logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

magnanimous
ಗುಣವಾಚಕ
ದೊಡ್ಡ ಮನಸ್ಸಿನ; ಉದಾತ್ತ; ಉದಾರ ಹೃದಯದ; ಭಾವಗಳಲ್ಲಾಗಲಿ ನಡತೆಯಲ್ಲಾಗಲಿ ಅಲ್ಪತೆಯಿಂದ ಕೂಡಿರದ, ಸಂಕುಚಿತವಾಗಿರದ.

magnanimously
ಕ್ರಿಯಾವಿಶೇಷಣ
ದೊಡ್ಡ ಮನಸ್ಸಿನಿಂದ; ಉದಾತ್ತವಾಗಿ; ಉದಾರ ಹೃದಯದಿಂದ; ಅಲ್ಪತೆಯಿಲ್ಲದೆ.

magnate
ನಾಮವಾಚಕ
  • ದೊಡ್ಡ ಮನುಷ್ಯ; ಪ್ರತಿಷ್ಠಿತ ವ್ಯಕ್ತಿ; ದೊಡ್ಡ ಕುಳ; ಭಾರಿ ಕುಳ.
  • ಹಣವಂತ; ಧನಿಕ.
  • ಪ್ರಭಾವೀ ವ್ಯಕ್ತಿ; ಹಣದ ಯಾ ಸ್ಥಾನದ ದೆಸೆಯಿಂದ ಪ್ರಭಾವ ಬೀರಬಲ್ಲ ವ್ಯಕ್ತಿ.
  • ಮಹೋದ್ಯಮಿ; ಭಾರಿ ಉದ್ಯಮಿ; ದೊಡ್ಡ ಕೈಗಾರಿಕೆಯ ಯಾ ಇತರ ದೊಡ್ಡ ಉದ್ಯಮದ ಯಜಮಾನ: shipping magnate ಭಾರಿ ನೌಕೋದ್ಯಮಿ.
  • (ಮುಖ್ಯವಾಗಿ) ಭಾರಿ ವ್ಯಾಪಾರಿ; ದೊಡ್ಡ ವ್ಯಾಪಾರಗಾರ: cotton magnate ಭಾರಿ ಹತ್ತಿ ವ್ಯಾಪಾರಿ.

  • magnesia
    ನಾಮವಾಚಕ
    (ರಸಾಯನವಿಜ್ಞಾನ) ಮ್ಯಾಗ್ನೀಸಿಯ:
  • ಮ್ಯಾಗ್ನೀಸಿಯಮ್‍ ಆಕ್ಸೆ ಡ್‍.
  • ಆಮ್ಲನಾಶಕವಾಗಿ ಬಳಸುವ ಮ್ಯಾಗ್ನೀಸಿಯಮ್‍ ಕಾರ್ಬೊನೇಟಿನ ಬಿಳಿ ಪುಡಿ.

  • magnesian
    ಗುಣವಾಚಕ
    ಮ್ಯಾಗ್ನೀಸಿಯ ಉಳ್ಳ; ಮ್ಯಾಗ್ನೀಸಿಯದ ಯಾ ಅದಕ್ಕೆ ಸಂಬಂಧಿಸಿದ.

    magnesite
    ನಾಮವಾಚಕ
    (ಭೂವಿಜ್ಞಾನ) ಮ್ಯಾಗ್ನಸೈಟ್‍; ಮೆಗ್ನೀಸಿಯಮ್‍ ಕಾರ್ಬೊನೇಟ್‍ ಸಂಯೋಜನೆಯುಳ್ಳ ಬಿಳಿಯ ಯಾ ಬೂದು ಬಣ್ಣದ ಖನಿಜ.

    magnesium
    ನಾಮವಾಚಕ
    (ರಸಾಯನವಿಜ್ಞಾನ) ಮೆಗ್ನೀಸಿಯಮ್‍; ಪರಮಾಣು ಸಂಖ್ಯೆ 12, ಪರಮಾಣು ತೂಕ 24 ಉಳ್ಳ, ಹಗುರವಾದ, ಬಿಳಿಯ, ದ್ವಿವೇಲೆನ್ಸೀಯ ಲೋಹ, ಸಂಕೇತ Mg.

    magnesium flare
    ನಾಮವಾಚಕ
    ಮೆಗ್ನೀಸಿಯಂ ಜ್ವಾಲೆ; ಮೆಗ್ನೀಸಿಯಮ್‍ ಉರಿದಾಗ ಬರುವ, ಕಣ್ಣು ಕೋರೈಸುವ ಬಿಳಿಯ ಜ್ವಾಲೆ.

    magnesium light
    ನಾಮವಾಚಕ
    = magnesium flare.

    magnet
    ನಾಮವಾಚಕ ಪದಗುಚ್ಛ
  • ಸೂಜಿಗಲ್ಲು; ಅಯಸ್ಕಾಂತ; ಕಾಂತ; (ಲೋಹ) ಚುಂಬಕ:
    1. ಕಬ್ಬಿಣವನ್ನು ಆಕರ್ಷಿಸುವ, ತೂಗುಬಿಟ್ಟಾಗ ಉತ್ತರ ದಕ್ಷಿಣ ದಿಕ್ಕಿಗೆ ತಿರುಗುವ, ನೈಸರ್ಗಿಕ ಕಬ್ಬಿಣದ ಅದಿರು.
    2. ಮತ್ತೊಂದು ಅಯಸ್ಕಾಂತದ ಪ್ರೇರಣೆಯಿಂದಲೋ ವಿದ್ಯುತ್ಪ್ರವಾಹದಿಂದಲೋ ಆ ಗುಣವನ್ನು ಪಡೆದಿರುವ ಕಬ್ಬಿಣದ ತುಂಡು.
  • = lodestone.
  • (ರೂಪಕವಾಗಿ) ಆಕರ್ಷಕ; (ಸೂಜಿಗಲ್ಲಿನಂತೆ) ಆಕರ್ಷಿಸುವ ವಸ್ತು ಯಾ ವ್ಯಕ್ತಿ.


  • logo