ವೀಕ್ಷಣೆ; ಅವಲೋಕನ; ಗಮನವಿಟ್ಟು ನೋಡುವುದು ಯಾ ನೋಡಲ್ಪಡುವುದು.
ವೀಕ್ಷಿತ ಸ್ಥಿತಿ; ಗಮನವಿಟ್ಟು ನೋಡಿದ ಸ್ಥಿತಿ.
ಗಮನಿಸುವ ಶಕ್ತಿ; ಗಮನ ಕೊಟ್ಟು ನೋಡುವ ಸಾಮರ್ಥ್ಯ.
(ಮುಖ್ಯವಾಗಿ ಟೀಕೆಯ ಯಾ ಟಿಪ್ಪಣಿಯ ರೂಪದ) ಹೇಳಿಕೆ; ಅಭಿಪ್ರಾಯ.
ನಿಸರ್ಗ ವೀಕ್ಷಣೆ; ಪ್ರಕೃತಿ ವೀಕ್ಷಣೆ; ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನಗಳ ಕಾರ್ಯ ಕಾರಣಗಳು ಯಾ ಅವುಗಳ ಪರಸ್ಪರ ಸಂಬಂಧ ಮೊದಲಾದವನ್ನು ಕರಾರುವಾಕ್ಕಾಗಿ ನೋಡಿ ಗುರುತು ಮಾಡಿಕೊಳ್ಳುವುದು.
ವೀಕ್ಷಣೆ; ಪರಿಶೀಲನೆ; ರೋಗಿಯ ಲಕ್ಷಣಗಳು, ಗುಮಾನಿಗೊಳಗಾದವನ ನಡೆ ನುಡಿ, ಮೊದಲಾದವನ್ನು ಗಮನಿಸುವುದು.
ವೀಕ್ಷಣೆ; ಔನ್ನತ್ಯ ಮಾಪನ ಯಾ ಗಣನೆ; ಅಕ್ಷಾಂಶ, ರೇಖಾಂಶಗಳನ್ನು ಕಂಡುಹಿಡಿಯಲು ಸೂರ್ಯನ ಯಾ ಬೇರಾವುದೇ ಆಕಾಶಕಾಯದ ಔನ್ನತ್ಯವನ್ನು ಅಳೆಯುವುದು ಯಾ ಗಣಿಸುವುದು.
(ಮುಖ್ಯವಾಗಿ ಅಮೆರಿಕನ್ ಪ್ರಯೋಗ) ವೀಕ್ಷಣಬಂಡಿ; ನೋಟದ ಗಾಡಿ; ಸುತ್ತಲಿನ ದೃಶ್ಯಗಳನ್ನು ನೋಡಲು ಅನುಕೂಲಿಸುವಂತೆ ಗಾಜಿನ ಕಿಟಕಿಗಳಿರುವ ರೈಲುಬಂಡಿ.
observation post
ನಾಮವಾಚಕ
(ಸೈನ್ಯ) ವೀಕ್ಷಣ ನೆಲೆ; ಮುಖ್ಯವಾಗಿ ಫಿರಂಗಿ ಹೊಡೆತದ ಪರಿಣಾಮವನ್ನು ವೀಕ್ಷಿಸಲು ಕಲ್ಪಿಸಿಕೊಂಡ ನೆಲೆ.
observational
ಗುಣವಾಚಕ
ವೀಕ್ಷಣದ; ವೀಕ್ಷಣೆಯ; ಅವಲೋಕನದ; ವೀಕ್ಷಣಕ್ಕೆ ಸಂಬಂಧಿಸಿದ; ಗಮನವಿಟ್ಟು ನೋಡುವ ಯಾ ನೋಡಲ್ಪಡುವ.
ವೀಕ್ಷಣ ಶಕ್ತಿಯ.
ವೈಜ್ಞಾನಿಕ ವೀಕ್ಷಣೆಗೆ ಸಂಬಂಧಿಸಿದ.
observationally
ಕ್ರಿಯಾವಿಶೇಷಣ
ವೀಕ್ಷಣ(ವಿಧಾನ)ದಿಂದ; ವೀಕ್ಷಣ ವಿಧಾನದಲ್ಲಿ.
observatory
ನಾಮವಾಚಕ
ವೇಧಶಾಲೆ; ವೀಕ್ಷಣಾಲಯ; ವೀಕ್ಷಣಾಗಾರ; ವೀಕ್ಷಣ–ಗೃಹ, ಮಂದಿರ, ಕೇಂದ್ರ; ಪ್ರಕೃತಿಯ ಯಾ ನಿಸರ್ಗದ ವಿದ್ಯಮಾನಗಳನ್ನು, ಮುಖ್ಯವಾಗಿ ಖಗೋಳದ ಯಾ ಹವಾಮಾನದ ಘಟನೆಗಳನ್ನು, ವೀಕ್ಷಿಸುವ ಸಲುವಾಗಿ ನಿರ್ಮಿಸಿರುವ ಕಟ್ಟಡ ಮೊದಲಾದವು.
observe
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ವ್ಯಕ್ತಿ, ವಸ್ತು ಮೊದಲಾದವನ್ನು) ಗಮನವಿಟ್ಟು ನೋಡು; ಲಕ್ಷಿಸು; ಗಮನಿಸು; ಗಮನಕ್ಕೆ ತಂದುಕೊ: the observed of all observers ಎಲ್ಲರ ಗಮನವೂ ಬೀಳುವಂಥ ವ್ಯಕ್ತಿ, ವಸ್ತು ಯಾ ವಿಷಯ; ಎಲ್ಲ ವೀಕ್ಷಕರಿಂದಲೂ ವೀಕ್ಷಿಸಲ್ಪಟ್ಟವನು ಯಾ ವೀಕ್ಷಿಸಲ್ಪಟ್ಟದ್ದು.
ಎಚ್ಚರಿಕೆಯಿಂದ ಗಮನಿಸು, ನೋಡು.
(ಶಾಸನ, ಕಟ್ಟಳೆ, ಕಾರ್ಯ ವಿಧಾನ, ತತ್ತ್ವ, ಮೊದಲಾದವನ್ನು) ನಡೆಸು; ಆಚರಿಸು; ಪಾಲಿಸು; ನಡೆಸಿಕೊಂಡು ಬರು; ಬಿಡದೆ ಅನುಸರಿಸು; ವಿಹಿತವಾಗಿ ನೆರೆವೇರಿಸು.
(ಯಾವುದನ್ನೇ ಕುರಿತ) ಟೀಕಾಕಾರ; ಟೀಕೆಯ ರೂಪದಲ್ಲಿ ಅಭಿಪ್ರಾಯ ಹೇಳುವವನು.
ವೃತ್ತಪತ್ರಿಕೆಯ ಹೆಸರಾಗಿ: The Observer.
observingly
ಕ್ರಿಯಾವಿಶೇಷಣ
ಗಮನಿಸಿ ನೋಡುತ್ತ; ಲಕ್ಷ್ಯಗೊಟ್ಟು ವೀಕ್ಷಿಸುತ್ತ; ವೀಕ್ಷಕ ದೃಷ್ಟಿಯಿಂದ.
obsess
ಸಕರ್ಮಕ ಕ್ರಿಯಾಪದ
(ಹಲವೊಮ್ಮೆ ಕರ್ಮಣಿಪ್ರಯೋಗದಲ್ಲಿ) (ದೆವ್ವ, ಭ್ರಾಂತಿ, ಗೀಳು, ಮೊದಲಾದವುಗಳ ವಿಷಯದಲ್ಲಿ) ಎಡೆಬಿಡದೆ, ನಿರಂತರ–ಪೀಡಿಸು, ಕಾಡು; ಮೇಲಿಂದ ಮೇಲೆ ಮನಸ್ಸಿಗೆ ಬಂದು ಕಾಡು; ಸದಾ ಬೆನ್ನು ಹತ್ತಿರು; (ವ್ಯಕ್ತಿಯ) ಮನಸ್ಸನ್ನೆಲ್ಲ ತುಂಬಿ, ಆವರಿಸಿ ಹಿಂಸಿಸು; ಸದಾ ಗ್ರಹದಂತೆ ಹಿಡಿದಿರು.