massacre (or slaughter) of the innocents (ಪಾರ್ಲಿಮೆಂಟಿನ ಅಶಿಷ್ಟ) ಕಾಯಿದೆಗಳ ಕೊಲೆ; (ಅಧಿವೇಶನದ ಅಂತ್ಯದಲ್ಲಿ ಕಾಲಾಭಾವದಿಂದ ಸಂಭವಿಸುವ) ಮಸೂದೆಗಳ ಪರಿತ್ಯಾಗ; ಕಾಯಿದೆಗಳನ್ನು ಕೈಬಿಡುವಿಕೆ.
ಕಳಂಕರಹಿತ ಯಾ ನಿಷ್ಕಳಂಕ – ವ್ಯಕ್ತಿ (ಮುಖ್ಯವಾಗಿ ಎಳೆಯ ಮಗು).
ಮುಗ್ಧ; ಅಮಾಯಕ; ಭೋಳೆ ವ್ಯಕ್ತಿ; ಸರಳ ಸ್ವಭಾವದವನು.
ಮೂಢ; ತಿಳಿಗೇಡಿ; ಗಾಂಪ; ದಡ್ಡ; ಹೆಡ್ಡ.
(ಬಹುವಚನದಲ್ಲಿ) ಮುಗ್ಧಶಿಶುಗಳು; ಅಮಾಯಕ ಮಕ್ಕಳು; ಏಸು ಹುಟ್ಟಿದ ಅನಂತರ, ಹೆರಡ್ ಎಂಬ ಕ್ರೂರ ರಾಜನು ಕೊಂದ ಕೂಸುಗಳು.
innocently
ಕ್ರಿಯಾವಿಶೇಷಣ
ಪಾಪರಹಿತವಾಗಿ; ನಿಷ್ಕಳಂಕ ರೀತಿಯಲ್ಲಿ.
ದುರುದ್ದೇಶವಿಲ್ಲದೆ.
ನಿರ್ದೋಷಿಯಾಗಿ; ನಿರಪರಾಧಿಯಾಗಿ.
ಕೆಡುಕು ಮಾಡದೆ; ಅಪಾಯಮಾಡುವ ಉದ್ದೇಶವಿಲ್ಲದೆ.
ಸರಳವಾಗಿ; ಮುಗ್ಧವಾಗಿ; ನಿಷ್ಕಪಟವಾಗಿ; ಕೃತ್ರಿಮವರಿಯದಂತೆ.
ಅರಿಯದೆ; ಅಜ್ಞಾನದಿಂದ; ತಿಳಿವಳಿಕೆಯಿಲ್ಲದೆ.
Innocents' Day
ನಾಮವಾಚಕ
ಪದಗುಚ್ಛ
ಮುಗ್ಧರ ದಿನ; ಡಿಸೆಂಬರ್ 28; ಹಸುಳೆಗಳ ದಿನಾಚರಣೆ; ಹೆರಡ್ ದೊರೆ ಕೊಲ್ಲಿಸಿದ ಮಕ್ಕಳ ಸ್ಮರಣಾರ್ಥವಾಗಿ ನಡೆಸುವ ಆಚರಣೆ (ಮ್ಯಾಥ್ಯು ii, 16). Holy Innocent’s Day = Innocents’ Day.
innocuity
ನಾಮವಾಚಕ
(ಮುಖ್ಯವಾಗಿ ಹಾವುಗಳ ವಿಷಯದಲ್ಲಿ) ನಿರಪಾಯತೆ; ನಿರ್ಬಾಧಕತೆ; ಕೆಡುಕು ಮಾಡದಿರುವಿಕೆ; ಹಾನಿ ಮಾಡದ ಗುಣ.