logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

idiopathic
ಗುಣವಾಚಕ
ನಿರುಪಾಧಿಕ ಯಾ ಸ್ವಯಂಜನ್ಯ ರೋಗದ.

idiopathically
ಕ್ರಿಯಾವಿಶೇಷಣ
(ರೋಗದ ವಿಷಯದಲ್ಲಿ) ನಿರುಪಾಧಿಕವಾಗಿ; ಸ್ವಯಂಜನ್ಯವಾಗಿ; ಬೇರೊಂದು ರೋಗದಿಂದ ಜನಿಸಿರದೆ ಯಾ ಗೊತ್ತಾದ ಕಾರಣವಿಲ್ಲದೆ.

idiopathy
ನಾಮವಾಚಕ
(ರೋಗಶಾಸ್ತ್ರ) ನಿರುಪಾಧಿಕ ರೋಗ; ಸ್ವಯಂಜನ್ಯ ವ್ಯಾಧಿ; ಬೇರೊಂದು ರೋಗದಿಂದ ಮೊದಲಾಗದೆ ಯಾ ಜನಿಸಿರದೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಯಾ ಕಾರಣ ಸ್ಪಷ್ಟವಾಗಿಲ್ಲದ ವ್ಯಾಧಿ.

idioplasm
ನಾಮವಾಚಕ
(ಜೀವವಿಜ್ಞಾನ) ಇಡಿಯಪ್ಲಾಸಮ್‍; ಆನುವಂಶದ್ರವ್ಯ; ಜೀವಿಯ ಆನುವಂಶಿಕತೆಯನ್ನು ನಿರ್ಧರಿಸುವ ಕೋಶದ್ರವ್ಯಭಾಗ.

idiosyncrasy
ನಾಮವಾಚಕ
  • ವ್ಯಕ್ತಿ – ವೈಲಕ್ಷಣ್ಯ, ವೈಶಿಷ್ಟ್ಯ; ಒಬ್ಬನ ವಿಶಿಷ್ಟ ಮಾನಸಿಕ ಪ್ರಕೃತಿ, ದೃಷ್ಟಿ, ಮನೋಭಾವ, ನಡೆನುಡಿ.
  • (ಒಬ್ಬ ಲೇಖಕನ) ವಿಲಕ್ಷಣಶೈಲಿ; ಶೈಲಿ ವೈಶಿಷ್ಟ್ಯ.
  • (ವೈದ್ಯಶಾಸ್ತ್ರ) (ವ್ಯಕ್ತಿಯ) ವಿಲಕ್ಷಣ ಶರೀರಪ್ರಕೃತಿ; ವಿಶಿಷ್ಟ ದೇಹಧರ್ಮ.

  • idiosyncratic
    ಗುಣವಾಚಕ
  • ವ್ಯಕ್ತಿ – ವೈಲಕ್ಷಣ್ಯದ, ವೈಶಿಷ್ಟ್ಯದ; ಒಬ್ಬನ ವಿಶಿಷ್ಟ ಮಾನಸಿಕ ಪ್ರಕೃತಿ, ದೃಷ್ಟಿ, ಮನೋಭಾವ, ಮೊದಲಾದವುಗಳಿಂದ ಹುಟ್ಟಿದ ಯಾ ಅವಕ್ಕೆ ಸಂಬಂಧಿಸಿದ.
  • ವಿಚಿತ್ರವಾದ; ವಿಲಕ್ಷಣ ರೀತಿಯ: idiosyncratic in his judgement ವಿಚಿತ್ರವಾದ ನಿರ್ಣಯಶಕ್ತಿಯುಳ್ಳವನು.

  • idiot
    ನಾಮವಾಚಕ
  • ದಡ್ಡ; ಹೆಡ್ಡ; ಮಂಕ; ಗಾಂಪ; ಮುಟ್ಠಾಳ; ಮಂದಬುದ್ಧಿ.
  • (ಆಡುಮಾತು) ಶತದಡ್ಡ; ಪೂರಾ ತಿಳಿಗೇಡಿ; ಶುದ್ಧಪೆದ್ದ; ಹುಟ್ಟುದಡ್ಡ.

  • idiotic
    ಗುಣವಾಚಕ
    ಹೆಡ್ಡತನದ.

    idiotically
    ಕ್ರಿಯಾವಿಶೇಷಣ
    ಹೆಡ್ಡನಂತೆ; ಪೆದ್ದುತನದಿಂದ.

    idle
    ಗುಣವಾಚಕ
  • (ಕಾರ್ಯ, ಯೋಚನೆ, ಮಾತು – ಇವುಗಳ ವಿಷಯದಲ್ಲಿ) ನಿಷ್ಫಲ; ನಿರರ್ಥಕ; ಅಪ್ರಯೋಜಕ; ವ್ಯರ್ಥ: idle theorizing ವ್ಯರ್ಥ, ನಿರರ್ಥಕ – ವಾದ (ಮಾಡುವುದು).
  • ಆಧಾರವಿಲ್ಲದ; ನಿರಾಧಾರ: an idle rumour ನಿರಾಧಾರವಾದ ವದಂತಿ.
  • ಒಣ; ಶುಷ್ಕ; ಬರಡು; ಕೆಲಸಕ್ಕೆ ಬಾರದ; ನಿರುಪಯುಕ್ತ: idle chatter ಕಾಡುಹರಟೆ; ಕೆಲಸಕ್ಕೆ ಬಾರದ ಹರಟೆ.
  • (ಮನುಷ್ಯರ ವಿಷಯದಲ್ಲಿ) ಕೆಲಸವಿಲ್ಲದ; ನಿರುದ್ಯೋಗಿ; ಉದ್ಯೋಗವಿಲ್ಲದ.
  • (ವಸ್ತು, ಸ್ಥಳ, ಮೊದಲಾದವುಗಳ ವಿಷಯದಲ್ಲಿ) ಬಳಸದೆ ಬಿಟ್ಟ; ಅನುಪಯುಕ್ತ; ಹಾಳುಬಿದ್ದ; ಪಾಳುಬಿದ್ದ: idle tenements ವಾಸವಿಲ್ಲದ ನಿವಾಸಗಳು. idle capital ದುಡಿಯದ ಬಂಡವಾಳ; ಅನುತ್ಪಾದಕ ಬಂಡವಾಳ.
  • ಸೋಮಾರಿಯಾದ; ಮೈಗಳ್ಳನಾದ: idle boys in the street ಬೀದಿಯಲ್ಲಿಯ ಮೈಗಳ್ಳ ಹುಡುಗರು.
  • ಬಳಸುತ್ತಿಲ್ಲದ; ನಿಷ್ಕ್ರಿಯ; ಕೆಲಸ ಮಾಡುತ್ತಿಲ್ಲದ: idle machinery ಕೆಲಸ ಮಾಡುತ್ತಿಲ್ಲದ ಯಂತ್ರ.
  • (ಕಾಲ ಮೊದಲಾದವುಗಳ ವಿಷಯದಲ್ಲಿ) ಕೆಲಸವಿರದ; ವಿರಾಮದ.
  • ಬರಿಯ; ಕೇವಲ; ಪರಿಣಾಮಕಾರಿಯಲ್ಲದ; ಪೊಳ್ಳು: idle threats ಬರಿಯ ಬೆದರಿಕೆ.


  • logo