logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inquire
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
(enquire ಎಂದೂ ಪ್ರಯೋಗ) (ವ್ಯಕ್ತಿಯ ಹೆಸರು, ಉದ್ಯೋಗ, ಮೊದಲಾದವನ್ನು) ಕೇಳು; ವಿಚಾರಿಸು; ಕೇಳಿ ತಿಳಿದುಕೊ: inquire a person’s name ವ್ಯಕ್ತಿಯ ಹೆಸರನ್ನು ಕೇಳು. inquire after (or for) person ಅವನು ಹೇಗಿದ್ದಾನೆಂದು ವಿಚಾರಿಸು; ಅವನ ಯೋಗಕ್ಷೇಮ ಕೇಳು, ವಿಚಾರಿಸು.
  • (ಯಾವುದೇ ವಿಷಯದಲ್ಲಿ) ಶೋಧನೆ ಮಾಡು; ಅನ್ವೇಷಿಸು; ತಪಾಸಿಸು; ತಪಾಸಣೆ ನಡೆಸು; ಹುಡುಕು; ವಿಚಾರಣೆ ಮಾಡು; ತನಿಖೆ ನಡೆಸು; ವಿಚಾರಿಸು: inquire into the incident ಘಟನೆಯ ಬಗ್ಗೆ ತನಿಖೆ ನಡೆಸು.
  • (ವ್ಯಕ್ತಿಯನ್ನು ಯಾವುದೇ ವಿಷಯ ಕುರಿತು) ವಿಚಾರಿಸು; ಕೇಳಿ ತಿಳಿದುಕೊ; ವಿಷಯ ಕೇಳು; ಮಾಹಿತಿ ಪಡೆ: inquire about horses ಕುದುರೆಗಳ ಬಗ್ಗೆ ಕೇಳಿ ತಿಳಿದುಕೊ.
  • (ಅಂಗಡಿಯಲ್ಲಿ ಸಾಮಾನು ಮೊದಲಾದವುಗಳ ಬಗ್ಗೆ) ವಿಚಾರಿಸು; ಕೇಳು: inquire for a book in the shop ಅಂಗಡಿಯಲ್ಲಿ ಪುಸ್ತಕವಿದೆಯೇ ಎಂದು ವಿಚಾರಿಸು.

  • inquirer
    ನಾಮವಾಚಕ
    ವಿಚಾರಕ; ಅನ್ವೇಷಕ; ತನಿಖೆಗಾರ; ತಪಾಸಣೆಗಾರ; ವಿಚಾರಣೆ ಮಾಡುವವ; ತಪಾಸಣೆ ಮಾಡುವವ; ತನಿಖೆ ನಡೆಸುವವ; ಪ್ರಶ್ನಿಸುವವ.

    inquiringly
    ಕ್ರಿಯಾವಿಶೇಷಣ
  • ವಿಚಾರಣೆಯ ರೀತಿಯಲ್ಲಿ; ತನಿಖೆ ನಡೆಸುವ ಹಾಗೆ.
  • ವಿಷಯ ಕೇಳುವಂತೆ; ಕೇಳಿ ತಿಳಿದುಕೊಳ್ಳುವ ಹಾಗೆ; ಮಾಹಿತಿ ಪಡೆಯುವಂತೆ.
  • ಕೇಳುವ ಹಾಗೆ; ವಿಚಾರಿಸುವ ರೀತಿಯಲ್ಲಿ.

  • inquiry
    ನಾಮವಾಚಕ ಪದಗುಚ್ಛ
  • ಕೇಳುವುದು; ವಿಚಾರಿಸುವುದು: learn by inquiry ಕೇಳಿ ಕಲಿ; ಕೇಳುವುದರ ಮೂಲಕ ಕಲಿ.
  • ಪ್ರಶ್ನೆ: our reply to this reasonable inquiry ಯುಕ್ತವಾದ ಈ ಪ್ರಶ್ನೆಗೆ ನಮ್ಮ ಉತ್ತರ.
  • (ಅಧಿಕೃತ) ವಿಚಾರಣೆ; ತಪಾಸಣೆ; ಶೋಧನೆ; ತನಿಖೆ: freedom of inquiry ವಿಚಾರಣಾ ಸ್ವಾತಂತ್ರ್ಯ.

  • inquiry agent
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಖಾಸಗಿ ಪತ್ತೇದಾರ.

    inquiry office
    ನಾಮವಾಚಕ
    ವಿಚಾರಣೆ ಕಚೇರಿ; ವಿಚಾರಿಸುವವರಿಗೆ ಉತ್ತರ ಹೇಳುವ ಕಚೇರಿ.

    inquisition
    ನಾಮವಾಚಕ ಪದಗುಚ್ಛ
    the Inquisition (ಚರಿತ್ರೆ) (ರೋಮನ್‍ ಕ್ಯಾಥೊಲಿಕ್‍) ಪಾಷಂಡಿ ನ್ಯಾಯಾಲಯ; ಪಾಷಂಡ ಮತವನ್ನು ಅಡಗಿಸಲು ನಿಯಮಿಸಿದ ಚರ್ಚಿನ ನ್ಯಾಯಸ್ಥಾನ.
  • ಹುಡುಕುವುದು; ಶೋಧ; ಶೋಧನೆ; ವಿಚಾರಣೆ; ತನಿಖೆ; ತಲಾಶು; ಅನ್ವೇಷಣೆ: it has escaped the inquisition of the curious ಅದು ಕುತೂಹಲಿಗಳ ಶೋಧವನ್ನು ತಪ್ಪಿಸಿಕೊಂಡಿದೆ.
  • ನ್ಯಾಯಾಲಯದ ಯಾ ಅಧಿಕೃತ – ವಿಚಾರಣೆ, ತನಿಖೆ, ತಪಾಸಣೆ.

  • inquisitional
    ಗುಣವಾಚಕ
  • (ಚರಿತ್ರೆ) ಪಾಷಂಡಮತ ದಂಡನೆಯ; ಪಾಷಂಡಮತವನ್ನು ಅಡಗಿಸುವ ಚರ್ಚಿನ ನ್ಯಾಯಮಂಡಲಿಯ.
  • (ಮುಖ್ಯವಾಗಿ ಕಟುವಾದ, ನಿಷ್ಠುರವಾದ ಯಾ ಹೊಂಚಿ ನೋಡುವ) ತನಿಖೆಯ; ವಿಚಾರಣೆಯ; ಶೋಧನೆಯ.

  • inquisitive
    ಗುಣವಾಚಕ
  • ವಿಚಾರ ಮಾಡುವ; ಶೋಧನೆ ಮಾಡುವ; ಜಿಜ್ಞಾಸೆಯ; ಅನ್ವೇಷಣಶೀಲ; ತಿಳಿದುಕೊಳ್ಳುವ ಕುತೂಹಲವುಳ್ಳ; ಕುತೂಹಲ ಪ್ರಕೃತಿಯ; ಕೌತುಕಪ್ರಕೃತಿಯ:
    1. natural curiosity and inquisitive appetite ಸಹಜ ಕುತೂಹಲ ಮತ್ತು ಜಿಜ್ಞಾಸೆಯ ಒಲವು.
  • (ಗುಟ್ಟು ತಿಳಿಯಲು) ಹೊಂಚಿ ನೋಡುವ; ಇಣುಕಿನೋಡುವ; ಬೆದಕುವ; ಪ್ರಶ್ನಿಸುವ; ವಿಚಾರಿಸುವ; ಅಧಿಕಪ್ರಸಂಗಿತನದ; (ಅಧಿಕಪ್ರಸಂಗಿತನದಿಂದ ಇತರರ ವಿಷಯಗಳಲ್ಲಿ) ಕುತೂಹಲ ತೋರುವ, ತಲೆ ಹಾಕುವ: the most inquisitive old fellow I have ever seen ನಾನು ಕಂಡವರಲ್ಲೆಲ್ಲಾ ಅತ್ಯಂತ ಅಧಿಕಪ್ರಸಂಗಿತನದ ಮುದಿಯ.

  • inquisitively
    ಕ್ರಿಯಾವಿಶೇಷಣ
  • ವಿಚಾರಮಾಡುವ ರೀತಿಯಲ್ಲಿ; ಶೋಧನೆ ಮಾಡುವಂತೆ; ಜಿಜ್ಞಾಸೆಯ ರೀತಿಯಲ್ಲಿ; ಕೌತುಕ ಪ್ರವೃತ್ತಿಯಿಂದ; ತಿಳಿದುಕೊಳ್ಳುವ ಕುತೂಹಲದಿಂದ.
  • ಅಧಿಕ ಪ್ರಸಂಗಿತನದಿಂದ ತಲೆಹಾಕುವ ಹಾಗೆ; (ಗುಟ್ಟು ತಿಳಿಯಲು) ಹೊಂಚಿನೋಡುವ ಕುತೂಹಲದಿಂದ.
  • ಸುದ್ದಿ ಪಡೆಯುವ ಕುತೂಹಲದಿಂದ; ಮಾಹಿತಿ ಸಂಗ್ರಹಿಸುವ ಅಭಿಪ್ರಾಯದಿಂದ.


  • logo