logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inoperable
ಗುಣವಾಚಕ
  • (ಶಸ್ತ್ರವೈದ್ಯ) (ದೇಹದಲ್ಲಿನ ಗೆಡ್ಡೆ, ದುರ್ಮಾಂಸ, ಮೊದಲಾದವುಗಳ ವಿಷಯದಲ್ಲಿ) ಶಸ್ತ್ರಚಿಕಿತ್ಸೆ ಮಾಡಲಾಗದ; ಶಸ್ತ್ರಚಿಕಿತ್ಸೆಗೆ ಈರಿದ: inoperable cancer ಶಸ್ತ್ರಚಿಕಿತ್ಸೆಗೆ ಈರಿದ ಕ್ಯಾನ್ಸರ್‍.
  • = inoperative.

  • inoperative
    ಗುಣವಾಚಕ
  • ಕೆಲಸ ಮಾಡದ; ನಿಷ್ಕ್ರಿಯ.
  • ಕಾರ್ಯಕಾರಿಯಲ್ಲದ; ಪರಿಣಾಮಕಾರಿಯಲ್ಲದ; ಜಾರಿಗೆ, ಆಚರಣೆಗೆ, ಕಾರ್ಯರೂಪಕ್ಕೆ – ಬರದ: inoperative remedies ಪರಿಣಾಮಕಾರಿಯಲ್ಲದ ಪರಿಹಾರಗಳು.

  • inopportune
    ಗುಣವಾಚಕ
    ಅಕಾಲದ; ಅಕಾಲಿಕ; ಸಕಾಲಿಕವಲ್ಲದ; ಸಮಯೋಚಿತವಲ್ಲದ: inopportune in their demands ತಮ್ಮ ಬೇಡಿಕೆಗಳಲ್ಲಿ ಸಮಯೋಚಿತವಾಗಿಲ್ಲದೆ.

    inopportunely
    ಕ್ರಿಯಾವಿಶೇಷಣ
    ಅಕಾಲದಲ್ಲಿ; ಅಕಾಲಿಕವಾಗಿ; ಸಮಯೋಚಿತವಲ್ಲದ ರೀತಿಯಲ್ಲಿ.

    inopportuneness
    ನಾಮವಾಚಕ
    ಅಕಾಲ; ಸಮಯಾನುಚಿತತೆ; ಅಕಾಲಿಕವಾಗಿರುವಿಕೆ.

    inordinate
    ಗುಣವಾಚಕ
  • ಮಿತಿಈರಿದ; ವಿಪರೀತವಾದ; ಅತಿಯಾದ; ಅತ್ಯಧಿಕ: inordinate desire ಅತಿ ಆಸೆ.
  • ಅತಿರೇಕದ; ಸಂಯಮವಿಲ್ಲದ; ಅಳತೆ ಈರಿದ; ಹಾಳತವಿಲ್ಲದ; ಹದಗೆಟ್ಟ; ಉಚ್ಛೃಂಖಲ: inordinate of love of beauty ಸೌಂದರ್ಯದ ಅತಿರೇಕದ ಪ್ರೇಮ.
  • ಅವ್ಯವಸ್ಥೆಯ; ಅಡ್ಡಾದಿಡ್ಡಿಯ; ಗೊಂದಲದ: a rude inordinate heap ಅಡ್ಡಾದಿಡ್ಡಿಯಾದ ಅವ್ಯವಸ್ಥಿತ ರಾಶಿ.

  • inordinately
    ಕ್ರಿಯಾವಿಶೇಷಣ
  • ಅತಿಯಾಗಿ; ವಿಪರೀತವಾಗಿ; ಮಿತಿಈರಿದ ರೀತಿಯಲ್ಲಿ.
  • ಅತಿರೇಕವಾಗಿ; ಸಂಯಮವಿಲ್ಲದೆ; ಹಾಳತವಿಲ್ಲದೆ; ಉಚ್ಛೃಂಖಲವಾಗಿ.
  • ಅವ್ಯವಸ್ಥಿತವಾಗಿ; ಗೊಂದಲದಿಂದ; ಅಡ್ಡಾದಿಡ್ಡಿಯಾಗಿ.

  • inorganic
    ಗುಣವಾಚಕ
  • ಅಸಂಘಟಿತ; ಸಂಘಟಿತ ರಚನೆ ಇಲ್ಲದ.
  • (ರಸಾಯನವಿಜ್ಞಾನ) ಅಕಾರ್ಬನಿಕ; ಅಜೈವಿಕ; ನಿರವಯವಿ; ಖನಿಜ ಮೂಲದ; ಕಾರ್ಬನ್‍ ಇಲ್ಲದ.
  • ಹೊರಗಿನ; ಬಾಹ್ಯ; ಆಗಂತುಕ; ಅಸ್ವಾಭಾವಿಕ; ಸ್ವಾಭಾವಿಕ ಬೆಳವಣಿಗೆಯಿಂದ ಆಗಿರದ: an inorganic form of society ಸಮಾಜದ ಆಗಂತುಕ ರೂಪ.
  • (ಭಾಷಾಶಾಸ್ತ್ರ) ಸಾಧಾರಣ ವ್ಯುತ್ಪತ್ತಿಯ ಮೂಲಕ ವಿವರಿಸಲಾಗದ; ರೂಢಿಯ ವ್ಯತ್ಪತ್ತಿಯ ಮೂಲಕ ವಿವರಿಸಲಾಗದ.

  • inorganic chemistry
    ನಾಮವಾಚಕ
    ಅಕಾರ್ಬನಿಕ ರಸಾಯನ ವಿಜ್ಞಾನ; ಅಕಾರ್ಬನಿಕ ಸಂಯುಕ್ತಗಳನ್ನು ಕುರಿತ ರಸಾಯನ ವಿಜ್ಞಾನ.

    inorganization
    ನಾಮವಾಚಕ
    ಅವ್ಯವಸ್ಥೆ; ವ್ಯವಸ್ಥೆಯಿಲ್ಲದಿರುವಿಕೆ.


    logo