ನಾವೀನ್ಯ; ಹೊಸ ನಡೆವಳಿ; ಹೊಸ ಮಾರ್ಪಾಟು; ಹೊಸ ಬದಲಾವಣೆ; ನೂತನ ಪರಿಪಾಠ; ನವೀನತೆ ಕಲ್ಪಿಸುವುದರ ಮೂಲಕ ಆಗುವ ಪರಿವರ್ತನೆ, ಬದಲಾವಣೆ; ಹೊಸದಾಗಿ ಆಚರಣೆಗೆ ತಂದದ್ದು: technological innovations in industry ಕೈಗಾರಿಕೆಯಲ್ಲಿ ತಾಂತ್ರಿಕ ನಾವೀನ್ಯಗಳು, ಹೊಸ ಮಾರ್ಪಾಟುಗಳು.
innovative
ಗುಣವಾಚಕ
ನಾವೀನ್ಯವುಂಟು ಮಾಡುವ; ಹೊಸತನ ತರುವ.
ಬದಲಾವಣೆ ಮಾಡುವಂಥ; ಪರಿವರ್ತನೆ ಮಾಡುವ.
innovator
ನಾಮವಾಚಕ
ನವನಿರ್ಮಿತಿಕಾರ; ನವೀನತಾಕಲ್ಪಕ; ಹೊಸತನ ತರುವವನು; ಹೊಸತನದ ಯಾ ಹೊಸ ವಿಧಾನಗಳ ಪ್ರವರ್ತಕ.
ಮಾರ್ಪಾಡುಗಾರ; ಬದಲಾವಣಿಗ; ಪರಿವರ್ತಕ; ಪರಿವರ್ತನೆಗಾರ.
innovatory
ಗುಣವಾಚಕ
ನಾವೀನ್ಯಕಾರಿ; ಹೊಸತನ ತರುವ ಸ್ವಭಾವದ; ನವೀನತೆ ಕಲ್ಪಿಸುವ ಪ್ರವೃತ್ತಿಯ.
ಪರಿವರ್ತನಕಾರಿ; ಮಾರ್ಪಾಡು, ಬದಲಾವಣೆ ಮಾಡುವ ಸ್ವಭಾವದ.
innoxious
ಗುಣವಾಚಕ
ಕೇಡುಂಟುಮಾಡದ; ಹಾನಿ ಮಾಡದ; ಕೆಡಕು ಆಗದ; ತೊಂದರೆ ಮಾಡದ; ನಿರಪಾಯಕರ; ನಿರುಪದ್ರವಿ; ನಿರುಪದ್ರವಕಾರಿ: the poison serpents produce remains innoxious to themselves ಹಾವುಗಳು ಉತ್ಪತ್ತಿಮಾಡುವ ವಿಷ ಅವುಗಳಿಗೆ ಹಾನಿ ಮಾಡುವುದಿಲ್ಲ.
innoxiously
ಕ್ರಿಯಾವಿಶೇಷಣ
ಕೇಡುಂಟು ಮಾಡದಂತೆ; ಹಾನಿ ಮಾಡದಂತೆ; ನಿರುಪದ್ರವವಾಗಿ; ಕೆಡುಕಾಗದ ರೀತಿಯಲ್ಲಿ.
(ಚರಿತ್ರೆ) ಚಾನ್ಸರಿ ವಿದ್ಯಾರ್ಥಿನಿಲಯಗಳು; ಹಿಂದೆ ಲಂಡನ್ನಿನಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ವಾಸಿಸುತ್ತಿದ್ದ ವಿದ್ಯಾರ್ಥಿನಿಲಯದ ಕಟ್ಟಡಗಳು; (ಹಿಂದೆ ಲಂಡನ್ನಿನಲ್ಲಿದ್ದ) ವಕೀಲಿ ವಿದ್ಯಾರ್ಥಿ ಮಂದಿರಗಳು.
innuendo
ನಾಮವಾಚಕ
(ಸಾಮಾನ್ಯವಾಗಿ ಹೀನಾಯದ) ವ್ಯಂಗ್ಯೋಕ್ತಿ; ಕೊಂಕುಮಾತು; ಕೊಂಕುನುಡಿ; ವಕ್ರೋಕ್ತಿ; ಯಾಸೆಮಾತು: his innuendoes are more instructive than the words at length ಅವನ ಉದ್ದನೆಯ ಮಾತುಗಳಿಗಿಂತ ಅವನ ಕೊಂಕುನುಡಿಗಳು ಹೆಚ್ಚು ಹೇಳುತ್ತವೆ.
(ಸಾಮಾನ್ಯವಾಗಿ ಧ್ವನ್ಯಾತ್ಮಕವಾದ) ಹೇಳಿಕೆ; ಎರಡರ್ಥದ, ದ್ವಂದ್ವಾರ್ಥದ ಟೀಕೆ.