logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

backside
ನಾಮವಾಚಕ
  • (ವಸ್ತು, ವ್ಯಕ್ತಿ, ದೃಶ್ಯ, ಮೊದಲಾದವುಗಳ) ಬೆನ್ನುಭಾಗ; ಬೆಂಬದಿ; ಬೆಂಗಡೆ; ಹಿಂಬದಿ; ಹಿಂಭಾಗ; ಹಿಂದುಗಡೆ.
  • ಕುಂಡೆ; ಪಿರ್ರೆ; ಪೃಷ್ಠ.

  • backsight
    ನಾಮವಾಚಕ
  • (ಬಂದೂಕು ಮೊದಲಾದವುಗಳ ವಿಷಯದಲ್ಲಿ) ಹಿಂಗುರಿನೋಟ.
  • (ಮೋಜಣಿ) (ಸಮತಲ ಮಟ್ಟವನ್ನು ನೋಡುವಾಗ) ಹಿನ್ನೋಟ; ಮುಂದೊಂದು ಸ್ಥಳದಲ್ಲಿ ನಿಂತು ಹಿಂದುಗಡೆಗೆ ನೋಡುವಿಕೆ.

  • backslapping
    ನಾಮವಾಚಕ
  • (ಆಡುಮಾತು) ಬೆನ್ನು ತಟ್ಟುವುದು; ಸ್ನೇಹ ಪ್ರೀತಿಗಳ ಸೂಚಕವಾಗಿ ಬೆನ್ನಿಗೆ ಹೊಡೆಯುವುದು ಯಾ ಬೆನ್ನನ್ನು ತಟ್ಟುವುದು.
  • (ರೂಪಕವಾಗಿ) (ಬೆನ್ನು ತಟ್ಟುವುದು, ಜೋರಾಗಿ ಕೂಗುವುದು, ಮೊದಲಾದವುಗಳಿಂದ, ಸ್ನೇಹ, ಪ್ರೀತಿ, ಸೌಹಾರ್ದ, ಆದರ, ಮೊದಲಾದವುಗಳ) ಉತ್ಸಾಹಪೂರ್ವಕ ಪ್ರದರ್ಶನ.

  • backslide
    ಅಕರ್ಮಕ ಕ್ರಿಯಾಪದ
  • (ಯಾವುದೇ ಒಂದು ನಂಬಿಕೆ, ಸ್ಥಾನ, ಮೊದಲಾದವುಗಳಿಂದ) ಹಿಂಜಾರು; ಹಿಂಬರು.
  • ಪುನಃ ಪಾಪಕ್ಕೆ, ತಪ್ಪಿತಕ್ಕೆ – ಬೀಳು, ಜಾರು.

  • backslider
    ನಾಮವಾಚಕ
  • (ನಂಬಿಕೆ, ಸ್ಥಾನ, ಮೊದಲಾದವುಗಳಿಂದ) ಹಿಂಜಾರುವವನು.
  • ಪುನಃ ಪಾಪಕ್ಕೆ ಯಾ ತಪ್ಪಿತಕ್ಕೆ ಬೀಳುವವನು, ಜಾರುವವನು.

  • backsliding
    ನಾಮವಾಚಕ
  • (ನಂಬಿಕೆ, ಸ್ಥಾನ, ಮೊದಲಾದವುಗಳಿಂದ) ಹಿಂಜಾರಿಕೆ; ಹಿಂದೆ ಬೀಳುವುದು.
  • ಪುನಃಪತನ; ಪುನಃ ಪಾಪಕ್ಕೆ, ತಪ್ಪಿತಕ್ಕೆ – ಬೀಳುವುದು, ಜಾರುವಿಕೆ.

  • backspace
    ಅಕರ್ಮಕ ಕ್ರಿಯಾಪದ
    ಹಿಂಜರುಗಿಸು; ಹಿನ್ನೂಕು; ವಿಶೇಷ ಗುಂಡಿಯನ್ನು ಒತ್ತುವುದರಿಂದ ಟೈಪ್‍ರೈಟರ್‍ ಚಾಲಕವನ್ನು ಒಂದು ತೆರಪು ಯಾ ಜಾಗ ಹಿಂದಕ್ಕೆ ಚಲಿಸುವಂತೆ ಮಾಡು ಯಾ ಜರುಗಿಸು.

    backspace
    ನಾಮವಾಚಕ
  • (ಹಿಂಜರುಗಿಸುವುದರಿಂದ ಆದ) ತೆರಪು.
  • ಹಿಂತೆರಪು – ಗುಂಡಿ, ಕೀಲಿ; ಹಿಂತೆರಪುಂಟುಮಾಡಲು ಬಳಸುವ ಗುಂಡಿ.

  • backstage
    ನಾಮವಾಚಕ
    (ನಾಟಕಶಾಲೆ ಮೊದಲಾದವುಗಳಲ್ಲಿ) ನೇಪಥ್ಯ; ರಂಗದ ಹಿಂಭಾಗ; ತೆರೆಮರೆ; ಮುಖ್ಯವಾಗಿ ರಂಗದ ಪಕ್ಕದಲ್ಲಿರುವ ವೇಷ ಹಾಕಿಕೊಳ್ಳುವ ಕೋಣೆಗಳು.

    backstage
    ಗುಣವಾಚಕ
  • (ನಾಟಕಶಾಲೆ ಮೊದಲಾದವುಗಳ) ನೇಪಥ್ಯದ; ತೆರೆಮರೆಯ; ತೆರೆಯ ಹಿಂದೆ ನಡೆಯುವ.
  • (ರೂಪಕವಾಗಿ) ಮರೆಯ; ತೆರೆಮರೆಯ; ಗುಟ್ಟಿನ; ಗುಪ್ತವಾದ: backstage deals ತೆರೆಮರೆಯ ವ್ಯವಹಾರಗಳು.


  • logo