ಮ್ಯಾಗಲ್‍ಮೋಸಿಯನ್; (ಡೆನ್ಮಾರ್ಕಿನ ಮೆಗಲ್ ಮೋಸ್ ಎಂಬಲ್ಲಿ ದೊರೆತ ವಸ್ತುಗಳು ಸೂಚಿಸುವ) ಪುರಾತನ ಯೂರೋಪಿನ ಮೆಸೊಲಿಥಿಕ್ ಸಂಸ್ಕೃತಿಯ ಯಾ ಸಂಸ್ಕೃತಿಗೆ ಸೇರಿದ.
Maglemosian
ನಾಮವಾಚಕ
ಮ್ಯಾಗಲ್‍ಮೋಸಿಯನ್; (ಡೆನ್ಮಾರ್ಕಿನ ಮೆಗಲ್ ಮೋಸ್ ಎಂಬಲ್ಲಿ ದೊರೆತ, ಮೂಳೆಯ ಮತ್ತು ಕಲ್ಲಿನ ಉಪಕರಣಗಳು ಸೂಚಿಸುವ) ಪುರಾತನ ಯೂರೋಪಿನ ಮೆಸೂಲಿಥಿಕ್ ಸಂಸ್ಕೃತಿ.
maglev
ನಾಮವಾಚಕ
(ಸಾಮಾನ್ಯವಾಗಿ ವಿಶೇಷಣವಾಗಿ ಪ್ರಯೋಗ) ಮ್ಯಾಗ್ಲೆವ್; ಕಾಂತಕ್ಷೇತ್ರದ ಪ್ರಭಾವದಿಂದ ರೈಲುಜಾಡುಗಳ ಮೇಲೆ ಸ್ವಲ್ಪ ಎತ್ತರದಲ್ಲಿ ರೈಲು ಸಾಗುವಂತೆ ಏರ್ಪಡಿಸುವ ವ್ಯವಸ್ಥೆ (magnetic levitation ಎಂಬುದರ ಹ್ರಸ್ವರೂಪ).
magma
ನಾಮವಾಚಕ
ಮ್ಯಾಗ್ಮ:
ಖನಿಜ ಪದಾರ್ಥಗಳ ಯಾ ಕಾರ್ಬನಿಕ ಪದಾರ್ಥಗಳ ಚರಟದಂತಿರುವ ಮಿಶ್ರಣ.
ಶಿಲಾಪಾಕ; ಶಿಲಾದ್ರವ; ಶಿಲಾರಸ; ಆರಿದ ಮೇಲೆ ಅಗ್ನಿಶಿಲೆಯಾಗಿ ಮಾರ್ಪಡುವ, ಶಿಲೆಯ ದ್ರವ ಯಾ ಅರೆದ್ರವ.
magmatic
ಗುಣವಾಚಕ
ಮ್ಯಾಗ್ಮದ ಯಾ ಅದಕ್ಕೆ ಸಂಬಂಧಿಸಿದ ಯಾ ಅದರಿಂದ ಜನ್ಯವಾದ:
ಖನಿಜ ಪದಾರ್ಥಗಳ ಯಾ ಕಾರ್ಬನಿಕ ಪದಾರ್ಥಗಳ ಚರಟದಂತಿರುವ ಮಿಶ್ರಣದ ಯಾ ಅದಕ್ಕೆ ಸಂಬಂಧಿಸಿದ ಯಾ ಅದರಿಂದಾದ.
ಶಿಲಾಪಾಕದ, ಶಿಲಾರಸದ ಯಾ ಅದಕ್ಕೆ ಸಂಬಂಧಿಸಿದ.
Magna Carta
ನಾಮವಾಚಕ
ಮ್ಯಾಗ್ನಕಾರ್ಟ (ಎಂಬ ಮಹಾಸ್ವಾತಂತ್ರ್ಯ ಶಾಸನ); (1215ರಲ್ಲಿ ಇಂಗ್ಲೆಂಡಿನ ಜಾನ್ ದೊರೆಯಿಂದ ಇಂಗ್ಲಿಷ್ ಪ್ರಜೆಗಳು ಪಡೆದುಕೊಂಡ) ವೈಯಕ್ತಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಮಹಾಸನ್ನದು.
ಮ್ಯಾಗ್ನಕಾರ್ಟದಂಥ ಯಾವುದೇ ಹಕ್ಕುಗಳ ದಾಖಲೆ , ಸನ್ನದು, ಶಾಸನ.
Magna Charta
ನಾಮವಾಚಕ
= Magna Carta.
magnalium
ನಾಮವಾಚಕ
ಮ್ಯಾಗ್ನೇಲಿಯಮ್; ಹಗುರವಾದ ಆದರೆ ದೃಢವಾದ, ಮೆಗ್ನೀಸಿಯಂ ಅಲ್ಯೂಮಿನಿಯಮ್ ಮಿಶ್ರ ಲೋಹ.