ಆಸ್ಟ್ರೇಲಿಯದ, ಆಕ್ಸಿಯುರೇನಸ್ ಮೈಕ್ರೋಲೆಪಿಡೋಟಸ್ ಕುಲದ, ದೊಡ್ಡ ವಿಷದ ಹಾವು.
taj
ನಾಮವಾಚಕ
ಮಹಮ್ಮದೀಯ ದರವೇಶಿಗಳ ಟೊಪ್ಪಿಗೆ; ಶಂಕುವಿನಾಕಾರದ ಎತ್ತರದ ಟೋಪಿ; ಟೊಪ್ಪರ.
takable
ಗುಣವಾಚಕ
= takeable.
takahe
ನಾಮವಾಚಕ
= notornis.
take
ಕ್ರಿಯಾಪದ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
(ಕೈ, ಸಲಕರಣೆ, ಮೊದಲಾದವುಗಳಿಂದ) ತೆಗೆದುಕೊ; ಹಿಡಿದುಕೊ; ಹಿಡಿ: took him by the throat ಅವನ ಕುತ್ತಿಗೆಗೆ ಕೈಹಾಕಿ ಹಿಡಿದು ಕೊಂಡನು.
ಸೆರೆಹಿಡಿ; ಕೈವಶ ಮಾಡಿಕೊ; ಸ್ವಾಧೀನಪಡಿಸಿಕೊ: take a fortress ಕೋಟೆಯನ್ನು ಹಿಡಿ.
(ಪರಿ)ಗ್ರಹಿಸು; ಸ್ವೀಕರಿಸು (ರೂಪಕ ಸಹ).
ಪಡೆದುಕೊ; ಗಳಿಸು; ಗೆದ್ದುಕೊ.
ಕೊಳ್ಳುವ ಮೂಲಕ ತೆಗೆದುಕೊ, ಖರೀದಿಸು; ದುಡ್ಡುಕೊಟ್ಟು–ಹಿಡಿ, ಪಡೆ, ಗೊತ್ತುಮಾಡಿಕೊ: took tickets for the ballet ‘ಬ್ಯಾಲೆ’ ಪ್ರದರ್ಶನಕ್ಕೆ ಟಿಕೆಟ್ ತೆಗೆದುಕೊಂಡ.
(ಕ್ರಮಬದ್ಧ ಒಪ್ಪಂದದ ಮೂಲಕ) ಯಾವುದರದೇ ಬಳಕೆಯನ್ನು, ಉಪಯೋಗವನ್ನು ಪಡೆದುಕೊ: took lodgings ವಸತಿ ಪಡೆದುಕೊಂಡ, ಗೊತ್ತುಮಾಡಿಕೊಂಡ.
(ತಿಂಡಿ ಮೊದಲಾದವನ್ನು ಮಾಡುವಲ್ಲಿ) ಬಳಸು; ಉಪಯೋಗಿಸು; ಪ್ರಯೋಜನ ಪಡೆದುಕೊ: take a dozen eggs and beat them well ಒಂದು ಡಜನ್ ಮೊಟ್ಟೆಗಳನ್ನು ತೆಗೆದುಕೊಂಡು, ಅವನ್ನು ಚೆನ್ನಾಗಿ ಗೊಟಾಯಿಸು.
ಬಳಸು; ಉಪಯೋಗಿಸು; ವಶಪಡಿಸಿಕೊ: I wish you will not take my bicycle ನೀನು ನನ್ನ ಸೈಕಲನ್ನು ಬಳಸುವುದಿಲ್ಲವೆಂದು ನಿರೀಕ್ಷಿಸುತ್ತೇನೆ; ನೀನು ನನ್ನ ಸೈಕಲನ್ನು ಉಪಯೋಗಿಸದಿರುವುದು ಒಳ್ಳೆಯದು.
ಪ್ರಯಾಣದ, ಸಾರಿಗೆಯ ಮಾಧ್ಯಮವಾಗಿ, ವಾಹನವಾಗಿ–ಬಳಸು, ತೆಗೆದುಕೊ, ಹಿಡಿ: took a taxi ಟ್ಯಾಕ್ಸಿ ಹಿಡಿದ.
(ಅಗತ್ಯ ನಿಯಮಗಳನ್ನು ಪಾಲಿಸಿ ಏನನ್ನಾದರೂ) ಪಡೆ; ತೆಗೆದುಕೊ; ಗಳಿಸು: take a degree ಪದವಿ ಪಡೆ.
(ಸ್ಥಾನ ಮೊದಲಾದವನ್ನು) ಸ್ವೀಕರಿಸು; ವಹಿಸಿಕೊ: take the chair ಅಧ್ಯಕ್ಷ ಸ್ಥಾನ ವಹಿಸು.
ತೆಗೆದುಕೊ; ಹಿಡಿ; ಬಳಸು; ಉಪಯೋಗಿಸು: take the next turning on the left ಎಡಗಡೆಯಲ್ಲಿರುವ ಮುಂದಿನ ತಿರುವನ್ನು ಹಿಡಿ, ಬಳಸಿಕೊ.
(ಆಹಾರ, ಔಷಧಿ, ಮೊದಲಾದವನ್ನು) ತೆಗೆದುಕೊ; ಸೇವಿಸು; ತಿನ್ನು; ಕುಡಿ; ನುಂಗು: take a cup of tea ಒಂದು ಕಪ್ ‘ಟೀ’ ತೆಗೆದುಕೊ, ಕುಡಿ. took poison ವಿಷ ಸೇವಿಸಿದ. take pills ಮಾತ್ರೆಗಳನ್ನು ತೆಗೆದುಕೊ, ನುಂಗು: do you take sugar ನೀನು ಸಕ್ಕರೆ ಹಾಕಿಕೊಳ್ಳುವೆಯಾ?
ಸಾಕಾಗು; ಬೇಕಾಗು; ತೆಗೆದುಕೊ; ಆಗು: will only take a minute ಒಂದು ನಿಮಿಷ ಮಾತ್ರ ಸಾಕು, ಆಗುತ್ತದೆ. these things take time ಈ ಕೆಲಸಗಳಿಗೆ (ಸಾಕಷ್ಟು) ಸಮಯ ಬೇಕು.
ಒಯ್ಯು; ಜೊತೆಯಲ್ಲಿ ಕರೆತರು ಯಾ ಕರೆದುಕೊಂಡು ಹೋಗು; ಕರೆದೊಯ್ಯು; ಕೊಂಡೊಯ್ಯು; ತೆಗೆದುಕೊಂಡು ಹೋಗು: the bus takes you past the station ಬಸ್ಸು ನಿನ್ನನ್ನು ಸ್ಟೇಷನ್ನಿನಿಂದ ಮುಂದಕ್ಕೆ ಕೊಂಡೊಯ್ಯುತ್ತದೆ. take the book home ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗು.
ತೆಗೆದುಕೊ; ಅಪಹರಿಸು; ಕಿತ್ತುಕೊ: someone has taken my pen ಯಾರೋ ನನ್ನ ಪೆನ್ನನ್ನು ತೆಗೆದುಕೊಂಡಿದ್ದಾರೆ.
(ಬೆಂಕಿ, ಜ್ವರ, ಮೊದಲಾದವು) ಹಿಡಿ; ಅಂಟಿಸಿಕೊ; ಸೋಂಕು ತಗಲು ಯಾ ತಂದುಕೊ.
ಪಡು; ಅನುಭವಿಸು; ಒಂದರ ಪ್ರಭಾವಕ್ಕೆ, ಪರಿಣಾಮಕ್ಕೆ ಒಳಗಾಗು: take pleasure ಸಂತೋಷಪಡು. take fright ದಿಗಿಲು ಬೀಳು.
ತಾಳು; ಹೊಂದು; ಪಡು: take comfort ಸಮಾಧಾನ ಪಡು.
ತೆಗೆದುಕೊ; ವಹಿಸು: take courage ಧೈರ್ಯ ತೆಗೆದುಕೊ.
(ಹೆಸರು, ವಿಳಾಸ, ದೇಹದ ಶಾಖ, ವ್ಯಕ್ತಿಯ ತೂಕ, ಎತ್ತರ, ಮೊದಲಾದವನ್ನು) ತೆಗೆದುಕೊ; ತಿಳಿದಿಟ್ಟುಕೊ; ವಿಚಾರಿಸಿ, ಪರೀಕ್ಷಿಸಿ ಯಾ ಅಳೆದು–ಕಂಡುಹಿಡಿ: take someone’s pulse (ಒಬ್ಬ ವ್ಯಕ್ತಿಯ) ನಾಡಿ–ತೆಗೆದುಕೊ, ಪರೀಕ್ಷಿಸು.
ಮನಸ್ಸಿನಲ್ಲಿ–ಗ್ರಹಿಸು, ಊಹಿಸು, ಭಾವಿಸು, ಅನಿಸು, ತಿಳಿದುಕೊ, ಅರ್ಥಮಾಡಿಕೊ: I take it that we are to wait ನಾವು ಕಾಯಬೇಕಾಗುತ್ತದೆಂದು ನನಗೆ ಕಾಣುತ್ತದೆ, ನನ್ನ ಗ್ರಹಿಕೆ, ಅನಿಸಿಕೆ. I took you to mean yes ನೀನು ಆಗಲಿ ಎಂದು, ಒಪ್ಪಿದೆ ಎಂದು ಹೇಳಿದೆ–ಎಂದು ನಾನು ಅರ್ಥ ಮಾಡಿಕೊಂಡೆ. took him for a fool ಅವನೊಬ್ಬ ದಡ್ಡನೆಂದು ಭಾವಿಸಿದೆ. I take your point ನಿನ್ನ ಮಾತಿನ ಅರ್ಥವನ್ನು ನಾನು ಗ್ರಹಿಸುತ್ತೇನೆ.
(ಯಾವುದಾದರೂ ವಿಷಯವನ್ನು) ಒಂದು ನಿರ್ದಿಷ್ಟ ರೀತಿಯಲ್ಲಿ–ತೆಗೆದುಕೊ, ಪರಿಗಣಿಸು, ಸಹಿಸು, ಅನುಭವಿಸು: take things coolly ಎಲ್ಲವನ್ನೂ ಸಮಾಧಾನದಿಂದ ತೆಗೆದುಕೊ, ಸೈರಣೆಯಿಂದ ಸಹಿಸು.
(-ಎಂದು) ಭಾವಿಸು; ಅಂದುಕೊ; ತಿಳಿದುಕೊ: took it badly ಅದನ್ನು ತಪ್ಪಾಗಿ ಭಾವಿಸಿದ. do you take me for an idiot? ನನ್ನನ್ನು ತಿಳಿಗೇಡಿಯೆಂದು ತಿಳಿದುಕೊಂಡಿದ್ದೀಯಾ?
ತೆಗೆದುಕೊ; ಪರಿಗ್ರಹಿಸು; ಸ್ವೀಕರಿಸು; ಒಪ್ಪಿಕೊ: take what you can get ಬಂದುದನ್ನು ಸ್ವೀಕರಿಸು. take the offer ಕೊಟ್ಟುದನ್ನು ಒಪ್ಪಿಕೊ.
ತೆಗೆದುಕೊ; ಸ್ವೀಕರಿಸು; ಒಪ್ಪಿಕೊ; ಸಮ್ಮತಿಸು; ಸಹಿಸು; ಒಳಗಾಗು; ಒಳಪಡಿಸಿಕೊ: take no nonsense ಅಸಂಬದ್ಧವನ್ನು ಸಹಿಸಬೇಡ. take a risk ಅಪಾಯ ಸ್ವೀಕರಿಸು; ಅಪಾಯಕ್ಕೆ ತಲೆಯೊಡ್ಡು.
ತಳೆ; ವಹಿಸು; ತೆಗೆದುಕೊ; ಪಡೆ; ಹೊಂದು: took a different view ಬೇರೆ ದೃಷ್ಟಿಕೋನ ತಳೆದ. took the initiative ಮುಂದಾಳತ್ವ ವಹಿಸಿದ.
ಆರಿಸಿಕೊ: took a job ಕೆಲಸ ಆರಿಸಿಕೊಂಡ.
ಪಡೆ(ದುಕೊ); ತೆಗೆದುಕೊ: takes its name from the inventor ಅದು ಆವಿಷ್ಕಾರ ಮಾಡಿದವನ ಹೆಸರನ್ನು ಪಡೆದಿದೆ; ಅದರ ಹೆಸರು ಅದನ್ನು ಕಂಡುಹಿಡಿದವನ ಹೆಸರಿನಿಂದ ಬಂದಿದೆ.
ಕಳೆ; ವ್ಯವಕಲಿಸು; ವ್ಯವಕಲನ ಮಾಡು; ತೆಗೆ(ದು ಹಾಕು): take 3 from 9 ಒಂಬತ್ತರಿಂದ ಮೂರನ್ನು ಕಳೆ.
ಸಾಧಿಸು; ಮಾಡು; ಮಾಡಲು ಒಪ್ಪಿಕೊ; ಕೈಗೊಳ್ಳು; ತೆಗೆದುಕೊ: take notes ಟಿಪ್ಪಣಿ–ತೆಗೆದುಕೊ, ಬರೆದುಕೊ. take an oath ಶಪಥ, ಪ್ರತಿಜ್ಞೆ–ಮಾಡು. take a decision ನಿರ್ಧಾರ ಕೈಗೊಳ್ಳು. take a look ಒಂದು ದೃಷ್ಟಿ ಬೀರು, ಹಾಕು.
(ಒಂದರಲ್ಲಿ) ತೊಡಗಿರು; ನಿರತನಾಗಿರು; ಯಾವುದನ್ನೇ ಮಾಡು, ಅನುಭವಿಸು ಯಾ ಸವಿ: take rest ವಿಶ್ರಾಂತಿ ಅನುಭವಿಸು. take exercise ವ್ಯಾಯಾಮ ಮಾಡು. take a holiday ರಜೆ ತೆಗೆದುಕೊ.
ನಡೆಸು; ನಿರ್ವಹಿಸು: took the school assembly ಶಾಲೆಯ ಸಭೆಯನ್ನು ನಿರ್ವಹಿಸಿದ.
(ಒಂದು ನಿರ್ದಿಷ್ಟ ರೀತಿಯಲ್ಲಿ) ನಡೆಸು; ನಿರ್ವಹಿಸು: took the corner too fast ಮೂಲೆಯಲ್ಲಿ ತಿರುಗುವಾಗ ವಿಪರೀತ ವೇಗದಲ್ಲಿ ನಡೆಸಿದ, ಹೋದ.
ಒಂದು ವಿಷಯದಲ್ಲಿ ಶಿಕ್ಷಣ ಪಡೆ ಯಾ ಕೊಡು; ಕಲಿ ಯಾ ಬೋಧಿಸು.
(ಒಂದು ವಿಷಯದಲ್ಲಿ) ಪರೀಕ್ಷೆ ಕೂಡು; ಪರೀಕ್ಷೆ ತೆಗೆದುಕೊ.
(ಛಾಯಾಚಿತ್ರಣ) ಕ್ಯಾಮರಾದಿಂದ (ವ್ಯಕ್ತಿಯ ಯಾ ವಸ್ತುವಿನ) ಹೋಟೊ–ತೆಗೆ, ಇಳಿಸು, ಹಿಡಿ, ಹೊಡೆ.
(ಮಾತನಾಡುವಾಗ) ತೆಗೆದುಕೊ; ನಿದರ್ಶನ ಕೊಡು; ಉದಾಹರಿಸು: let us take Gandhi ಗಾಂಧಿಯನ್ನು ತೆಗೆದುಕೊಳ್ಳೋಣ, ಉದಾಹರಿಸೋಣ.
(ವ್ಯಾಕರಣ) ತೆಗೆದುಕೊ; ಬೇಕಾಗು; ಬಯಸು; ಅಪೇಕ್ಷಿಸು: this verb takes an object ಈ ಕ್ರಿಯಾಪದ ಕರ್ಮಪದವನ್ನು ತೆಗೆದುಕೊಳ್ಳುತ್ತದೆ, ಅಪೇಕ್ಷಿಸುತ್ತದೆ.
(ಹೆಂಗಸನ್ನು) ಸಂಭೋಗಿಸು.
(ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಮರುಳುಗೊಳಿಸು; ಸೆಳೆ; ಆಕರ್ಷಿಸು: was much taken by (or with) her manners ಅವಳ ನಡೆವಳಿಯಿಂದ ಬಹಳ ಮರುಳಾದ. he took her fancy ಅವನು ಅವಳ ಮನಸ್ಸನ್ನು ಆಕರ್ಷಿಸಿದ.
ಗೆದ್ದುಕೊ; ಜಯಿಸು: he took the first set 6-3 (ಟೆನಿಸ್) ಅವನು 6-3 ಆಟಗಳಿಂದ ಮೊದಲನೆಯ ಸೆಟ್ಟನ್ನು ಗೆದ್ದ.
ಬೇಕಾಗು; ಹಿಡಿ; ಅಗತ್ಯವಾಗು: it takes a poet to translate Virgil ವರ್ಜಿಲ್‍ನ ಕಾವ್ಯವನ್ನು ಭಾಷಾಂತರಿಸಲು ಒಬ್ಬ ಕವಿಯೇ (ಆಗ)ಬೇಕು.