logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inoculate
ಸಕರ್ಮಕ ಕ್ರಿಯಾಪದ
  • (ಮನುಷ್ಯನಿಗೆ ಯಾ ಪ್ರಾಣಿಗೆ ಬಹು ಸೌಮ್ಯಸ್ಥಿತಿಯಲ್ಲಿ ರೋಗವನ್ನುಂಟು ಮಾಡಿ ಆ ರೋಗ ಬರದಂತೆ ರಕ್ಷಿಸುವ ಸಲುವಾಗಿ, ರೋಗದ ವಿಷವನ್ನು ಯಾ ಸೂಕ್ಷ್ಮ ರೋಗಾಣುಗಳನ್ನು) ರಕ್ತದ ಒಳಕ್ಕೆ – ಹೊಗಿಸು, ಚುಚ್ಚು; ರೋಗಾಣು ಚುಚ್ಚುಮದ್ದು ಹಾಕು; ಇನಾಕ್ಯುಲೇಟ್‍ ಮಾಡು: inoculate against cholera ಕಾಲರ ಬರದಿರುವ ಹಾಗೆ ಇನಾಕ್ಯುಲೇಷನ್‍ ಮಾಡು.
  • (ವ್ಯಕ್ತಿ ಮೊದಲಾದವರಲ್ಲಿ ರೋಗ ಮೊದಲಾದವನ್ನು) ನೆಡು; ನಾಟು; (ಒಳಕ್ಕೆ) ಹೊಗಿಸು; ಬೇರೂರಿಸು; ಸ್ಥಾಪಿಸು.
  • (ಮೊಳಕೆ, ಕುಡಿಗಳನ್ನು) ಗಿಡಕ್ಕೆ ಸೇರಿಸು, ಕಟ್ಟು; ಕಸಿಕಟ್ಟು; ಕಲಮು ಮಾಡು; ಅಂಟುಕಟ್ಟು; ಅಂಟಿಸು; ಅಂಟಿಕ್ಕು; ಕಣ್ಣುಹಾಕು: a dextrous hand inoculates a rose-tree bud upon an apple stock ಕುಶಲ ಕೈಯೊಂದು ಸೇಬುಕಾಂಡಕ್ಕೆ ಗುಲಾಬಿಗಿಡವನ್ನು ಕಸಿಕಟ್ಟುತ್ತದೆ.
  • (ಯಾವುದೇ ಭಾವನೆಯನ್ನು) ಮನಹೊಗಿಸು; ಮನಸ್ಸಿನಲ್ಲಿ ಸೇರಿಸು; ಮನಸ್ಸಿಗೆ ನಾಟಿಸು; ಮನಸ್ಸಿಗೆ ತುಂಬು: inoculated them with their ideas of revolution ತಮ್ಮ ಕ್ರಾಂತಿವಿಚಾರಗಳನ್ನು ಅವರ ಮನಸ್ಸಿಗೆ ತುಂಬಿದರು.

  • inoculation
    ನಾಮವಾಚಕ
  • ಇನಾಕ್ಯುಲೇಷನ್‍; ರೋಗಾಣು ಚುಚ್ಚಿಕೆ; ರೋಗ ಬರದಂತೆ ಮಾಡಲು ಆ ರೋಗದ ವಿಷವನ್ನು ಯಾ ಸೂಕ್ಷ್ಮ ರೋಗಾಣುಗಳನ್ನು – ಒಳಹೊಗಿಸುವಿಕೆ, ಚುಚ್ಚುವಿಕೆ.
  • (ರೂಪಕವಾಗಿ) (ವ್ಯಕ್ತಿಯ ಮನಸ್ಸನ್ನು ಭಾವನೆ, ಅಭಿಪ್ರಾಯ, ಮೊದಲಾದವುಗಳಿಂದ) ತುಂಬುವಿಕೆ; ವ್ಯಾಪಿಸುವಿಕೆ.
  • (ಮೊಗ್ಗಿನಿಂದ) ಕಸಿಕಟ್ಟುವಿಕೆ ಯಾ ಹಾಗೆ ಕಸಿಮಾಡಿದ್ದು.

  • inoculative
    ಗುಣವಾಚಕ
    ರೋಗಾಣು ಚುಚ್ಚುಮದ್ದಿನ; ಇನಾಕ್ಯುಲೇಷನ್ನಿನ; ಇನಾಕ್ಯುಲೇಷನ್ನಿಗೆ ಸಂಬಂಧಿಸಿದ; ಇನಾಕ್ಯುಲೇಷನ್‍ ರೀತಿಯ: inoculative experiment ಇನಾಕ್ಯುಲೇಷನ್‍ ರೀತಿಯ ಪ್ರಯೋಗ.

    inoculator
    ನಾಮವಾಚಕ
  • (ಮದ್ದು) ಚುಚ್ಚುಗ; ಇನಾಕ್ಯುಲೇಷನ್‍ ಮಾಡುವವನು.
  • ಕಸಿ ಕಟ್ಟುವವನು.

  • inoculum
    ನಾಮವಾಚಕ
    ಇನಾಕ್ಯುಲೇಷನ್‍ ಪದಾರ್ಥ, ವಸ್ತು; ಇನಾಕ್ಯುಲೇಷನ್‍ಗೆ ಬಳಸುವ ಯಾವುದೇ ವಸ್ತು ಯಾ ಅದರ ಪ್ರಮಾಣ.

    inodorous
    ಗುಣವಾಚಕ
    ವಾಸನೆಯಿಲ್ಲದ; ನಿರ್ಗಂಧ; ಗಂಧರಹಿತ; ವಾಸನೆರಹಿತ.

    inoffensive
    ಗುಣವಾಚಕ
  • ಕೆಡುಕು ಮಾಡದ; ಅಪಾಯಕಾರಿಯಲ್ಲದ; ನೋವುಂಟುಮಾಡದ; ಸಾಧು ಸ್ವಭಾವದ: an inoffensive animal ಸಾಧುಪ್ರಾಣಿ.
  • ಆಕ್ಷೇಪಕರವಲ್ಲದ; ನಿರಾಕ್ಷೇಪವಾದ; ಅನಾಕ್ಷೇಪಣಿಯ; ಆಕ್ಷೇಪಣೆಗೆ ಕಾರಣವಾಗದ: inoffensive recreation ಆಕ್ಷೇಪಕರವಲ್ಲದ ವಿನೋದ.

  • inoffensively
    ಕ್ರಿಯಾವಿಶೇಷಣ
  • ಕೆಡುಕು ಮಾಡದಂತೆ; ನೋಯಿಸದೆ; ತೊಂದರೆ ಕೊಡದೆ.
  • ಆಕ್ಷೇಪಕರವಲ್ಲದಂತೆ; ಆಕ್ಷೇಪಣೆಗೆ ಕಾರಣವಾಗದ ರೀತಿಯಲ್ಲಿ.

  • inoffensiveness
    ನಾಮವಾಚಕ
  • ಸಾಧುತನ; ಕೆಡುಕುಮಾಡದ ಲಕ್ಷಣ; ನೋಯಿಸದಿರುವಿಕೆ; ತೊಂದರೆ ಕೊಡದಿರುವಿಕೆ.
  • ಆಕ್ಷೇಪಕರವಲ್ಲದಾಗಿರುವಿಕೆ; ಅನಾಕ್ಷೇಪಣೀಯತೆ.

  • inofficious
    ಗುಣವಾಚಕ
  • ಅಧಿಕಾರವಿಲ್ಲದ; ಅಧಿಕಾರರಹಿತ; ನಿರಧಿಕೃತ.
  • ಕಾರ್ಯಕಾರಿಯಲ್ಲದ; ನಿಷ್ಕ್ರಿಯ; ಕೆಲಸ ಮಾಡದ; ಕೆಲಸಕ್ಕೆ ಬಾರದ: any other construction of the sub-section would make it inofficious ಈ ಉಪವಿಭಾಗಕ್ಕೆ ಬೇರೆ ಯಾವುದೇ ಅರ್ಥ ಕಲ್ಪನೆ ಮಾಡುವುದು ಅದನ್ನು ನಿಷ್ಕ್ರಿಯಗೊಳಿಸುತ್ತದೆ.
  • (ನ್ಯಾಯಶಾಸ್ತ್ರ) ನೀತಿಬದ್ಧವಲ್ಲದ; ಧರ್ಮಸಮ್ಮತವಲ್ಲದ; ಕರ್ತವ್ಯಬದ್ಧವಲ್ಲದ; ನೈತಿಕ ಕರ್ತವ್ಯಕ್ಕೆ – ಅನುಸಾರವಾಗಿಲ್ಲದ, ಹೊಂದದ, ಹೊರತಾದ: an inofficious will ನೀತಿಗೆ ಹೊಂದದ ಉಯಿಲು.


  • logo