logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inner-spring
ಗುಣವಾಚಕ
(ಅಮೆರಿಕನ್‍ ಪ್ರಯೋಗ) = interior-sprung.

innermost
ಗುಣವಾಚಕ
ಅಂತರಾಳದ; ಅಂತರತಮ; ಅತ್ಯಂತ ಒಳಗಿನ.

innermost
ನಾಮವಾಚಕ
ಅಂತರಾಳ; ಅತ್ಯಂತ ಒಳಗಿನ ಭಾಗ.

innervate
ಸಕರ್ಮಕ ಕ್ರಿಯಾಪದ
(ಅಂಗ ಮೊದಲಾದವಕ್ಕೆ) ನರನೀಡು; ನರ ಒದಗಿಸು; ನರಶಕ್ತಿಯನ್ನು ಒದಗಿಸು ಯಾ ನರಗಳನ್ನು ಜೋಡಿಸು.

innervation
ನಾಮವಾಚಕ
  • ನರ(ಶಕ್ತಿ)ದಾನ; ನರಗಳ ಜೋಡಣೆ; ನರಶಕ್ತಿಯನ್ನು ಯಾ ನರಗಳನ್ನು ಒದಗಿಸುವುದು.
  • ನರೋದ್ದೀಪನ; ಯಾವುದೇ ಅಂಗವನ್ನು ಅದರ ನರಗಳ ಮೂಲಕ ಉದ್ದೀಪನಗೊಳಿಸುವುದು.

  • innings
    ನಾಮವಾಚಕ
  • (ಕ್ರಿಕೆಟ್‍ ಮೊದಲಾದವಲ್ಲಿ) ಇನಿಂಗ್ಸು:
    1. (ಒಂದು ಪಕ್ಷವು ಆಡಿದ) ಆಟದ – ಸೂಳು, ಸರದಿ.
    2. ಒಂದು ಸರದಿಯ ಆಟ.
    3. ತನ್ನ ಸರದಿಯಲ್ಲಿ ಬ್ಯಾಟುಗಾರನು ಆಡಿದ ಆಟ.
  • (ರೂಪಕವಾಗಿ) (ರಾಜಕೀಯ ಪಕ್ಷ, ತತ್ತ್ವ, ವಾದ, ಮೊದಲಾದವುಗಳ) ಸರದಿ; ಅಧಿಕಾರಾವಧಿ; (ಪ್ರಾಬಲ್ಯ) ಕಾಲ; ದೆಶೆ; ಉಚ್ಛ್ರಾಯ; ಮೇಲುಗೈ: the new ideas of ‘peace and reform’ got their innings ‘ಶಾಂತಿ ಮತ್ತು ಸುಧಾರಣೆ’ ಎಂಬ ಹೊಸ ಭಾವನೆಗಳಿಗೆ ದೆಶೆಯೊದಗಿತು.
  • ಸಾಧನಕಾಲ; ಒಬ್ಬ ವ್ಯಕ್ತಿಯು ಯಾವುದನ್ನೇ ಸಾಧಿಸಬಹುದಾದ ಕಾಲ.
  • (ಆಡುಮಾತು) ಇನಿಂಗ್ಸು; ಒಬ್ಬನ ಆಯುರ್ದಾಯ; ಆಯುಸ್ಸು: had a good innings and died at 94 ಒಳ್ಳೆಯ ಆಯುಷ್ಮಂತನಾಗಿ 94ನೆ ವಯಸ್ಸಿನಲ್ಲಿ ತೀರಿಕೊಂಡ.

  • innkeeper
    ನಾಮವಾಚಕ
    ವಸತಿಗೃಹದ ಯಜಮಾನ; ಛತ್ರಗಾರ; ತಂಗುದಾಣದ ದಣಿ.

    innocence
    ನಾಮವಾಚಕ
  • ಪಾಪರಾಹಿತ್ಯ; ನಿಷ್ಕಳಂಕತೆ; ನೈತಿಕ ಪರಿಶುದ್ಧಿ.
  • ನಿರಪರಾಧಿತನ; ನಿರ್ದೋಷತೆ.
  • ಅಕೃತ್ರಿಮತೆ; ನಿಷ್ಕಪಟತೆ; ಮುಗ್ಧತೆ; ಋಜುತ್ವ; ಸರಳತೆ.
  • (ವಸ್ತುಗಳ ವಿಷಯದಲ್ಲಿ) ನಿರಪಾಯತೆ; ಕೆಡಕು ಮಾಡದಿರುವಿಕೆ; ಹಾನಿಮಾಡದ ಗುಣ.
  • ನಿಷ್ಕಳಂಕ, ಸರಳ, ಋಜು, ಅಕೃತ್ರಿಮ – ವ್ಯಕ್ತಿ ಯಾ ವಸ್ತು: take the jewels of this dead innocence ಸತ್ತುಹೋದ ಈ ನಿಷ್ಕಳಂಕ ವ್ಯಕ್ತಿಯ ಒಡವೆಗಳನ್ನು ತೆಗೆದುಕೊ.
  • ಅಜ್ಞಾನ; ಮುಗ್ಧತೆ; ಪೆದ್ದುತನ; ತಿಳಿವಳಿಕೆಯಿಲ್ಲದಿರುವಿಕೆ; ಅರಿವಿಲ್ಲದಿರುವಿಕೆ.
  • ಮುಗ್ಧತೆ ಸೋಗು; ಋಜುತ್ವದ ವೇಷ; ಅಕೃತ್ರಿಮವೆಂದು ತೋರ್ಪಡಿಸಿಕೊಳ್ಳುವಿಕೆ; ನಿಷ್ಕಪಟತೆಯ ನಟನೆ.

  • innocency
    ನಾಮವಾಚಕ
    = innocence.

    innocent
    ಗುಣವಾಚಕ
  • ಪಾಪರಹಿತ; ಪಾಪವರಿಯದ; ನಿಷ್ಕಳಂಕ; ಪರಿಶುದ್ಧ; ಪಾಪ ಯಾ ನೈತಿಕ ದೋಷವಿಲ್ಲದ: God made man innocent ಭಗವಂತ ಮಾನವನನ್ನು ಪಾಪರಹಿತನನ್ನಾಗಿ ಸೃಷ್ಟಿಸಿದನು.
  • ದುರುದ್ದೇಶರಹಿತ; ಕೆಟ್ಟ ಉದ್ದೇಶದಿಂದ ಕೂಡಿರದ ಯಾ ಮಾಡಿರದ: innocent misrepresentation ದುರುದ್ದೇಶವಿಲ್ಲದ ತಪ್ಪುನಿರೂಪಣೆ.
  • (ಅಪರಾಧ ಮೊದಲಾದವುಗಳ ವಿಷಯದಲ್ಲಿ) ತಪ್ಪುಮಾಡದ; ತಪ್ಪಿತಸ್ಥನಲ್ಲದ; ನಿರಪರಾಧಿಯಾದ: he was innocent of the crime ಅವನು ಅಪರಾಧವನ್ನು ಮಾಡಿರಲಿಲ್ಲ.
  • (ಆಡುಮಾತು) ಇಲ್ಲದ; ರಹಿತ; ಹೊಂದಿರದ: windows innocent of glass ಗಾಜಿಲ್ಲದ ಕಿಟಕಿಗಳು.
  • ಸರಳ; ಮೊದ್ದು; ನಿಷ್ಕಪಟ; ಅಮಾಯಕ; ಮುಗ್ಧ; ಕೃತ್ರಿಮವರಿಯದ: for all she looks innocent, she is no fool ಅವಳು ಎಷ್ಟೇ ಮೊದ್ದಾಗಿ ಕಂಡರೂ ಅವಳು ಮೂರ್ಖಳಲ್ಲ.
  • ನಿರುಪದ್ರವಿ; ಕೆಡುಕು ಮಾಡದ; ತೊಂದರೆ ಮಾಡದ; ಹಾನಿತರದ; ಅಪಾಯಕರವಲ್ಲದ; ನಿರಪಾಯದ: innocent amusements ಕೆಡುಕುಮಾಡದ ವಿನೋದಗಳು.
  • ನಿಷ್ಕಪಟಿಯಂತೆ ನಟಿಸುವ; ಮುಗ್ಧನಂತೆ ವರ್ತಿಸುವ.


  • logo