logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cafe au lait
ನಾಮವಾಚಕ
  • ಹಾಲುಕಾಹಿ; ಬಿಳಿಕಾಹಿ; ಸಮಪ್ರಮಾಣದಲ್ಲಿ ಹಾಲು (ಮುಖ್ಯವಾಗಿ ಬಿಸಿ ಹಾಲು) ಬೆರೆಸಿರುವ ಕಾಹಿ.
  • ಕಾಹಿಬಣ್ಣ; ತಿಳಿಕಂದು ಬಣ್ಣ; ಹಾಲುಕಾಹಿ ಬಣ್ಣ.

  • cafe noir
    ನಾಮವಾಚಕ
    ಕಪ್ಪು ಕಾಹಿ; ಕರಿಕಾಹಿ; ಹಾಲು ಬೆರೆಸದ ಕಾಹಿ.

    cafe society
    ನಾಮವಾಚಕ
    ಕಾಹಿಸಮಾಜ; ಪ್ರತಿಷ್ಠಿತ ಹೋಟೆಲುಗಳಿಗೆ ಮತ್ತು ರಾತ್ರಿವಿಹಾರಮಂದಿರಗಳಿಗೆ ನಿಯತವಾಗಿ ಭೇಟಿಕೊಡುವ ಸಮಾಜದ ವರ್ಗ.

    cafeteria
    ನಾಮವಾಚಕ
    ಕ್ಯಾಹಿಟೀರಿಯ; ಸ್ವಯಂಸೇವೆ; ಹೋಟೆಲುಕಟ್ಟೆಯಲ್ಲಿ ಇಟ್ಟಿರುವ ಆಹಾರ ಪಾನೀಯಗಳನ್ನು ಗಿರಾಕಿಗಳೇ ತಮ್ಮ ಮೇಜುಗಳಿಗೆ ಒಯ್ಯುವ ವ್ಯವಸ್ಥೆಯಿರುವ ರೆಸ್ಟೊರಾಂಟು.

    caff
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) =cafe.

    caffeic
    ಗುಣವಾಚಕ
    (ರಸಾಯನವಿಜ್ಞಾನ) ಕಾಹಿಯ; ಕಾಹಿ ಸಂಬಂಧದ.

    caffeic acid
    ನಾಮವಾಚಕ
    (ರಸಾಯನವಿಜ್ಞಾನ) ಕ್ಯಾಹೇಯಿಕ್‍ ಆಮ್ಲ.

    caffeine
    ನಾಮವಾಚಕ
    (ರಸಾಯನವಿಜ್ಞಾನ) (ಔಷಧಶಾಸ್ತ್ರ) ಕ್ಯಾಹೇನ್‍; ಟೀ, ಕಾಹಿ, ಕೋಲ ಮೊದಲಾದವುಗಳಲ್ಲಿರುವ ಪ್ಯುರೀನ ಗುಂಪಿಗೆ ಸೇರಿದ, ಬಿಳಿಯ, ಕಹಿಯಾದ, ಕೇಂದ್ರ ನರವ್ಯೂಹದ ಹಾಗೂ ಮೂತ್ರಸ್ರಾವದ ಉತ್ತೇಜನಕ್ಕೆ ಔಷಧಿಯಾಗಿ ಬಳಸುವ ಒಂದು ಕ್ಷಾರಾಭ, ${\rm C}_8{\rm H}_{10}{\rm N}_4{\rm O}_2$.

    Caffre
    ನಾಮವಾಚಕ
    = Kaffir.

    caftan
    ನಾಮವಾಚಕ
  • (ತುರ್ಕಿ ಮೊದಲಾದ ಪೂರ್ವದೇಶಗಳಲ್ಲಿ, ಗಂಡಸಿನ ನಡುಪಟ್ಟಿಯಿರುವ) ಕಪನಿ; ಜೋಲಂಗಿ. Figure: caftan 1
  • (ಹೆಂಗಸಿನ) ದಗಲೆನಿಲುವಂಗಿ; ಜೋಲಂಗಿ.
  • ದಗಲೆ; ಸಡಿಲವಾದ-ಅಂಗಿ, ಷರಟು.


  • logo