logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inland
ಕ್ರಿಯಾವಿಶೇಷಣ
ನಾಡಿನೊಳಗೆ; ನಾಡಿನ ಒಳಭಾಗದಲ್ಲಿ; ಒಳನಾಡಿನಲ್ಲಿ; ಒಳನಾಡಿನ ಕಡೆಗೆ; ಅಂತರ್ದೇಶೀಯವಾಗಿ.

inland duty
ನಾಮವಾಚಕ
ಅಂತರ್ದೇಶೀಯ ಸುಂಕ, ತೆರಿಗೆ; ಒಳನಾಡ ಸುಂಕ; ದೇಶದ ಎಲ್ಲೆಯೊಳಗೆ ನಡೆಯುವ ವ್ಯಾಪಾರದ ಮೇಲೆ ವಿಧಿಸುವ ಸುಂಕ.

inland navigation
ನಾಮವಾಚಕ
ಒಳನಾಡ ನೀರು ಹಾದಿ; ಅಂತರ್ದೇಶೀಯ ಜಲಮಾರ್ಗ, ಜಲಯಾನ; ನದಿಗಳ ಯಾ ಕಾಲುವೆಗಳ ಮೂಲಕ ಒಳನಾಡಿನಲ್ಲಿನ ಸಂಚಾರ, ಯಾನ.

inland revenue
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಅಂತರ್ದೇಶೀಯ ಆದಾಯ; ಒಳನಾಡಿನ ಆದಾಯ; ಒಳದೇಶದ ಉತ್ಪತ್ತಿ, ಹುಟ್ಟುವಳಿ; ತೆರಿಗೆ, ಒಳಸುಂಕ, ಮೊದಲಾದವನ್ನೊಳಗೊಂಡ ಒಳದೇಶದ ಆದಾಯ.

inland revenue
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) (ಗ್ರೇಟ್‍ಬ್ರಿಟನ್‍ ಮತ್ತು ಉತ್ತರ ಐರ್ಲಂಡ್‍ಗಳಲ್ಲಿ) ಒಳನಾಡ ಆದಾಯದ ಸರ್ಕಾರಿ ವಿಭಾಗ; ಅಂತರ್ದೇಶೀಯ ಆದಾಯದ ಇಲಾಖೆ; ಒಳನಾಡಿನ ಆದಾಯವನ್ನು ನಿರ್ಧರಿಸುವ ಮತ್ತು ಅದನ್ನು ವಸೂಲು ಮಾಡುವ ಇಲಾಖೆ.

inlander
ನಾಮವಾಚಕ
ಒಳನಾಡಿಗ; ಒಳನಾಡು ನಿವಾಸಿ.

inlandish
ಗುಣವಾಚಕ
  • ಒಳನಾಡಿನ; ಅಂತರ್ದೇಶಿಯ; ಒಳನಾಡಿಗೆ ಸಂಬಂಧಪಟ್ಟ.
  • ಒಳನಾಡಿನಂಥ.
  • ಒಳನಾಡಿನ ಯಾ ಒಳನಾಡಿಗನ – ಸ್ವಭಾವದ, ರೀತಿಯ; ಅಂತರ್ದೇಶೀಯ – ಗುಣದ, ಸ್ವಭಾವದ.

  • inlay
    ಸಕರ್ಮಕ ಕ್ರಿಯಾಪದ
  • (ಎರಡು ವಸ್ತುಗಳ ಮೇಲ್ಮೈಯೂ ಒಂದೇ ಸಮನಾಗಿರುವಂತೆ ಒಂದು ವಸ್ತುವನ್ನು ಮತ್ತೊಂದರಲ್ಲಿ) ಹುದುಗಿಸು; ಹದಿ; ಮೆಟ್ಟು; ಕೂರಿಸು; ಕೊರೆದು ಹುಗಿ; ಕೊರೆದಿಡು: a cave inlaid in a precipice ಪ್ರಪಾತದಲ್ಲಿ ಹುದುಗಿರುವ ಗುಹೆ.
  • (ಬೇರೊಂದು ವಸ್ತುವನ್ನು ಹುದುಗಿಸಿ) ಅಲಂಕರಿಸು; ಕೂರಿಸು; ಖಚಿತಗೊಳಿಸು; ಕೆತ್ತಿಕೂಡಿಸು; ಕೊರೆದು ಇಡು; ಖಚಿತಮಾಡು: ivory inlaid with gold ಚಿನ್ನವನ್ನು ಹುದುಗಿಸಿದ ದಂತ.
  • (ದೊಡ್ಡ ದಪ್ಪ ಪುಟದಲ್ಲಿ ಕತ್ತರಿಸಿದ ಜಾಗದಲ್ಲಿ ಪುಟ, ಫಲಕ ಯಾ ಚಿತ್ರಕೊರೆತವನ್ನು) ಹದ್ದಿಸು; ಒಳಸೇರಿಸು; ಒಳಜೋಡಿಸು; ಅಂತರ್ನಿವೇಶಿಸು.

  • inlay
    ನಾಮವಾಚಕ
  • ಕುಂದಣ; ಕೆತ್ತನೆ; ಕೆತ್ತನೆಯ ಕೆಲಸ.
  • ಕೆತ್ತನೆ ಮಾಡಿ ಕೂರಿಸಿದ ವಸ್ತು.
  • ಹಲ್ಲಿನ ಡೊಗರನ್ನು ತುಂಬಲು ಅದರ ಆಕಾರದಲ್ಲೇ ಮಾಡಿದ ವಸ್ತು; ಹಲ್ಲುಭರ್ತಿ.

  • inlet
    ನಾಮವಾಚಕ
  • ಖಾರಿ; ಕಡಲಚಾಚು; ಕಡಲಕೈ; ಕಡಲ ತೋಳು; ಸಮುದ್ರದ ಯಾ ಸರೋವರದ ಸಣ್ಣ ಒಳಜಾಡು.
  • ಹದ್ದಿಸಿದ ತುಂಡು; ಮುಖ್ಯವಾಗಿ ಉಡುಪು ತಯಾರಿಸುವಲ್ಲಿ, ಒಳ ಜೋಡಿಸಿದ ಚೂರು.
  • ಪ್ರವೇಶದ್ವಾರ; ಒಳಕ್ಕೆ ಹೋಗುವ ದಾರಿ: oil inlets ತೈಲ ದ್ವಾರಗಳು.


  • logo