logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inquisitiveness
ನಾಮವಾಚಕ
  • ಶೋಧನೆ ಮಾಡುವ, ವಿಚಾರಮಾಡುವ – ಗುಣ; ಕುತೂಹಲತೆ; ಜಿಜ್ಞಾಸಾಶೀಲತೆ.
  • ಅನ್ವೇಷಣ ಪ್ರವೃತ್ತಿ; ಶೋಧಕ ಮನೋಧರ್ಮ; ಕುತೂಹಲಪರತೆ.
  • (ಗುಟ್ಟು ತಿಳಿಯಲು) ಹೊಂಚಿನೋಡುವಿಕೆ; ಹೊಂಚುಹಾಕುವಿಕೆ; ಅಧಿಕಪ್ರಸಂಗಿತನದಿಂದ ತಲೆಹಾಕುವಿಕೆ.
  • ಸುದ್ದಿ ಪಡೆಯುವ ಕುತೂಹಲ.
  • (ಈಗ ಬಹುಮಟ್ಟಿಗೆ ಪ್ರತಿಕೂಲ ಅರ್ಥದಲ್ಲಿ) ಮಿತಿಈರಿದ ಕುತೂಹಲ; ಅತಿಕುತೂಹಲ; ಅಧಿಕಪ್ರಸಂಗಿತನದಿಂದ ಕುತೂಹಲ.

  • inquisitor
    ನಾಮವಾಚಕ ಪದಗುಚ್ಛ
    Grand Inquisitor (ಕೆಲವು ದೇಶಗಳಲ್ಲಿ) ಪಾಷಂಡವಿಚಾರಣಾ ನ್ಯಾಯಾಲಯದ ನಿರ್ದೇಶಕ.
  • ಅಧಿಕೃತ ವಿಚಾರಣಾಧಿಕಾರಿ; (ಅಧಿಕಾರಪೂರ್ವಕವಾಗಿ) ವಿಚಾರಣೆ ನಡೆಸುವವನು; ತನಿಖೆಗಾರ; ತಪಾಸಣೆಗಾರ.
  • (ಚರಿತ್ರೆ) (ರೋಮನ್‍ ಕ್ಯಾಥೊಲಿಕ್‍) ಪಾಷಂಡದಂಡನಾ ವಿಚಾರಣಾಧಿಕಾರಿ.

  • Inquisitor-General
    ನಾಮವಾಚಕ
    (ಸ್ಪೇನ್‍ ದೇಶದಲ್ಲಿ) ಪಾಷಂಡ ವಿಚಾರಣಾಮಂಡಲಿಯ ಮುಖ್ಯಸ್ಥ.

    inquisitorial
    ಗುಣವಾಚಕ
  • ಪಾಷಂಡ (ದಂಡನಾ) ವಿಚಾರಣಾಧಿಕಾರಿಯ ಯಾ ಅವನಂಥ.
  • (ಜುಗುಪ್ಸೆ ಬರುವಷ್ಟು) ಹೊಂಚಿ ಹುಡುಕುವ; ಬೆದಕುವ; ತನಿಖೆ ಮಾಡುವ: inquisitorial tone (ಜುಗುಪ್ಸೆ ಬರುವಷ್ಟು) ತನಿಖೆಯ ದನಿ.
  • (ನ್ಯಾಯಶಾಸ್ತ್ರ) (ತಕ್ಸೀರು ವಿಚಾರಣೆಯಲ್ಲಿ)
    1. ನ್ಯಾಯಾಧೀಶನೇ ಆಪಾದಕನಾಗಿರುವ.
    2. ರಹಸ್ಯವಿಚಾರಣೆಯ; ಗುಪ್ತ ವಿಚಾರಣೆಯ; ವಿಚಾರಣೆ ರಹಸ್ಯವಾಗಿ, ಗುಪ್ತವಾಗಿ ನಡೆಯುವ.

  • inquisitorially
    ಕ್ರಿಯಾವಿಶೇಷಣ
  • ಪಾಷಂಡ ವಿಚಾರಣಾಧಿಕಾರಿಯ ರೀತಿಯಲ್ಲಿ.
  • ಹೊಂಚಿ ಹುಡುಕುವ ರೀತಿಯಲ್ಲಿ.
  • (ಜುಗುಪ್ಸೆ ಬರುವ) ತನಿಖೆಯಂತೆ; ತನಿಖೆ ಮಾಡುವ ಧೋರಣೆಯಿಂದ.

  • inquorate
    ಗುಣವಾಚಕ
    ಕೋರಮ್‍ – ಇಲ್ಲದ, ಆಗದ; ಸದಸ್ಯರ ಅವಶ್ಯ – ಸಂಖ್ಯೆ, ಹಾಜರಿ ಇಲ್ಲದ; ಹಾಜರಿ ಸಾಕಷ್ಟಿಲ್ಲದ.

    INRI
    ಸಂಕ್ಷಿಪ್ತ
    Jesus of Nazareth, King of the Jews. (L: Iesus Nazarenus Rex Iudaeorum) iMda.

    inroad
    ನಾಮವಾಚಕ
  • ಶತ್ರುದಾಳಿ; ದುರಾಕ್ರಮಣ: their homes would be protected aganist inroads by whites ಅವರ ಮನೆಗಳನ್ನು ಬಿಳಿಯರ ದಾಳಿಯಿಂದ ರಕ್ಷಿಸಲಾಗುವುದು.
  • (ರೂಪಕವಾಗಿ) (ಮುಖ್ಯವಾಗಿ ವ್ಯಯ ಮಾಡುವಂಥ) ಆಕ್ರಮಣ; ಅತಿಪ್ರವೇಶ; ಅತಿಕ್ರಮಣ: inroads on our savings ನಮ್ಮ ಉಳಿತಾಯಗಳ ಮೇಲಿನ ಅತಿಕ್ರಮಣ. inroads on my leisure ನನ್ನ ವಿಶ್ರಾಂತಿಕಾಲದ ಮೇಲಿನ (ವಿಶ್ರಾಂತಿಕಾಲವನ್ನು ಹಾಳು ಮಾಡುವ, ವ್ಯಯ ಮಾಡುವ) ಅತಿಪ್ರವೇಶ.

  • inrush
    ನಾಮವಾಚಕ
    ಒಳನುಗ್ಗಲು; ಒಳಗೆ ನುಗ್ಗುವುದು.

    ins.
    ಸಂಕ್ಷಿಪ್ತ
  • inches.
  • insurance.


  • logo