ಮಧ್ಯ ಅಮೆರಿಕದಲ್ಲಿ (ಸೆಂಟ್ರಲ್ ಅಮೆರಿಕ) ಸ್ಪ್ಯಾನಿಷ್ ಮಾತನಾಡುವ ಬಿಳಿಯ.
ladle
ನಾಮವಾಚಕ
(ದ್ರವಗಳನ್ನು ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಹಾಕಲು ಬಳಸುವ) ಸೌಟು; ಸಟ್ಟುಗ; ಅಗಪೆ; ದರ್ವಿ.
ಎರಕ ಹೊಯ್ಯುವ ಕಾರ್ಖಾನೆಯಲ್ಲಿ ಕರಗಿಸಿದ ಲೋಹವನ್ನು ಸಾಗಿಸಲು ಬಳಸುವ ಪಾತ್ರೆ, ಸೌಟು.
ladle
ಸಕರ್ಮಕ ಕ್ರಿಯಾಪದ
ನುಡಿಗಟ್ಟು
(ದ್ರವವನ್ನು ಒಂದು ಪಾತ್ರೆಯಿಂದ ಇನ್ನೊಂದಕ್ಕೆ) ಸೌಟಿನಿಂದ ತುಂಬಿ ಹಾಕು. ladle out (ಮುಖ್ಯವಾಗಿ ಧಾರಾಳವಾಗಿ) ಹಂಚು; ವಿತರಿಸು.
ladleful
ನಾಮವಾಚಕ
ಸೌಟು(ಭರ್ತಿ): ಸೌಟಿನಲ್ಲಿ ಹಿಡಿಯುವಷ್ಟು ಪದಾರ್ಥ.
ladler
ನಾಮವಾಚಕ
ಸೌಟುಗ; ಸೌಟಿನಿಂದ ತುಂಬಿ ಹಾಕುವವ.
lady
ನಾಮವಾಚಕ
ಪದಗುಚ್ಛ
ನುಡಿಗಟ್ಟು
lady of easy virtue ಸುಲಭಾಂಗನೆ; ಸುಲಭ ಸ್ತ್ರೀ; ನಡತೆಗೆಟ್ಟ ಹೆಣ್ಣು; ಲಂಪಟೆ; ಸೂಳೆ.
ಮಹಿಳೆ; ಕುಲೀನೆ; ಆರ್ಯೆ; ಆಢ್ಯೆ; ಲೇಡಿ; ಸಮಾಜದ ಉಚ್ಚವರ್ಗದ ಯಾ ಮೇಲ್ತರಗತಿಯ ಹೆಂಗಸು.
(Lady). ಶ್ರೀಮಂತೆ; ಶ್ರೀಮಂತ ಕುಟುಂಬದ ಹೆಂಗಸರು, ನೈಟ್ ಪದವಿ ಪಡೆದವರ ಹೆಂಡತಿಯರು, ಅವರ ವಿಧವೆಯರು, ಮೊದಲಾದವರ ಹೆಸರಿನ ಹಿಂದೆ ಸೇರಿಸುವ ಗೌರವ ಬಿರುದು: Lady Mayoress (ಲಾರ್ಡ್) ಮೇಯರನ ಹೆಂಡತಿ.
(ಕೆಲವೊಮ್ಮೆ ವಿಶೇಷಣವಾಗಿ) ಹೆಣ್ಣು; ಸ್ತ್ರೀ: lady clerk ಗುಮಾಸ್ತಳು. lady doctor ವೈದ್ಯೆ. lady president ಅಧ್ಯಕ್ಷೆ. lady dog ಹೆಣ್ಣು ನಾಯಿ. ask that lady over there ಅಲ್ಲಿರುವ ಹೆಂಗಸನ್ನು ಕೇಳು.
(ಆಡುಮಾತು) ಹೆಂಡತಿ; ಪತ್ನಿ: your good lady ನಿನ್ನ ಹೆಂಡತಿ.
ಒಡತಿ; ಯಜಮಾನಿ; ಗೃಹಿಣಿ; ಯಾಜಮಾನ್ಯ ಮಾಡುವವಳು ಯಾ ಹೊಂದಿರುವವಳು: lady of the house ಮನೆಯ ಯಜಮಾನಿ; ಯಜಮಾನಿತಿ; ಮನೆಯೊಡತಿ; ಮನೆಯ ಪಾರುಪತ್ಯ ನೋಡಿಕೊಳ್ಳುವವಳು.
(ಬಹುವಚನದಲ್ಲಿ) (ಸಂಬೋಧನ ರೂಪದಲ್ಲಿ) ಮಹಿಳೆಯರು; ಪ್ರೇಕ್ಷಕರಲ್ಲಿ ಸ್ತ್ರೀ ವರ್ಗ: ladies and gentlemen (ಸ್ತ್ರೀ ಪುರುಷರು ಸೇರಿರುವ ಸಭೆಯನ್ನು ಸಂಬೋಧಿಸುವಾಗ) ಮಹಿಳೆಯರೇ, ಮಹನೀಯರೇ.
(ಚರಿತ್ರೆ) ಪ್ರಣಯಿನಿ; ಒಬ್ಬ ಗಂಡಸಿನ, ಮುಖ್ಯವಾಗಿ ‘ನೈಟ್’ನ, ಪ್ರೀತಿ ನಿಷ್ಠೆಗೆ ಪಾತ್ರಳಾದ ಹೆಂಗಸು.
(ಏಕವಚನದಲ್ಲಿ ಕಾವ್ಯಪ್ರಯೋಗ ಯಾ ಪಾಮರ ಪ್ರಯೋಗ, ಸಾಮಾನ್ಯವಾಗಿ ಬಹುವಚನದಲ್ಲಿ ಸಂಬೋಧನ ರೂಪ) ಮಹಿಳೆಯರು.
ಮಹಿಳೆ; ಶ್ರೀಮತಿ; ಹೆಂಗಸನ್ನು ಗೌರವಪೂರ್ವಕವಾಗಿ ಸಂಬೋಧಿಸುವಾಗ ಬಳಸುವ ಪದ.
(ಸಾಮಾನ್ಯ ಮಟ್ಟದ ವೃತ್ತಿಗಳಲ್ಲಿರುವವರು ಉನ್ನತ ಮಟ್ಟದವರಂತೆಯೇ ತಮ್ಮನ್ನು ಕಾಣಬೇಕೆಂದು ಅಪೇಕ್ಷಿಸಿದಾಗ ಅವರಿಗೆ ಬಳಸುವ ಗೌರವ ವಿಶೇಷಣವಾಗಿ) ಮಹಿಳೆ; ಶ್ರೀಮತಿ. lady cook ಅಡಿಗೆಯಾಕೆ; lady nurse ಮಹಿಳಾ ನರ್ಸು.
Lady altar
ನಾಮವಾಚಕ
ಕನ್ಯೆಪೀಠ; ಮೇರಿಕನ್ಯೆಯ ಚರ್ಚಿನಲ್ಲಿ ಪವಿತ್ರ ಕನ್ಯೆಗೆ ಅರ್ಪಿಸಿದ ಧ್ಯಾನಪೀಠ, ಪೂಜಾಪೀಠ.