logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inlier
ನಾಮವಾಚಕ
(ಭೂವಿಜ್ಞಾನ) ಅಂತಶ್ಶಯ್ಯೆ; ಒಳಹಾಸು; ಒಳಪದರ; ಹೊಸದಾಗಿ ರೂಪುಗೊಂಡ ಶಿಲಾಸ್ತರಗಳಿಂದ ಸುತ್ತುವರಿದ ಯಾ ಆವೃತವಾದ ಯಾವುದೇ ಹಳೆಯ ಶಿಲಾಸ್ತರ ಇರುವ ಸ್ಥಳ; ಒಳಹಾಸಿನ ಜಾಗ, ಪ್ರದೇಶ.

inly
ಕ್ರಿಯಾವಿಶೇಷಣ
(ಕಾವ್ಯಪ್ರಯೋಗ)
  • ಒಳಗೇ; ಅಂತರಂಗದಲ್ಲಿ; ಹೃದಯದಲ್ಲಿ: inly envy their knowledge ಅವರ ತಿಳಿವಳಿಕೆ ಕಂಡು ಒಳಗೇ ಅಸೂಯೆ ಪಡುತ್ತಾರೆ.
  • ಆತ್ಮೀಯವಾಗಿ; ಚೆನ್ನಾಗಿ; ಪೂರ್ತಿಯಾಗಿ; ನಿಕಟವಾಗಿ: friends year by year more inly known ವರ್ಷದಿಂದ ವರ್ಷಕ್ಕೆ ಹೆಚ್ಚುಹೆಚ್ಚು ನಿಕಟವಾಗಿ ಗೊತ್ತಾದ ಸ್ನೇಹಿತರು.

  • inlying
    ಗುಣವಾಚಕ
    ಒಳಗಿರುವ; ಅಂತಸ್ಥ; ಅಂತರ್ನಿವಿಷ್ಟ; ಒಳ ನೆಲಸಿದ; ಒಂದು ಕೇಂದ್ರದ ಒಳಗೆ ಯಾ ಸಮೀಪದಲ್ಲಿ ಇರುವ.

    inmate
    ನಾಮವಾಚಕ
  • (ಮನೆ ಮೊದಲಾದವಲ್ಲಿ) ನೆಲಸಿರುವವನು; ನಿವಾಸಿ; ವಾಸಮಾಡುವವನು (ಮುಖ್ಯವಾಗಿ ಅಂಥ ಹಲವರಲ್ಲೊಬ್ಬ).
  • (ಈಗ ಸಾಮಾನ್ಯವಾಗಿ ಸಂಸ್ಥೆ, ಆಶ್ರಮ, ಆಸ್ಪತ್ರೆ, ರಕ್ಷಣಾವಲಯ, ಮೊದಲಾದವುಗಳ) ನಿವಾಸಿ.

  • inmost
    ಗುಣವಾಚಕ
  • ಅತ್ಯಂತ ಒಳಗಿನ; ತೀರ ಒಳಗಿರುವ; ಅಂತರಾಳದ; ಅಂತರತಮ: the inmost depths of the green glen ಹಸುರು ಕಣಿವೆಯ ಅತ್ಯಂತ ಒಳಗಿನ ಭಾಗಗಳು.
  • (ರೂಪಕವಾಗಿ) ಅಂತರಾಳದ; ಬಹಳ ಆಳವಾದ; ಅತ್ಯಂತ – ಗಾಢವಾದ, ನಿಕಟವಾದ; ತೀರ ಆತ್ಮೀಯ: inmost feelings ಅಂತರಾಳದ ಭಾವನೆಗಳು.

  • inn
    ನಾಮವಾಚಕ
  • (ಚರಿತ್ರೆ) (ಸಾಮಾನ್ಯವಾಗಿ ಸಣ್ಣ ನಗರದಲ್ಲಿ ಯಾ ಗ್ರಾಮಾಂತರ ಪ್ರದೇಶದಲ್ಲಿ) ಪ್ರವಾಸಿಗೃಹ; ಛತ್ರ; ತಂಗುದಾಣ; ವಸತಿಗೃಹ; ಪ್ರವಾಸಿಗಳಿಗೆ ವಸತಿ ಮೊದಲಾದವನ್ನು ಒದಗಿಸಿಕೊಡುವ ಮನೆ.
  • ಕುಡಿಯಲು ಮದ್ಯ ಮೊದಲಾದವನ್ನು ಕೊಟ್ಟು ಕೆಲವು ವೇಳೆ ವಸತಿಯನ್ನು ಒದಗಿಸಿಕೊಡುವ ಹೋಟೆಲು.

  • innards
    ನಾಮವಾಚಕ
    (ಬಹುವಚನ)
  • (ಆಡುಮಾತು) ಕರುಳು; ಅಂತ್ರ.
  • (ಯಾವುದೇ ಒಂದರ) ಒಳಭಾಗ.

  • innate
    ಗುಣವಾಚಕ
  • ಒಡಹುಟ್ಟಿದ; ಹುಟ್ಟಿನಿಂದ ಬಂದ; ಜನ್ಮಸಿದ್ಧ; ಸ್ವಾಭಾವಿಕ; ಸಹಜ: innate talent ಸಹಜ ಶಕ್ತಿ; ಹುಟ್ಟು ಸಾಮರ್ಥ್ಯ.
  • (ತತ್ತ್ವಶಾಸ್ತ್ರ) ಮನೋಜನ್ಯ; ಮನಸ್ಸಿನಲ್ಲಿ ಹುಟ್ಟುವ.

  • innately
    ಕ್ರಿಯಾವಿಶೇಷಣ
  • ಸ್ವಾಭಾವಿಕವಾಗಿ; ಸಹಜವಾಗಿ; ಜನ್ಮಸಿದ್ಧವಾಗಿ; ಹುಟ್ಟಿನಿಂದ ಬಂದ ರೀತಿಯಲ್ಲಿ.
  • (ತತ್ತ್ವಶಾಸ್ತ್ರ) ಮನೋಜನ್ಯವಾಗಿ.

  • innateness
    ನಾಮವಾಚಕ
  • ಸ್ವಾಭಾವಿಕತೆ; ಸಹಜತೆ; ಆಜನ್ಮಸಿದ್ಧತೆ; ಹುಟ್ಟಿನಿಂದ ಬಂದಿರುವಿಕೆ.
  • (ತತ್ತ್ವಶಾಸ್ತ್ರ) ಮನೋಜನ್ಯತೆ.


  • logo