logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inner
ಗುಣವಾಚಕ
  • ಒಳಗಿನ; ಒಳಗಡೆಯ; ಆಂತರ; ಆಂತರಿಕ: the inner compartment ಒಳಗಿನ ಅರೆ.
  • (ಆಲೋಚನೆಗಳು, ಭಾವನೆಗಳು, ಮೊದಲಾದವುಗಳ ವಿಷಯದಲ್ಲಿ) ಅಂತರಾಳದ; ಗಾಢ; ಗಹನವಾದ; ಒಳಗಿನ; ನಿಗೂಢವಾದ.

  • inner
    ನಾಮವಾಚಕ
  • (ಗುರಿಹಲಗೆಯ) ಗುರಿ ಕಣ್ಣಿನ – ಹೊರಸುತ್ತು, ಹೊರವಲಯ; ಗುರಿಕಣ್ಣಿನ ಸುತ್ತಲಿನ ಹೊರಭಾಗ.
  • (ಗುರಿಕಣ್ಣಿನ) ಹೊರಸುತ್ತಿಗೆ ಹೊಡೆದ ಗುಂಡು.

  • inner bar
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಇತರ ಬ್ಯಾರಿಸ್ಟರುಗಳಿಗಿಂತ ಹೆಚ್ಚಿನ ಅಧಿಕಾರವುಳ್ಳ, ಇಂಗ್ಲೆಂಡಿನ) ಸರ್ಕಾರಿ ವಕೀಲ (ಸಾಮೂಹಿಕವಾಗಿ).

    inner city
    ನಾಮವಾಚಕ
    ಒಳನಗರ; ನಗರಮಧ್ಯಪ್ರದೇಶ; ಒಂದು ನಗರದ ಮಧ್ಯದಲ್ಲಿರುವ, ಅತ್ಯಂತ ಜನ ನಿಬಿಡವಾದ ಪ್ರದೇಶ, ಭಾಗ.

    inner man
    ನಾಮವಾಚಕ
  • ಅಂತರಾತ್ಮ; ಮನುಷ್ಯನ ಆತ್ಮ ಯಾ ಮನಸ್ಸು.
  • (ಹಾಸ್ಯ ಪ್ರಯೋಗ) ಹೊಟ್ಟೆ: refreshed his inner man ತನ್ನ ಅಂತರಾತ್ಮವನ್ನು ತಣಿಸಿಕೊಂಡ; ತನ್ನ ಹೊಟ್ಟೆ ತಣಿಸಿಕೊಂಡ.

  • inner space
    ನಾಮವಾಚಕ
  • ಅಂತರಾಕಾಶ; ಒಳಾಗಸ; ಒಳಾಕಾಶ:
    1. ಭೂಮಿಯ ಮೇಲ್ಮೈಗೂ ಬಾಹ್ಯಾಕಾಶಕ್ಕೂ ನಡುವೆ ಇರುವ ಜಾಗ.
    2. ಸಮುದ್ರದ ಮೇಲ್ಮೈ ಕೆಳಗಿನ ಭಾಗ.
  • ಅಪ್ರಜ್ಞಸ್ತರ; ಸಾಧಾರಣವಾಗಿ ಪ್ರಜ್ಞೆಗೆ ಸಿಲುಕದಿರುವ, ಮನಸ್ಸಿನ ಯಾ ವ್ಯಕ್ತಿತ್ವದ ಒಂದು ಭಾಗ.

  • Inner Temple
    ನಾಮವಾಚಕ
    ಇನರ್‍ ಟೆಂಪ್‍ಲ್‍; ಲಂಡನ್ನಿನ ‘ದಿ ಟೆಂಪಲ್‍’ ನಿವೇಶನದಲ್ಲಿರುವ ಎರಡು ನ್ಯಾಯವಾದಿ ಸಂಸ್ಥೆಗಳಲ್ಲೊಂದು.

    inner tube
    ನಾಮವಾಚಕ
    ಒಳಟ್ಯೂಬು; ಟೈರಿನ ಒಳಗಡೆ ಇರುವ ಗಾಳಿತುಂಬುವ ಪ್ರತ್ಯೇಕ ರಬ್ಬರ್‍ ಟ್ಯೂಬು.

    inner woman
    ನಾಮವಾಚಕ
    = inner man.

    inner-directed
    ಗುಣವಾಚಕ
    (ಮನಶ್ಶಾಸ್ತ್ರ) ಅಂತರ್ನಿರ್ದೇಶಿತ; ಬಾಲ್ಯದಲ್ಲಿ ರೂಪಿಸಿಕೊಂಡ ಆದರ್ಶಗಳು, ಮೌಲ್ಯಗಳಿಂದ ನಿರ್ದೇಶಿತವಾದ.


    logo