logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abolisher
ನಾಮವಾಚಕ
ರದ್ದುಗಾರ; ಕೊನೆಗಾಣಿಸುವವ; ನಾಶಕ.

abolishment
ನಾಮವಾಚಕ
= abolition.

abolition
ನಾಮವಾಚಕ
  • ರದ್ದತಿ; ರದ್ದಿಯಾತಿ; ನಿರ್ಮೂಲನ; ತೊಡೆದುಹಾಕುವಿಕೆ.
  • ರದ್ದತಿ; ರದ್ದಿಯಾತಿ; (ಮುಖ್ಯವಾಗಿ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ) ರದ್ದು ಮಾಡಿದ್ದು; ಕೊನೆಗೊಳಿಸಿದ್ದು.
  • (ಚರಿತ್ರೆ) ಗುಲಾಮಗಿರಿ ರದ್ದತಿ; 18 ಮತ್ತು 19ನೇ ಶತಮಾನಗಳಲ್ಲಿ ನೀಗ್ರೋ ಗುಲಾಮಗಿರಿ ಪದ್ಧತಿಯನ್ನು ರದ್ದು ಮಾಡಿದ ಚಳವಳಿ.

  • abolitionary
    ಗುಣವಾಚಕ
  • ರದ್ದತಿಯನ್ನು ಸಮರ್ಥಿಸುವ.
  • ರದ್ದತಿಗೆ ಸಂಬಂಧಪಟ್ಟ.
  • ನಾಶಕರವಾದ; ನಿರ್ಮೂಲನಕರ.

  • abolitionism
    ನಾಮವಾಚಕ
    (ಗುಲಾಮಗಿರಿ) ರದ್ದತಿ ವಾದ; ನಿರ್ಮೂಲನ ವಾದ.

    abolitionist
    ನಾಮವಾಚಕ
    (ಗುಲಾಮಗಿರಿ) ರದ್ದತಿವಾದಿ; ನಿರ್ಮೂಲನವಾದಿ.

    abomasum
    ನಾಮವಾಚಕ
    (ಬಹುವಚನ abomasa)(ಜೀವವಿಜ್ಞಾನ) ಚತುರ್ಥ ಜಠರ; ಚತುರ್ಥಾಮಾಶಯ; ರೋಮಂಥಗಳ (ಮೆಲಕು ಹಾಕುವ ಪ್ರಾಣಿಗಳ) ನಾಲ್ಕನೆಯ ಹೊಟ್ಟೆ.

    abominable
    ಗುಣವಾಚಕ
  • (ಭೌತಿಕವಾಗಿ ಯಾ ನೈತಿಕವಾಗಿ) ಓಕರಿಕೆ ತರುವ; ಅಸಹ್ಯಕರ; ಜುಗುಪ್ಸೆ ಹುಟ್ಟಿಸುವ; ಹೇಸಿಕೆಯಾದ.
  • (ಅತಿಶಯೋಕ್ತಿ) ಹಿತವಾಗಿರದ; ಕೆಟ್ಟ; ಅಸಹನೀಯ: abominable weather ಹಿತವಾಗಿರದ ಹವಾ. abominable food ಕೆಟ್ಟ ಆಹಾರ.

  • Abominable Snowman
    ನಾಮವಾಚಕ
    ಯೇತಿ; ಹಿಮಮಾನವ; ಮಾನವನ ಪೂರ್ವಜನೆಂದು ನಂಬಲಾಗಿರುವ, ಇನ್ನೂ ಗುರುತಿಸಲಾಗದ, ಹಿಮಾಲಯದಲ್ಲಿನ ಒಂದು ಪ್ರಾಣಿ.

    abominableness
    ನಾಮವಾಚಕ
    ಓಕರಿಕೆ, ಜುಗುಪ್ಸೆ–ಹುಟ್ಟಿಸುವಿಕೆ; ಜುಗುಪ್ಸೆ ತರುವಿಕೆ; ಜುಗುಪ್ಸಾಕಾರಿತ್ವ.


    logo