logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

insalivate
ಸಕರ್ಮಕ ಕ್ರಿಯಾಪದ
(ಆಹಾರಕ್ಕೆ) ಜೊಲ್ಲು ಬೆರಸು; ಲಾಲಾರಸ ಮಿಶ್ರಮಾಡು.

insalivation
ನಾಮವಾಚಕ
(ಆಹಾರಕ್ಕೆ) ಜೊಲ್ಲು ಬೆರಸುವಿಕೆ; ಲಾಲಾ(ರಸ) ಮಿಶ್ರಣ.

insalubrious
ಗುಣವಾಚಕ
(ವಾಯುಗುಣ ಯಾ ಸ್ಥಳದ ವಿಷಯದಲ್ಲಿ) ಅಹಿತಕರ; ಅಸ್ವಾಸ್ಥ್ಯಕರ; ಅನಾರೋಗ್ಯಕರ(ವಾದ).

insalubrity
ನಾಮವಾಚಕ
ಅನಾರೋಗ್ಯಕರತ್ವ; ಅಸ್ವಾಸ್ಥ್ಯಕರತೆ; ಅಹಿತಕರತೆ.

insane
ಗುಣವಾಚಕ
  • ಹುಚ್ಚುಹಿಡಿದ; ಹುಚ್ಚಿನ; ಬುದ್ಧಿವಿಕಲ್ಪದ; ಬುದ್ಧಿವಿಕಲ; ಬುದ್ಧಿಸ್ತಿಮಿತವಿಲ್ಲದ: an insane person ಹುಚ್ಚು ಹಿಡಿದ ವ್ಯಕ್ತಿ.
  • ಬುದ್ಧಿಯಿಲ್ಲದ; ತಲೆಕೆಟ್ಟ; ಬುದ್ಧಿಗೆಟ್ಟ; ಮೂರ್ಖತನದ; ಅವಿವೇಕದ; ತಿಳಿಗೇಡಿತನದ; ಮರುಳುತನದ: insane extravagance ತಿಳಿಗೇಡೆತನದ ದುಂದು.
  • (ಆಸ್ಪತ್ರೆ ಮೊದಲಾದವುಗಳ ವಿಷಯದಲ್ಲಿ) ಹುಚ್ಚರ; ಹುಚ್ಚರಿಗಾಗಿ ಇರುವ; ಬುದ್ಧಿವಿಕಲರ.

  • insane asylum
    ನಾಮವಾಚಕ
    ಹುಚ್ಚಾಸ್ಪತ್ರೆ; ಬುದ್ಧಿವಿಕಲರ ಆಸ್ಪತ್ರೆ.

    insanely
    ಕ್ರಿಯಾವಿಶೇಷಣ
  • ಹುಚ್ಚುಹಿಡಿದಂತೆ; ಬುದ್ಧಿ ವಿಕಲ್ಪವಾಗಿರುವಂತೆ; ಬುದ್ಧಿ ಸ್ತಿಮಿತವಿಲ್ಲದಂತೆ.
  • ಬುದ್ಧಿಯಿಲ್ಲದಂತೆ; ತಲೆ ಕೆಟ್ಟ ರೀತಿಯಲ್ಲಿ; ಮೂರ್ಖತನದಿಂದ; ಅವಿವೇಕದಿಂದ; ತಿಳಿಗೇಡಿತನದಿಂದ.

  • insanitary
    ಗುಣವಾಚಕ
  • ಶುಚಿಯಾಗಿಲ್ಲದ; ಚೊಕ್ಕಟವಾಗಿಲ್ಲದ; ನಿರ್ಮಲವಾಗಿಲ್ಲದ; ನೈರ್ಮಲ್ಯರಹಿತ; ಸ್ವಚ್ಛವಾಗಿಲ್ಲದ.
  • ಅನಾರೋಗ್ಯಕರ; ಆರೋಗ್ಯ ಕೆಡಿಸುವ.

  • insanitation
    ನಾಮವಾಚಕ
  • ಅಸ್ವಚ್ಛತೆ; ಅಶುಚಿತ್ವ; ಅನೈರ್ಮಲ್ಯ; ಶುಚಿಯಿಲ್ಲದಿರುವಿಕೆ; ಚೊಕ್ಕಟವಾಗಿಲ್ಲದಿರುವಿಕೆ.
  • ಅನಾರೋಗ್ಯಕರ ಸ್ಥಿತಿ; ಆರೋಗ್ಯ ಕೆಡಿಸುವ ಸ್ಥಿತಿ.

  • insanity
    ನಾಮವಾಚಕ
  • ಹುಚ್ಚು; ಬುದ್ಧಿವಿಕಲ್ಪ; ಬುದ್ಧಿಭ್ರಮಣೆ; ಬುದ್ಧಿವಿಕಲತೆ; ಉನ್ಮಾದ.
  • ಹುಚ್ಚುತನ; ಅವಿವೇಕ; ಮೂರ್ಖತನ: insanities of idealism ಆದರ್ಶವಾದದ ಅವಿವೇಕಗಳು.


  • logo