ತೃಪ್ತಿಪಡಿಸಲಾಗದ; ತಣಿಸಲಾಗದ: insatiable hunger for knowledge ತಣಿಸಲಾಗದ ಜ್ಞಾನದ ಹಸಿವು.
ಅತ್ಯಾಸೆಯುಳ್ಳ; ಹೇರಾಸೆಯ; ಲಾಲಸೆಯ; ಅತ್ಯಂತ ದುರಾಸೆಯ: politicians who are insatiable of power ಅಧಿಕಾರಲಾಲಸೆಯ ರಾಜಕಾರಣಿಗಳು.
insatiably
ಕ್ರಿಯಾವಿಶೇಷಣ
ತೃಪ್ತಿಪಡಿಸಲಾಗದಷ್ಟು; ತಣಿಸಲಾರದಷ್ಟು.
ಅತ್ಯಾಸೆಯಿಂದ; ದುರಾಸೆಯಿಂದ.
insatiate
ಗುಣವಾಚಕ
ನಿತ್ಯ ಅತೃಪ್ತ; ಸದಾ ಅತೃಪ್ತ; ಎಂದಿಗೂ ತೃಪ್ತಿ ಹೊಂದದ: insatiate cruelty ಎಂದಿಗೂ ತೃಪ್ತಿಪಡದ ಕ್ರೌರ್ಯ.
inscape
ನಾಮವಾಚಕ
(ಸಾಹಿತ್ಯಕ) ಅಂತರ್ವೈಲಕ್ಷಣ್ಯ; ಅಂತರ್ಗುಣ; ಕಲಾಕೃತಿಯಲ್ಲಿ, ಮುಖ್ಯವಾಗಿ ಕವನದಲ್ಲಿ, ಪ್ರದರ್ಶಿತವಾಗಿರುವ ಬಾಹ್ಯವಸ್ತುಗಳ ಒಳಗಣ ಮುಖ್ಯ ವಿಲಕ್ಷಣ ಗುಣ, ಸತ್ವ, ಲಕ್ಷಣ.
inscribable
ಗುಣವಾಚಕ
(ಜ್ಯಾಮಿತಿ) ಅಂತರ್ರಚನೀಯ; ಅಂತರ್ರಚಿಸಬಹುದಾದ; ಒಳಗೆ ರಚಿಸಬಹುದಾದ.
(ಅಕ್ಷರ ಮೊದಲಾದವುಗಳ ವಿಷಯದಲ್ಲಿ) ಕೆತ್ತಬಹುದಾದ ಯಾ ಬರೆಯಬಹುದಾದ.
inscribe
ಸಕರ್ಮಕ ಕ್ರಿಯಾಪದ
(ಕಲ್ಲು, ಲೋಹ, ಕಾಗದ, ಮೊದಲಾದವುಗಳ ಮೇಲೆ ಮಾತುಗಳನ್ನು) ಬರೆ; ಕೆತ್ತು; ರೇಖಿಸು; ಲೇಖಿಸು.
ವ್ಯಕ್ತಿಯ ಹೆಸರನ್ನು ಪಟ್ಟಿಯಲ್ಲಿ ಯಾ ಪುಸ್ತಕದಲ್ಲಿ – ಬರೆ, ನಮೂದಿಸು, ದಾಖಲು ಮಾಡು.
(ಮುಖ್ಯವಾಗಿ ಅರ್ಪಿಸುವ ಪುಸ್ತಕದಲ್ಲಿ ವ್ಯಕ್ತಿಯ) ಹೆಸರು ಬರೆ.
(ಬ್ರಿಟಿಷ್ ಪ್ರಯೋಗ) (ಮುಖ್ಯವಾಗಿ ಭೂತಕೃದಂತದಲ್ಲಿ) (ಹಿಡುವಳಿದಾರರ ಹೆಸರುಗಳನ್ನು ದಾಖಲು ಮಾಡಿಕೊಂಡು) ಷೇರುಗಳ ರೂಪದಲ್ಲಿ ಸಾಲಕೊಡು: inscribed stock (ಹೆಸರು ದಾಖಲು ಮಾಡಿಕೊಂಡಿರುವ) ಷೇರುಬಂಡವಾಳ ಪತ್ರ.
(ಹಾಳೆ, ಫಲಕ, ಮೊದಲಾದವುಗಳ ಮೇಲೆ ಅಕ್ಷರಗಳಿಂದ) ಗುರುತಿಸು; ಬರೆ; ಮುದ್ರೆಯೊತ್ತು; ಕೆತ್ತು; ಅಂಕಿಸು.
(ಜ್ಯಾಮಿತಿ) ಅಂತರ್ರಚಿಸು; ಒಳಗೆ ರಚಿಸು; ಒಳರಚಿಸು; ನಿರ್ದಿಷ್ಟ ಜ್ಯಾಮಿತೀಯ ಆಕೃತಿಯನ್ನು ಸಾಧ್ಯವಾದಷ್ಟು ಬಿಂದುಗಳಲ್ಲಿ ಸ್ಪರ್ಶಿಸುವಂತೆ, ಆದರೆ ಸಂಪೂರ್ಣವಾಗಿ ಅದರೊಳಗೆಯೇ ಇರುವಂತೆ, (ಒಂದು ಆಕೃತಿಯನ್ನು) ರಚಿಸು.