logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dandyism
ನಾಮವಾಚಕ
  • ಷೋಕಿತನ; ಸೊಗಸುಗಾರತನ.
  • (ಸಾಹಿತ್ಯ) ಇಳಿಗಾಲದ ಶೃಂಗಾರ ಶೈಲಿ; 19 ನೇ ಶತಮಾನದ ಇಂಗ್ಲಂಡ್‍ ಮತ್ತು ಹ್ರಾನ್ಸಿನ ಅವನತಿ ಕಾಲದ ಲೇಖಕರಿಂದ ಬಂದಿರುವ, ಮುಖ್ಯವಾಗಿ ಭಾಷೆಯ ಕೃತಕತೆ, ನಾಜೂಕಾದ ಭಾವಾವೇಶಗಳಿಂದ ಕೂಡಿದ ಸಾಹಿತ್ಯದ ಯಾ ಕಲೆಯ ಶೈಲಿ.

  • Dane
    ನಾಮವಾಚಕ ಪದಗುಚ್ಛ
    Great Dane = Dane(3).
  • ಡೇನ್‍; ಡೆನ್‍ಮಾರ್ಕ್‍ ದೇಶದವ.
  • (ಚರಿತ್ರೆ) 9 ರಿಂದ 11 ನೇ ಶತಮಾನದವರೆಗೆ ಇಂಗ್ಲಂಡನ್ನು ಆಕ್ರಮಿಸಿದ ಸ್ಕಾಂಡಿನೇವಿಯದವ.
  • ಮೋಟು ಕೂದಲಿನ, ದೊಡ್ಡ, ಬಲಿಷ್ಠ ನಾಯಿತಳಿ.

  • Danegeld
    ನಾಮವಾಚಕ
  • (ಚರಿತ್ರೆ) ವಾರ್ಷಿಕ ಕಂದಾಯ; ಬಹುಶಃ ಡೇನರ ಉಪಟಳದಿಂದ ಇಂಗ್ಲಂಡನ್ನು ಕಾಪಾಡಲು ಮೊದಲಿಗೆ 10 ನೇ ಶತಮಾನದಲ್ಲಿ ಹಾಕಿದ್ದ ವಾರ್ಷಿಕ ತೆರಿಗೆ.
  • ಲಂಚ ಕೊಟ್ಟು – ಒಲಿಸುವಿಕೆ, ತಣಿಸುವಿಕೆ, ತೃಪ್ತಿ ಪಡಿಸುವಿಕೆ.

  • Danelaw
    ನಾಮವಾಚಕ
    (ಚರಿತ್ರೆ) ಡೇನ್‍ಪ್ರಾಂತ್ಯ; 9–11ನೇ ಶತಮಾನಗಳಲ್ಲಿ ಡೆನ್ಮಾರ್ಕ್‍ ದೇಶದವರು ಆಕ್ರಮಿಸಿದ ಉತ್ತರ ಮತ್ತು ಪೂರ್ವ ಇಂಗ್ಲಂಡಿನ ಪ್ರದೇಶ, ಭಾಗ.

    Danes'-blood
    ನಾಮವಾಚಕ
    ಡೇನ್‍ ರಕ್ತದ ಗಿಡ; ಗುಲಾಬಿ ಬಣ್ಣದ ಹೂಗಳನ್ನು ಬಿಡುವ, ಓಕರಿಕೆ ಬರಿಸುವ ವಾಸನೆಯುಳ್ಳ, ಡೆನ್ಮಾರ್ಕ್‍ ದೇಶದವರು ರಣರಂಗದಲ್ಲಿ ಗಾಯಗೊಂಡ ಸ್ಥಳದಲ್ಲಿ ಹುಟ್ಟಿದ್ದೆಂದು ಹೇಳಲಾದ, ಎಲ್ಡರ್‍ ಕುಲದ ಮೂಲಿಕೆ.

    Daneweed
    ನಾಮವಾಚಕ
    = Danes’-blood.

    Danewort
    ನಾಮವಾಚಕ
    = Danes’-blood.

    dang
    ನಾಮವಾಚಕ
    = 2damn.

    dang
    ಗುಣವಾಚಕ
    = 3damn.

    danger
    ನಾಮವಾಚಕ ಪದಗುಚ್ಛ
  • ಅಪಾಯ; ಅನರ್ಥ; ಗಂಡಾಂತರ; ಆಪತ್ತು; ವಿಪತ್ತು; ಪ್ರಮಾದ; ಸೆರಗು (ಗ್ರಾಂ); ಭಯ.
  • (ರೈಲ್ವೆ) ಅಪಾಯ – ಸೂಚನೆ, ಸಂಜ್ಞೆ, ಸಂಕೇತ; ಎಚ್ಚರಿಕೆಯನ್ನೋ ನಿಲ್ಲಬೇಕೆಂಬುದನ್ನೋ ಸೂಚಿಸುವ ರೈಲ್ವೆ ಸಂಕೇತ: signal is at danger ಸಂಜ್ಞೆಯು ಎಚ್ಚರಿಕೆಯನ್ನು ತೋರಿಸುತ್ತಿದೆ.
  • ಅಪಾಯಕಾರಿ; ಹಾನಿಕಾರಿ; ಕೆಡಕನ್ನುಂಟುಮಾಡುವ – ವಸ್ತು, ವಿಷಯ: a danger to peace ಶಾಂತಿಗೆ ಅಪಾಯಕಾರಿ.


  • logo