logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inornate
ಗುಣವಾಚಕ
ಅಲಂಕಾರವಿಲ್ಲದ; ಅನಲಂಕೃತ; ನಿರಲಂಕೃತ; ನಿರಾಡಂಬರದ; ಸರಳ: transform inornate words into perfect poetry ನಿರಾಡಂಬರದ ಪದಗಳನ್ನು ಪರಿಪೂರ್ಣ ಕಾವ್ಯವಾಗಿ ಮಾರ್ಪಡಿಸು.

inosculate
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ನಾರು ಮೊದಲಾದವನ್ನು) ಒತ್ತಾಗಿ – ಜೋಡಿಸು, ಕೂಡಿಸು, ಸೇರಿಸು, ಜಂಟಿಹಾಕು, ಹೆಣೆ.
  • (ರಕ್ತನಾಳ ಮೊದಲಾದವುಗಳ ವಿಷಯದಲ್ಲಿ) (ಒಂದಕ್ಕೊಂದು) ಸೇರಿಕೊ; ಕೂಡಿಕೊ; ಜಂಟಿಹಾಕಿಕೊ; ಸಂಧಿಸು; ಹೆಣೆದುಕೊ; ಜೋಡಣೆಯಾಗು.
  • (ರಕ್ತನಾಳ ಮೊದಲಾದವು) ತುದಿಗೆ ತುದಿ ಸೇರಿಕೊಂಡಿರು; ತುದಿಯಲ್ಲಿ ಸೇರಿಕೊಂಡಿರು; ಒಂದರ ಕೊನೆ ಮತ್ತೊಂದರ ನಾಳದೊಡನೆ ಸೇರಿರು.
  • (ನಾರು ಮೊದಲಾದವು) ಒತ್ತಾಗಿ ಕೂಡಿಕೊ; ಹೆಣೆದುಕೊಂಡಿರು.

  • inosculation
    ನಾಮವಾಚಕ
  • (ರಕ್ತನಾಳ ಮೊದಲಾದವುಗಳ) ತುದಿ ಹೆಣಿಗೆ; ಅಗ್ರಸಂಯೋಜನೆ; ತುದಿ – ಕೂಡಿಕೊಳ್ಳುವಿಕೆ, ಸಂಧಿಸುವಿಕೆ; ಎರಡು ಕೊನೆಗಳೂ ಸೇರಿಕೊಂಡಿರುವಿಕೆ.
  • ಜಂಟಿ; ಹೆಣಿಗೆ; ಜಂಟಿ ಹಾಕಿಕೊಂಡಿರುವಿಕೆ.

  • inpouring
    ಗುಣವಾಚಕ
    ಒಳಕ್ಕೆ – ಸುರಿಯುವ, ಹೊಯ್ಯುವ.

    inpouring
    ನಾಮವಾಚಕ
    ಒಳಸುರಿತ; ಒಳಹೊಯ್ತ; ಒಳಕ್ಕೆ – ಸುರಿಯುವುದು, ಹೊಯ್ಯುವುದು.

    input
    ನಾಮವಾಚಕ
  • ಸಂಭಾರ; (ಯಾವುದೇ ಪ್ರಕ್ರಿಯೆ ಯಾ ವ್ಯವಸ್ಥೆಯ ಮೂಲಕ) ಒಳಕ್ಕೆ – ಹಾಕಿದ್ದು, ಸೇರಿಸಿದ್ದು, ಕೊಟ್ಟಿದ್ದು.
  • (ಇಲೆಕ್ಟ್ರಾನಿಕ್ಸ್‍)
    1. ಪ್ರವೇಶದ್ವಾರ; ಪ್ರವೇಶ ಯೋಜನೆ; ಪ್ರವೇಶಸಾಧನ; ಮಾಹಿತಿ, ಮೊದಲಾದವು ಒಂದು ವ್ಯವಸ್ಥೆಯನ್ನು ಪ್ರವೇಶಿಸುವ ಸ್ಥಳ, ಏರ್ಪಾಟು ಯಾ ಸಾಧನ.
    2. ಒಂದು ಸಾಧನಕ್ಕೆ ಒದಗಿಸುವ ಶಕ್ತಿ, ಸಂಜ್ಞೆ.
  • ದತ್ತಮಾಹಿತಿ; ಕಂಪ್ಯೂಟರಿಗೆ ಒದಗಿಸಿದ ಮಾಹಿತಿ.
  • ಪ್ರದಾನ:
    1. ಒದಗಿಸುವ ಪ್ರಕ್ರಿಯೆ ಯಾ ಕ್ರಿಯೆ.
    2. ಮಾಹಿತಿ ಮೊದಲಾದವನ್ನು ಒದಗಿಸುವುದು.

  • input
    ಸಕರ್ಮಕ ಕ್ರಿಯಾಪದ
  • ಒಳಕ್ಕೆ – ಹಾಕು; ಸೇರಿಸು, ಕೊಡು.
  • ಪ್ರದಾನ ಮಾಡು; ಮಾಹಿತಿ, ಪ್ರೋಗ್ರಾಂ, ಮೊದಲಾದವನ್ನು ಕಂಪ್ಯೂಟರಿಗೆ ಒದಗಿಸು.

  • inquest
    ನಾಮವಾಚಕ ಪದಗುಚ್ಛ
  • (ಕಾನೂನು ಪ್ರಕಾರ ಯಾ ನ್ಯಾಯಾಧಿಪತಿ ಮಾಡುವ) ಮಹಜರು; ಪಂಚನಾಮೆ.
  • ಕ್ರಮಬದ್ಧ ವಿಚಾರಣೆ; ಅಧಿಕೃತ ತನಿಖೆ.
  • = cornoer’s inquest.
  • ದುರ್ಮರಣ ವಿಚಾರಣಾಧಿಕಾರಿಯ ನ್ಯಾಯದರ್ಶಿಮಂಡಲಿ.
  • (ಆಡುಮಾತು) (ಒಂದು ಆಟ, ಚುನಾವಣೆ, ಮೊದಲಾದವುಗಳು ಮುಗಿದ ತರುವಾಯ ಫಲಿತಾಂಶಗಳನ್ನು ಕುರಿತ) ವಿಶ್ಲೇಷಣೆ; ಚರ್ಚೆ.

  • inquietude
    ನಾಮವಾಚಕ
  • ದೇಹದ ಮುಜುಗರ, ಅಸ್ವಸ್ಥತೆ.
  • ಮಾನಸಿಕ ಅಸ್ವಸ್ಥತೆ; ಕಳವಳ; ಚಿಂತೆ; ದುಗುಡ; ಉಮ್ಮಳ; ತಳಮಳ: occupied by a thousand inquietudes ಸಾವಿರ ಚಿಂತೆಗಳಲ್ಲಿ ಮುಳುಗಿ.

  • inquiline
    ನಾಮವಾಚಕ
    = $^2$commensal(2).


    logo