logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ecclesiological
ಗುಣವಾಚಕ
= ecclesiologic.

ecclesiologist
ನಾಮವಾಚಕ
ಚರ್ಚ್‍ ಶಿಲ್ಪಿ; ಚರ್ಚ್‍ ವಾಸ್ತುಶಿಲ್ಪಿ; ಚರ್ಚಿನ (ವಾಸ್ತು ಶಿಲ್ಪ) ಶಾಸ್ತ್ರ ತಿಳಿದವನು.

ecclesiology
ನಾಮವಾಚಕ
ಚರ್ಚಿನ ವಾಸ್ತುಶಿಲ್ಪ ಯಾ ಶಿಲ್ಪಶಾಸ್ತ್ರ; ಮುಖ್ಯವಾಗಿ ಚರ್ಚಿನ ಕಟ್ಟಡ, ಅದರ ಅಲಂಕಾರ — ಇವುಗಳಿಗೆ ಸಂಬಂಧಿಸಿದ ಶಾಸ್ತ್ರ.

Ecclus
ಸಂಕ್ಷಿಪ್ತ
Ecclesiasticus (Apocrypha).

eccrine
ಗುಣವಾಚಕ
ಎಕ್ರೈನ್‍; (ಗ್ರಂಥಿಯ ವಿಷಯದಲ್ಲಿ) ಜೀವಕೋಶದ ಜೀವದ್ರವ್ಯ ಕಳೆದುಕೊಳ್ಳದೆ, ಬಳಸದೆ ಸ್ರಾವವನ್ನು ಉತ್ಪತ್ತಿಮಾಡುವ.

ecdysis
ನಾಮವಾಚಕ
  • (ಮುಖ್ಯವಾಗಿ ಹಾವು ಮೊದಲಾದವುಗಳ ಪೊರೆಯ ವಿಷಯದಲ್ಲಿ) ಉಚ್ಚುವಿಕೆ; ಬಿಸಾಡುವುದು; ಪೊರೆಬಿಡುವುದು; ಕಳಚಿಕೊಳ್ಳುವುದು (ರೂಪಕವಾಗಿ ಸಹ).
  • (ಅಭ್ಯಾಸ, ಚಾಳಿ, ಮೊದಲಾದವನ್ನು) ತ್ಯಜಿಸುವುದು.
  • ಬಿಟ್ಟಪೊರೆ; ಹಾವಿನ ಪೊರೆ.
  • ಕವಚಗಳೆತ; (ಕೀಟಗಳ ಮತ್ತು ಚಿಪ್ಪು ಜೀವಿಗಳ ವಿಷಯದಲ್ಲಿ) ಹೊರಕವಚವನ್ನು ಕಳಚಿಹಾಕುವುದು.

  • ECG
    ಸಂಕ್ಷಿಪ್ತ
    electrocardiogram.

    echelon
    ನಾಮವಾಚಕ ಪದಗುಚ್ಛ
    in echelon ಸೋಪಾನಪಂಕ್ತಿಯಲ್ಲಿ; ಮೆಟ್ಟಿಲು ಮೆಟ್ಟಿಲಾಗಿ.
  • ಮೆಟ್ಟಿಲುಸಾಲು; ಮೆಟ್ಟಿಲುಜೋಡಣೆ; ಹಂತರಚನೆ; ಸೋಪಾನವ್ಯೂಹ; ಸೋಪಾನಪಂಕ್ತಿ; ಪರಸ್ಪರ ಸಮಾನಾಂತರವಾಗಿ ಮತ್ತು ಸೈನಿಕದಳಗಳನ್ನು ಪ್ರತಿಯೊಂದರ ಕೊನೆಯೂ ಅದರ ಮುಂದಿನ ಮತ್ತು ಹಿಂದಿನ ದಳಗಳಿಂದ ಸ್ಪಷ್ಟವಾಗಿ ಪ್ರತ್ಯೇಕವಾಗಿರುವಂತೆ ಮೆಟ್ಟಿಲುಮೆಟ್ಟಿಲಾಗಿ ಜೋಡಿಸಿರುವ ರಚನೆ.
  • ಸೋಪಾನಪಂಕ್ತಿ; ಮೆಟ್ಟಿಲುಸಾಲು; ಇದೇ ರೀತಿಯಲ್ಲಿ ಜೋಡಿಸಿರುವ ವಸ್ತುಗಳು (ಮುಖ್ಯವಾಗಿ ಹಡಗುಗಳು).
  • (ಸಾಮಗ್ರಿಗಳ ಯಾ ಯಂತ್ರೋಪಕರಣಗಳ) ಸರಬರಾಜಿನ ಪ್ರಧಾನ ವಿಭಾಗ.
  • ಅಧಿಕಾರವರ್ಗ; ಯಾವುದೇ ಸಂಸ್ಥೆಯಲ್ಲಿ ಯಾ ಸಂಘದಲ್ಲಿ ಒಂದೇ ಅಂತಸ್ತು ಯಾ ವರ್ಗಕ್ಕೆ ಸೇರಿದ ವ್ಯಕ್ತಿಗಳು: the higher echelons of the bureaucracy ನೌಕರಶಾಹಿಯ ಮೇಲಂತಸ್ತಿನವರು; ವರಿಷ್ಠ ನೌಕರವರ್ಗ; ಆಡಳಿತದ ವರಿಷ್ಠ ವರ್ಗ.

  • echelon
    ಸಕರ್ಮಕ ಕ್ರಿಯಾಪದ
    ಸೋಪಾನವ್ಯೂಹದಲ್ಲಿಡು; (ಸೈನಿಕರು, ಹಡಗುಗಳು, ವಿಮಾನಗಳು, ಸಾಲುಗಳನ್ನು) ಮೆಟ್ಟಿಲುಮೆಟ್ಟಿಲಾಗಿ ನಿಲ್ಲಿಸು, ರಚಿಸು.

    echeveria
    ನಾಮವಾಚಕ
    ಮಧ್ಯ ಮತ್ತು ದಕ್ಷಿಣ ಅಮೆರಿಕನ್‍ ಪ್ರಯೋಗದ, ಮಾಂಸಲವಾದ ಎಲೆ ಕಾಂಡಗಳುಳ್ಳ ಗಿಡಗಳ ಕುಲ, ಯಾ ಆ ಕುಲದ ಗಿಡ.


    logo