logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obsequious
ಗುಣವಾಚಕ
  • ದಾಸ್ಯಭಾವದ; ಗುಲಾಮೀ ಮನೋವೃತ್ತಿಯ; ದಾಸಾನುದಾಸನಾಗಿ ವರ್ತಿಸುವ; ಅಂಗಲಾಚುವ; ಹಲ್ಲುಗಿಂಜುವ; ಅತಿಯಾಗಿ ಅನುಸರಿಸುವ.
  • (ಪ್ರಾಚೀನ ಪ್ರಯೋಗ) ವಿಧೇಯ ಕರ್ತವ್ಯಪರ; ಕರ್ತವ್ಯ ನಿಷ್ಠ.

  • obsequiously
    ಕ್ರಿಯಾವಿಶೇಷಣ
    ಗುಲಾಮನಂತೆ; ದಾಸಾನುದಾಸನಾಗಿ; ಹಲ್ಲು ಗಿಂಜುತ್ತ; ಅಂಗಲಾಚುತ್ತಾ; ಅತಿಯಾಗಿ ಅನುಸರಿಸುತ್ತ; ಮುಖಸ್ತುತಿ ಮೊದಲಾದವುಗಳಿಂದ ಮೆಚ್ಚಿಸುತ್ತ.

    obsequiousness
    ನಾಮವಾಚಕ
    ದಾಸ್ಯಭಾವ; ಗುಲಾಮೀ ಮನೋವೃತ್ತಿ; ದಾಸಾನುದಾಸನಂತೆ ವರ್ತಿಸುವುದು; ಹಲ್ಲು ಗಿಂಜುವುದು; ಅಂಗಲಾಚುವಿಕೆ; ಮಿತಿಮೀರಿದ ಅನುಸರಣೆ.

    observable
    ಗುಣವಾಚಕ
  • ನಡೆಸಬೇಕಾದ; ಆಚರಿಸಬೇಕಾದ; ಪಾಲಿಸಬೇಕಾದ; ಆಚರಣೀಯ; ಅನುಷ್ಠೇಯ; ಪಾಲನೀಯ.
  • ಆಚರಿಸಬಹುದಾದ; ಪಾಲಿಸಬಹುದಾದ.
  • ವೀಕ್ಷಣೀಯ; ವೀಕ್ಷಿಸಬಹುದಾದ.
  • ದೃಶ್ಯ; ದೃಷ್ಟಿಗೋಚರ; ಇಂದ್ರಿಯಗೋಚರ.
  • ದರ್ಶನೀಯ; ಪ್ರೇಕ್ಷಣೀಯ; ದ್ರಷ್ಟವ್ಯ; ನೋಡಲು–ತಕ್ಕ,ಯೋಗ್ಯವಾದ.

  • observably
    ಕ್ರಿಯಾವಿಶೇಷಣ
    ದೃಶ್ಯವಾಗಿ; ದೃಷ್ಟಿಗೋಚರವಾಗಿ; ಇಂದ್ರಿಯಗೋಚರವಾಗಿ.

    observance
    ನಾಮವಾಚಕ
  • (ಶಾಸನ, ಕರ್ತವ್ಯ, ಪದ್ಧತಿ, ಮತೀಯ ಕಟ್ಟಳೆ, ವಿಧಿ, ಆಚರಣೆ, ಮೊದಲಾದವುಗಳ) ಆಚರಣೆ; ಪಾಲನೆ; ಅನುಸರಣೆ; ಅನುಷ್ಠಾನ.
  • (ಧಾರ್ಮಿಕವಾದ ಯಾ ಶಾಸ್ತ್ರೋಕ್ತವಾದ) ಕರ್ಮಾಚರಣೆ; ಮತಾಚಾರ; ಸಾಂಪ್ರದಾಯಿಕ ಕರ್ಮಾನುಷ್ಠಾನ.
  • (ಯಾವುದೇ ಧಾರ್ಮಿಕ ಪಂಥದ) ನಿಯಮ; ಕಟ್ಟಳೆ; ಆಚಾರವಿಧಿ; ಸಂಪ್ರದಾಯ.
  • (ಪ್ರಾಚೀನ ಪ್ರಯೋಗ) ಮರ್ಯಾದೆ, ಮನ್ನಣೆ, ಗೌರವ–ತೋರಿಸುವುದು.

  • observancy
    ನಾಮವಾಚಕ
    = observance.

    observant
    ಗುಣವಾಚಕ
  • (ಶಾಸನ, ಕರ್ತವ್ಯ, ಪದ್ಧತಿ, ಮತೀಯ ಕರ್ಮಗಳು ಮೊದಲಾದವುಗಳನ್ನು) ಪಾಲಿಸುವ; ಅನುಸರಿಸುವ; ಶ್ರದ್ಧೆಯಿಂದ ಆಚರಿಸುವ, ನಡೆಸುವ.
  • (ಮುಖ್ಯವಾಗಿ ಧಾರ್ಮಿಕ ಆಚರಣೆಗಳಿಗೆ) ಲಕ್ಷ್ಯಕೊಡುವ; ಶ್ರದ್ಧೆಯಿಂದ ಗಮನ ಕೊಡುವ: an observant few ಧಾರ್ಮಿಕ ಆಚರಣೆಗಳ ಕೆಲ ಶ್ರದ್ಧಾಳುಗಳು.

  • observant
    ನಾಮವಾಚಕ
    ಧಾರ್ಮಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹ್ರ್ಯಾನ್ಸಿಸ್ಕನ್‍ ಪಂಥದ ಒಂದು ಶಾಖೆಯ ಸದಸ್ಯ.

    observantly
    ಕ್ರಿಯಾವಿಶೇಷಣ
    ಗಮನವಿಟ್ಟು; ಲಕ್ಷ್ಯಪೂರ್ವಕವಾಗಿ; ಜಾಗರೂಕನಾಗಿ; ಸಾವಧಾನದಿಂದ.


    logo