವ ಕ್ಷುದ್ರಪ್ರಾಣಿಗಳು.
insect-powder
ನಾಮವಾಚಕ
ಹುಳುಪುಡಿ; ಕೀಟಚೂರ್ಣ; ಕೀಟಗಳನ್ನು ಕೊಲ್ಲಲು ಯಾ ಓಡಿಸಲು ಬಳಸುವ ಪುಡಿ.
insecta
ನಾಮವಾಚಕ
(ಪ್ರಾಣಿವಿಜ್ಞಾನ) ಇನ್ಸೆಕ್ಟ; ಆರ್ತ್ರಾಪಡ ವಿಭಾಗಕ್ಕೆ ಸೇರಿದ ಆರು ಕಾಲುಗಳಿರುವ, (ತಲೆ, ಎದೆ ಮತ್ತು ಹೊಟ್ಟೆ ಎಂಬ) ಮೂರು ವಿಭಾಗಗಳಿಂದಾದ ಬೆನ್ನೆಲುಬಿರದ ದೇಹವುಳ್ಳ, ಸಾಮಾನ್ಯವಾಗಿ ರೆಕ್ಕೆಗಳಿರುವ, ಚಿಕ್ಕಚಿಕ್ಕ ಕೀಟಗಳನ್ನೊಳಗೊಂಡ ಒಂದು ಪ್ರಾಣಿವರ್ಗ, ಕೀಟವರ್ಗ.
insectarium
ನಾಮವಾಚಕ
ಕೀಟ ಸಂಗ್ರಹಾಲಯ; ಕೀಟಗೃಹ; ಕೀಟಾಲಯ; ಹುಳುಮನೆ; ಹುಳುಗಳನ್ನು ಸಂಗ್ರಹಿಸುವ ಸ್ಥಳ.