logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tailoring
ನಾಮವಾಚಕ
  • ಹೊಲಿಗೆ ಕೆಲಸ; ದರ್ಜಿ ಕೆಲಸ.
  • ಹೊಂದಾವಣೆ; ಸಂದರ್ಭಕ್ಕೆ, ಉದ್ದೇಶಕ್ಕೆ–ಹೊಂದಿಸುವುದು, ಹೊಂದಿಕೊಳ್ಳುವಂತೆ ಮಾಡುವುದು.

  • tailpiece
    ನಾಮವಾಚಕ
  • ಮುಕ್ತಾಯ ಚಿತ್ರ; ಪುಸ್ತಕದಲ್ಲಿ ಅಧ್ಯಾಯ ಮೊದಲಾದವುಗಳ ಕೊನೆಯಲ್ಲಿನ ಖಾಲಿಜಾಗದಲ್ಲಿ ಹಾಕುವ ಅಲಂಕಾರದ ವಿನ್ಯಾಸ, ಚಿತ್ರ, ಮೊದಲಾದವು.
  • (ಕೆಲವು ಸಂಗೀತ ವಾದ್ಯಗಳಲ್ಲಿ) ತಂತಿ ಬಿಗಿಯುವ ಕೆಳತುಂಡು; ತಂತಿಗಳ ಕೆಳತುದಿಯನ್ನು ಬಿಗಿಸಿರುವ, ತ್ರಿಕೋನಾಕಾರದ ಮರದ ತುಂಡು.
  • (ಯಾವುದೇ ಒಂದರ ಕೊನೆಯಲ್ಲಿ ಸೇರಿಸಿದ) ಅನುಬಂಧ; ಪರಿಶಿಷ್ಟ.
  • (ಒಂದು ವಿಷಯದ, ವಸ್ತುವಿನ) ಕೊನೆ, ಅಂತ್ಯ–ಭಾಗ; ಅಂತಿಮ ಭಾಗ.

  • tailpipe
    ನಾಮವಾಚಕ
    ನಿಷ್ಕಾಸನಾಳ; ಮೋಟಾರು ವಾಹನಗಳ ಹೊಗೆ ಮೊದಲಾದವನ್ನು ಹೊರಹಾಕುವ ಹಿಂಗೊಳವೆಯ ತುದಿಭಾಗ.

    tailplane
    ನಾಮವಾಚಕ
    (ವಿಮಾನದ ಹಿಂಭಾಗದಲ್ಲಿ ಜೋಡಿಸಿರುವ, ವಿಮಾನದ ಸಮತೋಲನ ಕಾಪಾಡುವ) ಮಟ್ಟಸ ವಾಯುಫಲಕ; ವಿಮಾನದ ಹಿಂಗೋಟಿನ, ಬಾಲದ–ವಾಯುಫಲಕ.

    tailspin
    ನಾಮವಾಚಕ
  • ವಿಮಾನ ಗಿರಕಿ (ಹೊಡೆಯುತ್ತ ಕೆಳಗಿಳಿಯುವುದು).
  • ದಿಗಿಲು, ತೀವ್ರ ಭಯ, ಗಾಬರಿ ಯಾ ಅವ್ಯವಸ್ಥೆ.

  • tailspin
    ಅಕರ್ಮಕ ಕ್ರಿಯಾಪದ
    ಭೂತರೂಪ ಮತ್ತು ಭೂತಕೃದಂತ tailspun).(ವಿಮಾನದ ವಿಷಯದಲ್ಲಿ) ಹಿಂಭಾಗ ಗಿರಕಿಹೊಡೆ.

    tailstock
    ನಾಮವಾಚಕ
    ಸ್ಥಿರವಾಗಿ ನೆಟ್ಟ ಕದರಣಿಗೆಯನ್ನು ಬೇಕಾದಂತೆ ಸರಿಹೊಂದಿಸುವ ಚರಕಿಯಂತ್ರದ ಭಾಗ.

    taint
    ನಾಮವಾಚಕ
  • ಕಲೆ; ಕರೆ; ಮಾಲಿನ್ಯ; ಕಳಂಕ; ದೋಷ: the moral taint had spread among all classes ನೈತಿಕ ಕಳಂಕ ಎಲ್ಲಾ ವರ್ಗಗಳಲ್ಲೂ ಹರಡಿತ್ತು.
  • ಕೊಳೆತ, ಕೆಟ್ಟಿರುವ, ಭ್ರಷ್ಟ–ಸ್ಥಿತಿ.
  • ಸೋಂಕು.

  • taint
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ರೋಗ ಹಿಡಿಸು; ಸೋಂಕು ಹಚ್ಚಿಸು.
  • ಕಳಂಕಗೊಳಿಸು; ಮಲಿನಗೊಳಿಸು.
  • ಕೊಳೆಯಿಸು: tainted meat ಕೊಳೆತ ಮಾಂಸ.

  • taintless
    ಗುಣವಾಚಕ
    ನಿಷ್ಕಳಂಕ; ಕಳಂಕರಹಿತ; ನಿರ್ದುಷ್ಟ.


    logo