logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zygodactyl
ಗುಣವಾಚಕ
(ಹಕ್ಕಿಯ ವಿಷಯದಲ್ಲಿ) ಜೋಡಿ ಬೆರಳಿರುವ; ಎರಡು ಹಿಂದಕ್ಕೂ ಎರಡು ಮುಂದಕ್ಕೂ ಚಾಚಿದಂತೆ ಜೋಡಿಬೆರಳುಗಳಿರುವ.

zygodactyl
ನಾಮವಾಚಕ
ಯುಗ್ಮಾಂಗುಲಿ; (ಎರಡು ಹಿಂದಕ್ಕೂ ಎರಡು ಮುಂದಕ್ಕೂ ಚಾಚಿದಂತೆ) ಜೋಡಿಬೆರಳುಗಳಿರುವ ಹಕ್ಕಿ.

zygodactylous
ಗುಣವಾಚಕ
= 1zygodactyl.

zygoma
ನಾಮವಾಚಕ
(ಬಹುವಚನ zygomata ಉಚ್ಚಾರಣೆ ಸೆ(ಸಿ)ಗೋಮಟ). (ಅಂಗರಚನಾಶಾಸ್ತ್ರ) ಸೆ ಗೋಮ; ಗಂಡಾಸ್ಥಿ:
  • ಕೆನ್ನೆ ಮೂಳೆ ಕಮಾನಿನ ತೆಳುವಾದ ಚಾಚಿಕೆ.
  • ಕೆನ್ನೆ ಮೂಳೆ ಕಮಾನು.
  • ಕೆನ್ನೆ ಮೂಳೆ.

  • zygomatic
    ಗುಣವಾಚಕ
    ಕೆನ್ನೆಮೂಳೆಯ ಯಾ ಕೆನ್ನೆಮೂಳೆ ಕಮಾನಿನ.

    zygomatic arch
    ನಾಮವಾಚಕ
    ಗಂಡಚಾಪ; ಕೆನ್ನೆಮೂಳೆ ಕಮಾನು; ಮುಖದ ಪಕ್ಕದ ಎಲುಬು ಮತ್ತು ಕಣ್ಣುಕುಳಿಯ ಕೆಳಗಿನ ಎಲುಬು ಸೇರಿ ರೂಪಿಸುವ ಕಮಾನು.

    zygomatic bone
    ನಾಮವಾಚಕ
    ಕೆನ್ನೆಮೂಳೆ.

    zygomorphic
    ಗುಣವಾಚಕ
    ಯುಗ್ಮರೂಪಿ; (ಹೂವಿನ ವಿಷಯದಲ್ಲಿ) ಸಮ್ಮಿತಿತಲದ ನೆರವಿನಿಂದ ಎರಡು ಒಂದೇ ತೆರನಾದ ಭಾಗಗಳಾಗಿ ವಿಭಾಗವಾಗುವ.

    zygomorphous
    ಗುಣವಾಚಕ
    = zygomorphic.

    zygosis
    ನಾಮವಾಚಕ
    (ಬಹುವಚನ zygoses ಉಚ್ಚಾರಣೆ ಸೆ(ಸಿ)ಗೋಸೀ). (ಜೀವವಿಜ್ಞಾನ) ಕಣಸಂಯೋಗ; (ಪುನರುತ್ಪತ್ತಿಗಾಗಿ) ಎರಡು ಜೀವಕಣಗಳ ಸಂಯೋಗ.


    logo